ನಾವು ಪ್ರತಿದಾಳಿಗೆ ಸಿದ್ಧ ಪಾಕ್ ಪ್ರಧಾನಿ ಇಮ್ರಾನ್ ಖಾನ್

 We

19-02-2019

ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ಬಳಿಕ  ಪಾಕಿಸ್ತಾನದ ವಿರುದ್ಧ ವಿಶ್ವದ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಪಾಕಿಸ್ತಾನ ಇಂಥಹ ವಿಧ್ವಂಸಕ ಕೃತ್ಯಗಳನ್ನು ನಿಲ್ಲಿಸಬೇಕು ಎಂಬ ಆಗ್ರಹವೂ ವ್ಯಕ್ತವಾಗುತ್ತಿದೆ. ಆದರೆ ಇಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಉಲ್ಟಾ ಹೊಡೆದಿದ್ದು, ಪುಲ್ವಾಮಾ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇದೆ ಎಂದಿರುವ ಭಾರತ ಇದಕ್ಕೆ  ಸಾಕ್ಷಿ ಒದಗಿಸಲಿ ಎಂದು ಸವಾಲು ಹಾಕಿದ್ದಾರೆ. 

ಪಾಕಿಸ್ತಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಇಮ್ರಾನ್ ಖಾನ್, ಪುಲ್ವಾಮಾ ದಾಳಿಯಲ್ಲಿ  ಪಾಕಿಸ್ತಾನದ ಕೈವಾಡ ಇದೆ ಎಂದು ಭಾರತ ಆರೋಪಿಸಿದೆ. ಆದರೆ ನಾವು ನಮ್ಮ ನೆಲದಿಂದ ಯಾರೂ ಹಿಂಸೆಯನ್ನು ಹರಡಬಾರದು ಎಂಬ ಹಿತಾಸಕ್ತಿ ಹೊಂದಿದ್ದೇವೆ. ನೀವು ದಾಳಿಯಲ್ಲಿ ಪಾಕ್ ಕೈವಾಡದ ಬಗ್ಗೆ ಸಾಕ್ಷಿ ಒದಗಿಸಿ, ನಾವು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ವ್ಯಂಗ್ಯವಾಡಿದ್ದಾರೆ. 

ನಾವು ಭಯೋತ್ಪಾದನೆ ಕುರಿತು ಮಾತುಕತೆಗೆ ಸಿದ್ಧರಿದ್ದೇವೆ ಎಂದಿರುವ ಇಮ್ರಾನ್ ಖಾನ್, ಯಾವುದೇ ರೀತಿಯ ತನಿಖೆಗೂ ಬದ್ಧರಾಗಿದ್ದೇವೆ. ಸೇನೆಯ ಬಳಕೆ ಒತ್ತಡದಿಂದ ಯಾವುದೆ ಸಮಸ್ಯೆ  ಬಗೆಹರಿಯುವುದಿಲ್ಲ. ಈ ಬಗ್ಗೆ ಭಾರತ ಚರ್ಚಿಸುವ ಅಗತ್ಯವಿದೆ ಎಂದು ಅಭಿಪ್ರಾಯಿಸಿದ್ದಾರೆ. 

ಇದೇ ವೇಳೆ ಪ್ರತಿಕಾರದ ಬಗ್ಗೆ ಮಾತನಾಡಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ನಾವು ಭಯೋತ್ಪಾದನೆಗೆ ವಿರುದ್ಧವಾಗಿದ್ದೇವೆ. ಆದರೆ ಪ್ರತಿಕಾರದ ವಿಚಾರ ಪ್ರಸ್ತಾಪವಾದರೆ ಪಾಕಿಸ್ತಾನವೂ ಪ್ರತಿಕಾರ ತೀರಿಸಿಕೊಳ್ಳಲು ಶಕ್ತವಾಗಿದೆ. ನಾವು ಖಂಡಿತಾ ಪ್ರತಿದಾಳಿ ಮಾಡುತ್ತೇವೆ ಎಂದಿದ್ದಾರೆ. ಇಮ್ರಾನ್ ಖಾನ್ ಈ ಸುದ್ದಿಗೋಷ್ಠಿ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಬುದ್ಧಿಯನ್ನು ಸಾಬೀತುಪಡಿಸಿದ್ದು, ಭಾರತ ಇದಕ್ಕೆ ಹೇಗೆ ಉತ್ತರಿಸಲಿದೆ ಕಾದು ನೋಡಬೇಕಿದೆ. 


ಸಂಬಂಧಿತ ಟ್ಯಾಗ್ಗಳು

#Pulwama #Imran Khan #Pak #Counter


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ