ಪುಲ್ವಾಮಾ ದಾಳಿ ರೂವಾರಿ ಅಬ್ದುಲ್  ಹತ್ಯೆ

Pulwama Attack Planer Abdul  Assassination

18-02-2019

ಪುಲ್ವಾಮಾದಲ್ಲಿ ಯೋಧರ ವಾಹನದ ಮೇಲೆ ಆತ್ಮಹತ್ಯಾ ದಾಳಿ ನಡೆಸಿದ ಘಟನೆಗೆ ಪ್ರತಿಕಾರವಾಗಿ ಕಾರ್ಯಾಚರಣೆ ಆರಂಭಿಸಿದ  ಭದ್ರತಾ ಪಡೆಗಳು 12 ಗಂಟೆಗಳ ಬಳಿಕ ಇಂದು ಮಧ್ಯಾಹ್ನದ ವೇಳೆಗೆ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಅಬ್ದುಲ್ ರಶೀದ್ ಘಾಜಿ ಅಲಿಯಾಸ್ ಕಮ್ರಾನ್ ಜೈಶ್ ಎಂಬ ಉಗ್ರಗಾಮಿಯನ್ನು ಬಲಿ ಪಡೆದಿದ್ದಾರೆ. 

ಈತ ಪಾಕಿಸ್ತಾನ ಮೂಲದವನಾಗಿದ್ದು,  ಪುಲ್ವಾಮಾದಲ್ಲಿ 44 ಕ್ಕೂ ಹೆಚ್ಚು ಸೈನಿಕರನ್ನು  ಬಲಿ ಪಡೆದ  ಆತ್ಮಹತ್ಯಾ  ದಾಳಿಗೆ ಈತನೆ ರೂವಾರಿಯಾಗಿದ್ದ. ಅಲ್ಲದೆ ಅಪ್ಘಾನಿಸ್ತಾನದ  ಯುದ್ಧ ಸೇನಾನಿಯಾಗಿರುವ  ಅಬ್ದುಲ್ ರಶೀದ್ ಸುಧಾರಿತ ಸ್ಪೋಟಕ್ ಸಾಧನ ಐಇಡಿಯ ತಜ್ಞನಾಗಿದ್ದಾನೆ. 

ಅಬ್ದುಲ್ ರಶೀದ್ ಘಾಜಿ, ಸಿಆರ್‍ಪಿಎಫ್ ವಾಹನಕ್ಕೆ ಆತ್ಮಹತ್ಯಾದಾಳಿಯ ಗಾಡಿಯನ್ನು ಡಿಕ್ಕಿಹೊಡೆಸಿ ಸತ್ತ ಕಾಶ್ಮೀರಿ ಉಗ್ರಗಾಮಿ ಆದಿಲ್ ದಾರ್‍ಗೆ ಈತನೆ ತರಬೇತಿದಾರನಾಗಿದ್ದ. ಮೃತ ಅಬ್ದುಲ್ ರಶೀದ್ ಗೆ ಅಂದಾಜು 30 ವರ್ಷಗಳಾಗಿದ್ದು, ಈತ ದಶಕದ ಹಿಂದೆಯೇ  ಜೈಶ್ ಉಗ್ರಗಾಮಿ ಸಂಘಟನೆ ಸೇರಿಕೊಂಡಿದ್ದ. ಅಷ್ಟೇ ಅಲ್ಲ ಅಪ್ಘಾನಿಸ್ತಾನದ  ಉಗ್ರಗಾಮಿ ಪಡೆ ತಾಲಿಬಾನ್‍ನಿಂದಲೇ ಈತ ಯುದ್ಧ ತಂತ್ರ ಹಾಗೂ  ಸ್ಪೋಟಕ್ ತಯಾರಿಯನ್ನು  ಕರಗತಮಾಡಿಕೊಂಡಿದ್ದ. 

2001 ರಲ್ಲಿ ಪಾಕ್ ಆಕ್ರಮಿತ ಕಾಶ್ಮೀಕರಕ್ಕೆ ಮರಳಿದ್ದ ಅಬ್ದುಲ್ ರಶೀದ್, ಪಾಕ್ ಆಕ್ರಮಿತ ಕಾಶ್ಮೀರದಾದ್ಯಂತ ಜೈಶೆ ಮೊಹಮ್ಮದ್ ಮತ್ತು ಐಎಸ್‍ಐ ತರಬೇತಿ ಶಿಬಿರದಳಲ್ಲಿ  ದೀನಿ ಮತ್ತು ಅಸ್ಕರಿಯನಲ್ಲಿ ಬೇಡಿಕೆಯ ತರಬೇತಿದಾರನಾಗಿದ್ದ. 


ಸಂಬಂಧಿತ ಟ್ಯಾಗ್ಗಳು

#pulwama #Master Mind #Attack # Assassination


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ