ಏರ್ ಶೋಗೆ ಮುನ್ನವೇ ಯುದ್ಧವಿಮಾನ ಪತನ

Two jets collide mid-air during Aero India prep, 1 pilot dead

19-02-2019

ಬೆಂಗಳೂರಿನ ಯಲಹಂಕದಲ್ಲಿ ಆರಂಭವಾಗಲಿರುವ ಏರ್ ಶೋ ಸಿದ್ಧತೆ ವೇಳೆ ಭಾರಿ ಅವಘಡವೊಂದು ಸಂಭವಿಸಿದ್ದು, ಏರ್‍ಶೋ ತಯಾರಿಯಲ್ಲಿ ತೊಡಗಿದ್ದ ಎರಡು ಯುದ್ಧ ವಿಮಾನಗಳು ನಿಯಂತ್ರಣ ತಪ್ಪಿ ನೆಲಕ್ಕೆ ಅಪ್ಪಳಿಸಿದೆ. ಘಟನೆಯಲ್ಲಿ ಮೂವರು ಪೈಲಟ್‍ಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಸೂರ್ಯಕಿರಣ್ ಹೆಸರಿನ ಎರಡು ಯುದ್ಧ ವಿಮಾನಗಳು ಏರ್ ಶೋ ಗಾಗಿ ರಿಹರ್ಸಲ್ ನಡೆಸುತ್ತಿದ್ದ ವೇಳೆ ಎರಡು ಫೈಟರ್ ಜೆಟ್‍ಗಳು ಪರಸ್ಪರ ಡಿಕ್ಕಿಯಾಗಿ ನಿಯಂತ್ರಣ ಕಳೆದುಕೊಂಡು ಯಲಹಂಕ ಬಳಿ ನೆಲಕ್ಕೆ ಬಿದ್ದಿವೆ. ವಿಮಾನಗಳು ಮನೆಯೊಂದರ ಮೇಲೆ ಬಿದ್ದಿದ್ದು, ಮನೆಯಲ್ಲಿದ್ದ ಓರ್ವ ನಾಗರೀಕನೂ ತೀವ್ರವಾಗಿ ಗಾಯಗೊಂಡಿದ್ದಾನೆ ಎನ್ನಲಾಗಿದೆ. 

ನಿಯಂತ್ರಣ ತಪ್ಪಿದ ವಿಮಾನಗಳು ನೆಲಕ್ಕೆ ಅಪ್ಪಳಿಸುತ್ತಿದ್ದಂತೆ ಬೆಂಕಿ ಹೊತ್ತಿಕೊಂಡು ಉರಿದಿದೆ. ಇನ್ನು ಎರಡು ವಿಮಾನಗಳು ನಿಯಂತ್ರಣ ತಪ್ಪುತ್ತಿದ್ದಂತೆ ಮೂವರು ಪೈಲಟ್‍ಗಳು  ಪ್ಯಾರ್‍ಚೂಟ್ ಸಹಾಯದಿಂದ ಹೊರಕ್ಕೆ ಜಿಗಿದಿದ್ದಾರೆ. ಓರ್ವ ಪೈಲಟ್ ಸಾವನ್ನಪ್ಪಿದ್ದಾರೆ ಎಂಬ ಮಾತು ಕೇಳಿ ಬಂದಿತ್ತಾದರೂ ಈಗ ಮೂವರು ಪೈಲಟ್‍ಗಳು ಗಾಯಗೊಂಡಿದ್ದಾರೆ ಎಂದು ವಾಯುಸೇನೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ

ಇನ್ನು ರಕ್ಷಣಾ ದಳಗಳು ಹೊತ್ತಿ ಉರಿಯುತ್ತಿರುವ ವಿಮಾನಗಳನ್ನು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಗಾಯಗೊಂಡಿರುವ ಇಬ್ಬರು ಪೈಲಟ್‍ಗಳನ್ನು ಕಮಾಂಡೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ವಿಮಾನ ಪತನಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. 
ನಾಳೆಯಿಂದ ಒಂದು ವಾರಗಳ ನಗರದ ಯಲಹಂಕ ವಾಯುನೆಲೆಯಲ್ಲಿ ಏರ ಶೋ ನಡೆಯಲಿದ್ದು, ಯುದ್ಧವಿಮಾನ ರಫೇಲ್ ಸೇರಿದಂತೆ ಹಲವು ವಿಮಾನಗಳು ಸಾಹಸಪ್ರದರ್ಶನ ನಡೆಸಲಿದೆ. ಈ ಮಧ್ಯೆ ರಿಹರ್ಸಲ್ ವೇಳೆಯೇ ಇಂತಹದೊಂದು ದುರಂತ ನಡೆದಿದ್ದು, ಆತಂಕ ಮೂಡಿಸಿದೆ. ಕಳೆದ ಫೆ. 8 ರಂದು ಎಚ್‍ಎಎಲ್‍ನಲ್ಲಿ ಕೂಡ ಪ್ರಯೋಗಾತ್ಮಕ ಹಾರಾಟ ನಡೆಸಿದ್ದ ಯುದ್ಧವಿಮಾನವೊಂದು ಪತನಗೊಂಡು ಇಬ್ಬರು ಪೈಲಟ್‍ಗಳು ಸಾವನ್ನಪ್ಪಿದ್ದರು. 


ಸಂಬಂಧಿತ ಟ್ಯಾಗ್ಗಳು

#Air Show #Pilot dead #Bangalore #Yelhanka


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ