ಆಡಿಯೋ ಟೇಪ್ ಪ್ರಕರಣ ಎಸ್ಐಟಿ ತನಿಖೆ ಸೂಕ್ತ-ಸಿದ್ದರಾಮಯ್ಯ

 Audio tape case SIT probe is appropriate

18-02-2019

ಯಡಿಯೂರಪ್ಪ ಆಡಿಯೋ ಟೇಪ್ ಪ್ರಕರಣ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ಬರಲಿದ್ದು, ಎಸ್ಐಟಿ ಹೊರತು ಬೇರಾವುದೇ ತನಿಖೆ ಸೂಕ್ತವಲ್ಲ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಸ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇದು ಪೋಲಿಸರಿಂದಲೇ ತನಿಖೆ ನಡೆಯಬೇಕಾಗಿದೆ. ಇದನ್ನು ಹೊರತುಪಡಿಸಿ ಉಳಿದ ಯಾವುದೇ ಉದ್ದೇಶವಿಲ್ಲ.ಹೀಗಾಗಿ ಪ್ರಕರಣವನ್ನು ಎಸ್ ಟಿಗೆ ವಹಿಸಬೇಕೆಂದು ಒತ್ತಾಯಿಸುತ್ತಿರುವುದಾಗಿ ಹೇಳಿದರು‌

ಜೆಡಿಎಸ್ ಪಕ್ಷ ಹಾಳು ಮಾಡಲು ಹಾಗೂ  ಕುಮಾರಸ್ವಾಮಿ ಅವರನ್ನು ಸಂಕಷ್ಟಕ್ಕೆ ಸಿಲುಕಿಸಲು ಎಸ್‌ಐಟಿ ತನಿಖೆಗೆ ಸಿದ್ದರಾಮಯ್ಯ ಒತ್ತಡ ಹೇರಿದ್ದಾರೆ ಎಂಬ ಆರೋಪಗಳು ನಿರಾಧಾರ ಎಂದರು.ಯಡಿಯೂರಪ್ಪ ಏನು ಮಾಡುತ್ತಾರೆ ಎಂಬುದು ಸ್ವತಃ ಅವರಿಗೆ ಗೊತ್ತಿಲ್ಲ, ಆರೋಪ ಮಾಡಬೇಕು, ಆದರೆ ಅದರಲ್ಲಿ ಆಧಾರವಿರಬೇಕು, ಗಂಭೀರ ಆಗಿರಬೇಕು ಎಂದು ತಿರುಗೇಟು ನೀಡಿದ್ದಾರೆ.

ಎಸ್‌ಐಟಿ ತನಿಖೆ ಮಾಡಲು ಸ್ಪೀಕರ್ ಆದೇಶ ಮಾಡಿದ್ದಾರೆ. ತನಿಖೆಗೆ ನಾನು ಸಲಹೆ ನೀಡಿದ್ದೇನೆ. ಅದು‌ ನನ್ನ ಅಭಿಪ್ರಾಯ. ಆಡಿಯೋ ಪ್ರಕರಣವನ್ನು ಎಸ್.ಐ.ಟಿ.ತನಿಖೆಗೆ ಕೊಟ್ಟಿದ್ದರಲ್ಲಿ ತಪ್ಪೇನು ಎಂದು ಸಹ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಎಸ್‌ಐಟಿ ತನಿಖೆಯನ್ನು ನಾವು ನಂಬಬೇಕು. ಅದು ಫೇಕ್ ಎಂದರೆ ಪ್ರಜಾಪ್ರಭುತ್ವ ಹಾಳಾದಂತೆ. ನಾನು ಸಿಎಂ ಇದ್ದ ವೇಳೆ ಐದಾರು ಪ್ರಕರಣಗಳನ್ನು ಸಿಬಿಐಗೆ ನೀಡಿದ್ದೇವೆ. ಆದರೆ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದ ವೇಳೆ ಒಂದೇ ಒಂದು ಪ್ರಕರಣ ಸಿಬಿಐಗೆ ನೀಡಿಲ್ಲ ಎಂದು ಹೇಳಿದ್ದಾರೆ. 

ಸಂವಿಧಾನದ ಮೇಲೆ ಬಿಜೆಪಿಯವರಿಗೆ ನಂಬಿಕೆ ಇಲ್ಲ. ಹೀಗಾಗಿ ಆಪರೇಷನ್ ಆಡಿಯೋ ಪ್ರಕರಣವನ್ನು ಎಸ್‍ಐಟಿ ತನಿಖೆಗೆ ನೀಡಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಆಪರೇಷನ್ ಕಮಲ ಆಡಿಯೋ ಪ್ರಕರಣ ತನಿಖೆಗೆ ಸಿಎಂ ಕುಮಾರಸ್ವಾಮಿ ಅವರು ಎಸ್‍ಐಟಿ ತಂಡವನ್ನು ರಚನೆ ಮಾಡಿದ್ದಾರೆ. ನಾವು ಯಾರು ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ತನಿಖೆಯ ಬಳಿಕ ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.


ಸಂಬಂಧಿತ ಟ್ಯಾಗ್ಗಳು

#Bsy #Sit #Audio #Siddaramayya


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ