ಪಾಕ್ ಪತ್ರಿಕೆಗಳ ವಿರುದ್ಧ ಜಾಹ್ನವಿ ಕಪೂರ್ ಗರಂ

Jahnavi Kapoor Angry On Pakistani Newspapers

19-02-2019

ಪುಲ್ವಾಮಾದಲ್ಲಿ ನಡೆದ ಭಾರತದ ಯೋಧರ ಮೇಲಿನ ದಾಳಿಗೆ ವಿಶ್ವದಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಚಿತ್ರರಂಗ, ಕ್ರೀಡಾಪಟುಗಳು ಹೀಗೆ ಎಲ್ಲರೂ ಈ ವಿದ್ವಂಸಕ ಕೃತ್ಯದ ವಿರುದ್ಧ ತಿರುಗಿಬಿದ್ದಿದ್ದಾರೆ. ಇದಕ್ಕೆ ಬಾಲಿವುಡ್‍ನ ಕ್ವೀನ್ ಎಂದೇ ಕರೆಸಿಕೊಂಡಿದ್ದ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಕೂಡ ಹೊರತಲ್ಲ, ಘಟನೆ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಜಾಹ್ನವಿ ಕಪೂರ್, ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪುಲ್ವಾಮಾದಲ್ಲಿ ನಡೆದ ಘಟನೆಯನ್ನು ಕೆಲ ಪಾಕಿಸ್ತಾನ ಪತ್ರಿಕೆಗಳು ಸ್ವಾತಂತ್ರ್ಯ ಹೋರಾಟ ಎಂದು ವರದಿ ಮಾಡಿವೆ ಎನ್ನಲಾಗಿದೆ. ಇದರ ವಿರುದ್ಧ  ಕಿಡಿಕಾರಿರುವ ಜಾಹ್ನವಿ ಕಪೂರ್, ತಮ್ಮ ರಾಜಕೀಯ ಅಜೆಂಡಾಗಳಿಗಾಗಿ ಸತ್ಯವನ್ನು ಮರೆಮಾಚಿ ಈ  ರೀತಿ ಲೇಖನ ಬರೆಯುವ  ಮಾಧ್ಯಮಗಳ ನಡೆ ಸರಿಯಲ್ಲ ಎಂದಿದ್ದಾರೆ. 

ಆತ್ಮಾಹುತಿ ದಾಳಿಯನ್ನು  ಬಲವಾಗಿ ಖಂಡಿಸಿರುವ ಅವರು, ನಮ್ಮ ಸೈನಿಕರಿಗೆ ಹೋರಾಡುವ ಒಂದು ಅವಕಾಶವೂ ಸಿಗಲಿಲ್ಲ. ತಮ್ಮ ಪ್ರಾಣರಕ್ಷಿಸಿಕೊಳ್ಳುವುದಕ್ಕೂ ಅವಕಾಶ ಸಿಗಲಿಲ್ಲ. ಇದು ನನಗೆ ನೋವನ್ನುಂಟು ಮಾಡಿದೆ. ಇದನ್ನು ಪಾಕಿಸ್ತಾನ ಸ್ವಾತಂತ್ರ್ಯ ಹೋರಾಟ ಎಂದು ಸಂಭ್ರಮಿಸುತ್ತಿರುವುದು ಹೇಯ ಕೃತ್ಯ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಜಾಹ್ನವಿ ಕಪೂರ್ ಈ ಅಭಿಪ್ರಾಯಕ್ಕೆ ಅವರ ಅಭಿಮಾನಿಗಳು ಬೆಂಬಲ ನೀಡಿದ್ದು, ಪೂರಕವಾಗಿ ಕಮೆಂಟ್‍ಗಳನ್ನ ಮಾಡಿದ್ದಾರೆ. 

ಒಂದೆಡೆ ಕಮಲಹಾಸನರಂತಹ ಹಿರಿಯ ನಟರೇ ಈ ಘಟನೆಗಳನ್ನು ಕೇವಲ ರಾಜಕೀಯ ದೃಷ್ಟಿಯಿಂದ ನೋಡಿ ವಿವಾದಕ್ಕಿಡಾಗುತ್ತಿರುವ ಸಂದರ್ಭದಲ್ಲಿ ಬಾಲಿವುಡ್, ಸ್ಯಾಂಡಲವುಡ್‍ನ ಕಿರಿಯ ನಟ-ನಟಿಯರು  ಅತ್ಯಂತ ಜವಾಬ್ದಾರಿಯಿಂದ ಘಟನೆಗೆ ಪ್ರತಿಕ್ರಿಯಿಸುತ್ತಿರುವುದು ಹಾಗೂ ಸಹಾಯಕ್ಕೆ ಧಾವಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. 


ಸಂಬಂಧಿತ ಟ್ಯಾಗ್ಗಳು

#Pulwama #Pak News Paper #Jhanvi kapoor #Angry


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ