ಯೋಧರ ಸಹಾಯಕ್ಕೆ ನಿಂತ ಸಿನಿಮಾತಂಡ

 The Cinema Team Who Stood For The Help of Warriors

18-02-2019

ಕಾಶ್ಮೀರದ ಪುಲ್ವಾಮಾದಲ್ಲಿ ಇತ್ತೀಚಿಗೆ ನಡೆದ ಭಯೋತ್ಪಾದಕ ಕೃತ್ಯ ವಿಶ್ವದಾದ್ಯಂತ ಚರ್ಚೆಗೆ ಗ್ರಾಸವಾಗುತ್ತಿದೆ. 45 ಕ್ಕೂ ಅಧಿಕ ಯೋಧರು ಈ ದಾಳಿಯಲ್ಲಿ ಜೀವ ಕಳೆದುಕೊಂಡಿದ್ದು ಹಲವರು ಗಾಯಗೊಂಡಿದ್ದಾರೆ. ಭಾರತದಾದ್ಯಂತ ಈ ಕೃತ್ಯಕ್ಕೆ ಖಂಡನೆ ವ್ಯಕ್ತವಾಗಿದ್ದು, ಪ್ರತಿಕಾರಕ್ಕೆ ಆಗ್ರಹವ್ಯಕ್ತವಾಗ್ತಿದೆ. ಅಷ್ಟೇ ಅಲ್ಲ ಎಲ್ಲರೂ ಯೋಧರ ಕುಟುಂಬಕ್ಕಾಗಿ ಸಹಾಯಹಸ್ತ ಚಾಚಿದ್ದಾರೆ, ಇದಕ್ಕೆ ಸಿನಿಮಾ ತಂಡಗಳು ಕೈ ಜೋಡಿಸಿರುವುದು ವಿಶೇಷ. 

ಇತ್ತೀಚಿಗೆ ಯೋಧರ ಸಾಹಸವನ್ನು ಬಿಂಬಿಸುವಂತೆ ಬಿಡುಗಡೆಯಾದ ಸೂಪರ್ ಹಿಟ್ ಚಿತ್ರ ಉರಿ ತಂಡವೂ ಕೂಡ ಇಂತಹ ಒಂದು ಪ್ರಯತ್ನಕ್ಕೆ ಮುಂಧಾಗಿದ್ದು,  ಉರಿ ಚಿತ್ರತಂಡದ ಪರವಾಗಿ 1 ಕೋಟಿ ರೂಪಾಯಿ ಧನ ಸಹಾಯವನ್ನು ಮೃತ ಯೋಧರ ಸಹಾಯಕ್ಕಾಗಿ  ಆರ್ಮಿ ವೆಲ್ಫೇರ್ ಫಂಡ್‍ಗೆ ಚೆಕ್ ನೀಡಿದೆ. 

ಈ ಉರಿ ಚಿತ್ರ ಭಾರತ ಉಗ್ರಗ ಹತ್ಯೆಗಾಗಿ ನಡೆಸಿದ  ಕಾರ್ಯಾಚರಣೆಯ ಚಿತ್ರಕತೆಯನ್ನೇ ಹೊಂದಿದೆ.   2016 ರ ಸಪ್ಟೆಂಬರ್ 18 ರಂದು ಉರಿ ಸೇನಾ ನೆಲೆಯ ಮೇಲೆ ಪಾಕಿಸ್ತಾನದ ನಾಲ್ವರು ಭಯೋತ್ಪಾದಕರು ದಾಳಿ ಮಾಡಿದ್ದರು. ಈ ವೇಳೆ 19 ಸೈನಿಕರು  ಹುತಾತ್ಮರಾಗಿದ್ದರು.  ಇದಕ್ಕೆ ಉತ್ತರವಾಗಿ  ಭಾರತದ ಯೋಧರು ಸಪ್ಟೆಂಬರ್ 28-29 ರಂದು ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಇದಕ್ಕಾಗಿ ಭಾರತೀಯ ಸೈನಿಕರ ಸಿದ್ಧತೆ ಹೇಗಿತ್ತು. ದಾಳಿ ವೇಳೆ ಎದುರಾದ ಕಷ್ಟವೇನು ಎಂಬೆಲ್ಲ ಅಂಶಗಳನ್ನು ಈ ಚಿತ್ರ ಒಳಗೊಂಡಿದ್ದು, ಇತ್ತೀಚಿಗೆ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

 ಗೃಹ ಸಚಿವೆ ನಿರ್ಮಲಾ ಸೀತಾರಾಮ ಕೂಡ ಯೋಧರ ಕುಟುಂಬಗಳ ಜೊತೆ ಕೂತು ಈ ವಿತ್ರ ವೀಕ್ಷಿಸಿದ್ದರು. 
ಕೇವಲ ಉರಿ ತಂಡ ಮಾತ್ರವಲ್ಲದೇ ಬಾಲಿವುಡ್ ಬಿಗ್ ಬೀ ಅಮಿತಾಬ ಬಚ್ಚನ್, ಯೋಧರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. 
ಕೇವಲ ಬಾಲಿವುಡ್ ಮಾತ್ರವಲ್ಲ,  ಕನ್ನಡ ಚಿತ್ರರಂಗದ ಬೆಲ್ ಬಾಟಲ್ ಚಿತ್ರತಂಡ, ಕೆಮೆಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ತಂಡಗಳು ಸಹಾಯ ಘೋಷಿಸಿವೆ. ಇನ್ನು ದಿ.ನಟ ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ಕೂಡ ಮೃತ ಮಂಡ್ಯ ಮೂಲದ ಗುರು ಸ್ಮಾರಕ ನಿರ್ಮಾಣಕ್ಕೆ ಅರ್ಧ ಎಕರೆ ಜಮೀನು ದಾನ ಮಾಡಲು ನಿರ್ಧರಿಸಿದೆ. 
 


ಸಂಬಂಧಿತ ಟ್ಯಾಗ್ಗಳು

#Uri #Warriors #Help #Cinema


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ