ಆಡಿಯೋ ಸಿಡಿ ನಕಲಿ ಎಂದಾದರೆ ದಾಖಲೆ ಕೊಡಿ-ಸಿಎಂ

If it is a fake Audio CD Then show Me Evidence

18-02-2019

ಆಪರೇಷನ್ ಕಮಲ ಕಾರ್ಯಾಚರಣೆ ಕುರಿತ ಆಡಿಯೋ ಆಡಿಯೋ ಸಿಡಿ ಅಸಲಿಯಾಗಿದ್ದು, ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಕಾನೂನಿನಡಿ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಆಡಿಯೋ ಟೇಪ್ ಮಿಮಿಕ್ರಿಯಲ್ಕ. ಹಾಗೆ ಮಿಮಿಕ್ರಿ ಮಾಡುವುದು ಮಾಡುವುದು ಸುಲಭವಲ್ಲ, ಯಡಿಯೂರಪ್ಪ ಆರೋಪಿಸಿರುವಂತೆ ಅಡಿಯೋ ಟೇಪ್ ನಕಲಿಯಲ್ಲ, ಅದು ಒರಿಜಿನಲ್ ಎಂದು ಸ್ಪಷ್ಟ ಪಡಿಸಿದರು.

 ಜೆಡಿಎಸ್ ಶಾಸಕರೊಬ್ಬರ ಪುತ್ರನಿಗೆ ಮಾಜಿ ಸಿಎಂ  ಯಡಿಯೂರಪ್ಪ  ಆಮೀಷವೊಡ್ಡಿದ್ದಾರೆ ಎಂಬ ಆಡಿಯೋ ನಕಲಿ ಎಂಬ ಯಡಿಯೂರಪ್ಪ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಯಾರೋಬ್ಬರ ಧ್ವನಿ ಮಿಮಿಕ್ರಿಯನ್ನು ಮಾಡುವುದು ಸುಲಭವಲ್ಲ, ಆಡಿಯೋವನ್ನು ಅಸಲಿಯಲ್ಲ, ಎನ್ನಲು ಯಡಿಯೂರಪ್ಪ ಅವರ ಬಳಿ ಏನಾದರೂ ದಾಖಲೆಗದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.  ಮಿಮಿಕ್ರಿ ಮಾಡಲಾಗಿದೆ ಎಂದು ಮಾಡಿರುವ ಆರೋಪಕ್ಕೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಆಡಿಯೋ ಟೇಪ್ ಪ್ರಕರಣವನ್ನು  ಸಮ್ಮಿಶ್ರ ಸರ್ಕಾರ ಎಸ್ ಐಟಿ ತನಿಖೆಗೆ ವಹಿಸಿದೆ.


ಸಂಬಂಧಿತ ಟ್ಯಾಗ್ಗಳು

#Kumarswamy #Karnataka #Bsy #Audio CD


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ