ಭಾರತದಲ್ಲಿ ಪಾಕ್ ಕಲಾವಿದರಿಗೆ ನಿಷೇಧ

 Ban on Pakistani artists in India

19-02-2019

 

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ಭೀಕರ ದಾಳಿ ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಮಾತ್ರವಲ್ಲ, ಎಲ್ಲ ರೀತಿಯ ಸಂಬಂಧಗಳು ಹಾಗೂ ವ್ಯೆವಹಾರಗಳ ಮೇಲೂ ಪ್ರಭಾವ ಬೀರಿದೆ. ಪುಲ್ವಾಮಾ ದಾಳಿಯಲ್ಲಿ ಯೋಧರನ್ನು ಬಲಿ ತೆಗೆದುಕೊಂಡ ಘಟನೆ ಬಳಿಕ ಪಾಕ್ ಮೂಲದ ಎಲ್ಲ ನಟ-ನಟಿಯರಿಗೆ ಭಾರತ ನಿಷೇಧ ಹೇರಿದೆ. 

ಭಾರತೀಯ ಸಿನಿಮಾ ನೌಕರರ ಒಕ್ಕೂಟ ಈ ನಿರ್ಬಂಧ ಪ್ರಕಟಿಸಿದೆ. ಹಿಂದಿ ಸಿನಿಮಾ, ಸೀರಿಯಲ್, ಸಾಕ್ಷ್ಯ ಚಿತ್ರ ಸೇರಿದಂತೆ ಎಲ್ಲೆಡೆಯೂ ಪಾಕ್ ಮೂಲದ ಕಲಾವಿದರಿಗೆ ನಿರ್ಬಂಧ ಹೇರಿದ್ದು, ಶಾಶ್ವತ ನಿರ್ಬಂಧ ಹೇರಿಕೆ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಎಐಸಿಡಬ್ಲೂಎ ಹೇಳಿದೆ. 

ಅಲ್ಲದೆ ಯಾವುದೇ ನಿರ್ಮಾಪಕ ಪಾಕಿಸ್ತಾನ ಕಲಾವಿದರ ಜೊತೆ ಕೆಲಸ ಮಾಡುವ ಬೇಡಿಕೆ ಇಟ್ಟರೆ ಆ ನಿರ್ಮಾಪಕರನ್ನೇ ಒಕ್ಕೂಟದಿಂದ ನಿಷೇಧಿಸಲಾಗುವುದು ಎಂದು ಒಕ್ಕೂಟ ಸ್ಪಷ್ಟಪಡಿಸಿದೆ. ಇನ್ನು ಈ ನಿಷೇಧದಿಂದ ಕಿರುತೆರೆ ಹಾಗೂ ಹಿರಿತೆರೆಯ  ನೂರಾರು ಪಾಕ್ ಕಲಾವಿದರು ಭಾರತದ ಸೀರಿಯಲ್ ಮತ್ತು ಸಿನಿಮಾಗಳಿಂದ ಕೆಲಸ ಕಳೆದುಕೊಂಡಂತಾಗಿದೆ. 

ಎಐಸಿಡಬ್ಲೂಎ ನಿರ್ಧಾರಕ್ಕೆ ದೇಶದಾದ್ಯಂತ ಭಾರೀ ಜನಬೆಂಬಲ ವ್ಯಕ್ತವಾಗಿದ್ದು, ಜನರು ಸಾಮಾಜಿಕ ಜಾಲತಾಣಗಳ ಮೂಲಕ ಎಐಸಿಡಬ್ಲೂಎ ನಿರ್ಧಾರವನ್ನು ಸ್ವಾಗತಿಸುತ್ತಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Pulwama #Actors #Pakistani #Ban


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ