ಭಾರತದಿಂದ ಪಾಕ್‍ ಗೆ ಹಿಂತಿರುಗಿದ ರಾಯಭಾರಿ 

Ambassador Returns To Pakistan

18-02-2019

ಪುಲ್ವಾಮಾದಲ್ಲಿ ಫೆ 14 ರಂದು ನಡೆದ ವಿಧ್ವಂಸಕ ಕೃತ್ಯ ಭಾರತ ಮತ್ತು ನೆರೆಯ ರಾಷ್ಟ್ರ ಪಾಕಿಸ್ತಾನದ ನಡುವಿನ ಅಳಿದುಳಿದ ಶಾಂತಿ ನೀರಿಕ್ಷೆಯನ್ನು ಹುಸಿಗೊಳಿಸಿದೆ. ಹೀಗಿರುವಾಗಲೇ ಮಹತ್ವದ ಬೆಳವಣಿಗೆಯೊಂದರಲ್ಲಿ  ಪಾಕಿಸ್ತಾನ ಧೀಡಿರ ಭಾರತದಿಂದ ತನ್ನ  ರಾಯಭಾರಿಯನ್ನು ವಾಪಸ ಕರೆಸಿಕೊಂಡಿದೆ. ಪಾಕಿಸ್ತಾನದ ಈ ವರ್ತನೆ ಇದೀಗ ಸಾಕಷ್ಟು ಚರ್ಚೆ ಹಾಗೂ ಕುತೂಹಲವನ್ನು ಹುಟ್ಟುಹಾಕಿದೆ. 
ನವದೆಹಲಿಯಲ್ಲಿದ್ದ ಪಾಕಿಸ್ತಾನದ ರಾಯಭಾರಿ ಕಚೇರಿಯಿಂದ  ರಾಯಭಾರಿ ಸೊಹೈಲ್ ಮೊಹಮದ್ ಅವರನ್ನು ಪಾಕಿಸ್ತಾನ ವಾಪಸ ಕರೆಸಿಕೊಂಡಿದೆ.  ಪಾಕಿಸ್ತಾನದ ವಿದೇಶಾಂಗ ವ್ಯವಹಾರ ಇಲಾಖೆಯ ವಕ್ತಾರ ಡಾ.ಮೊಹಮದ್ ಫೈಸಲ್ ಅವರು ಈ ಕುರಿತು ಟ್ವಿಟ್ ಮಾಡಿದ್ದು, ರಾಯಭಾರಿಯನ್ನು ಕರೆಸಿಕೊಂಡಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಆದರೆ ಕಾರಣವನ್ನು ಅವರು ಉಲ್ಲೇಖಿಸಿಲ್ಲ. ಸೊಹೈಲ್ ಮೊಹಮದ್ ದೆಹಲಿ ತೊರೆದಿದ್ದಾರೆ ಎಂಬುದನ್ನು ಅವರು ಖಚಿತ ಪಡಿಸಿದ್ದಾರೆ. 

ಫೆ. 14 ರಂದು ಪುಲ್ವಾಮದ ಅವಂತಿಪುರದಲ್ಲಿ ಉಗ್ರರು ಭಾರತೀಯ ಯೋಧರ ಮೇಲೆ ಆತ್ಮಾಹುತಿ ದಾಳಿ ನಡೆಸಿ 44 ಕ್ಕೂ ಆಧಿಕ ಯೋಧರ ಸಾವಿಗೆ ಕಾರಣವಾದ ಬಳಿಕ  ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿದ್ದು, ಭಾರತ ಪಾಕ್‍ನೊಂದಿಗಿನ ಎಲ್ಲ ಮಾತುಕತೆಯನ್ನು ಸ್ಥಗಿತಗೊಳಿಸಿದೆ. 
ಇದಲ್ಲದೆ ಭಾರತ ಫೆ.14 ರ ಘಟನೆ ಬಳಿಕ ಪಾಕಿಸ್ತಾನವನ್ನು ತನ್ನ ಪರಮಾಪ್ತ ದೇಶಗಳ ಪಟ್ಟಿಯಿಂದ ಕೈಬಿಡಲು  ತೀರ್ಮಾನಿಸಿತ್ತು. ಅಲ್ಲದೆ ಪುಲ್ವಮಾ ದಾಳಿ ಬಳಿಕ  ಭಾರತ ಉಗ್ರರನ್ನು ಮಟ್ಟ ಹಾಕಲು ಪಾಕಿಸ್ತಾನ ಕ್ರಮಕೈಗೊಳ್ಳಬೇಕು ಎಂದು ಭಾರತ ಆಗ್ರಹಿಸಿತ್ತು. ಪಾಕಿಸ್ತಾನದ ರಾಜತಾಂತ್ರಿಕ ಇಲಾಕೆಗೆ ಈ ಕುರಿತು ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿಜಯಲ್ ಗೋಖಲೆ ನೋಟಿಸ್ ನೀಡಿದ್ದರು. 
ಇದಲ್ಲದೆ ಪಾಕಿಸ್ತಾನದ ಮೇಲೆ ಬೇರೆ-ಬೇರೆ ರಾಷ್ಟ್ರಗಳ ಮೂಲಕ ಒತ್ತಡ ಹಾಕಿಸಲಾಗಿದ್ದು, ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಶೇಕಡಾ 200 ರಷ್ಟು ಹೆಚ್ಚಿಸಲಾಗಿದೆ. ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆ ಪಾಕ್ ರಾಯಭಾರಿಯನ್ನು ವಾಪಸ ಕರೆಸಿಕೊಂಡಿರುವುದು ಪಾಪಿ ಪಾಕ್‍ನ ಮುಂದಿನ ತಂತ್ರದ ಬಗ್ಗೆ ಅನುಮಾನ ಮೂಡಿಸಿದೆ. 


ಸಂಬಂಧಿತ ಟ್ಯಾಗ್ಗಳು

#Pakistan #Return #Ambassador India


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ