ಬಿಜೆಪಿ ವಿರುದ್ಧ ಕಾಂಗ್ರೆಸ್ ರಸಪ್ರಶ್ನೆ ಸ್ಪರ್ಧೆ

Congress Quiz Contest Against BJP

14-02-2019

ಅತ್ತ ವಿಧಾನಸಭೆ ಅಧಿವೇಶನ ಆಡಿಯೋ ವಿವಾದಕ್ಕೆ ಬಲಿಯಾದ ಬೆನ್ನಲ್ಲೇ ಇತ್ತ ಕಾಂಗ್ರೆಸ್ ಬಿಜೆಪಿ ವಿರುದ್ಧದ ತನ್ನ ವಾರ್ ನ್ನು ಟ್ವಿಟರ್ ನಲ್ಲಿ ಮುಂದುವರಿಸಿದ್ದು, ಯಡಿಯೂರಪ್ಪ ರಾಜೀನಾಮೆಗೆ ಆಗ್ರಹಿಸಿ ಹ್ಯಾಶ್ ಟ್ಯಾಗ್ ಅಭಿಯಾನ ಆರಂಭಿಸಿದೆ. 

ಶಾಸಕ ನಾಗನಗೌಡ ಪುತ್ರ ಶರಣಗೌಡ್‍ನ ಬಳಿ ಯಡಿಯೂರಪ್ಪ ಮಾತನಾಡಿರುವ ಆಡಿಯೋವನ್ನೆ ದಾಳವಾಗಿ ಬಳಸಿಕೊಂಡು ಬಿಜೆಪಿಯ ಹಾಗೂ ಯಡಿಯೂರಪ್ಪನವರ ಚಾರಿತ್ರ್ಯ ಹರಣಕ್ಕೆ ಮುಂದಾಗಿರುವ ಕಾಂಗ್ರೆಸ್,  ಟ್ವಿಟರ್ ನಲ್ಲಿ ರಸಪ್ರಶ್ನೆ ಸ್ಪರ್ಧೆ ಆರಂಭಿಸಿದೆ. 

ಬಿಜೆಪಿ ಮತ್ತು ಯಡಿಯೂರಪ್ಪ ಕುರಿತು ಸರಣಿ ಟ್ವಿಟ್ ಪ್ರಶ್ನೆಗಳನ್ನು ಹಾಕಿರುವ   ಕಾಂಗ್ರೆಸ್ ಅವುಗಳ ಉತ್ತರಕ್ಕೆ ಆಯ್ಕೆಯನ್ನು ನೀಡಿದೆ. ಆಫರೇಷನ್ ಕಮಲ ಆಡಿಯೋ ಕ್ಲಿಪ್‍ನಲ್ಲಿರುವ ಧ್ವನಿ ಯಾರದ್ದು? ಬಿಎಸ್‍ವೈ,ಶಾ,ಮೋದಿ ಎಂಬ ಮೂರು ಆಯ್ಕೆಗಳನ್ನು ಕಾಂಗ್ರೆಸ್ ನೀಡಿದೆ. ಇದಲ್ಲದೇ ಆಫರೇಷನ್ ಕಮಲದ ಗಾಡ್ ಫಾದರ್ ಯಾರು ಎಂದು ಪ್ರಶ್ನಿಸಿದ್ದು, ಬಿಎಸ್‍ವೈ ಮೋದಿ ಹಾಗೂ ಶಾ ಎಂಬ ಮೂರು ಆಯ್ಕೆಗಳನ್ನು ನೀಡಿದೆ. ಇನ್ನು ಆಡಿಯೋ ಕ್ಲಿಪ್‍ನಲ್ಲಿ ಆಮಿಷ ಒಡ್ಡಲಾದ ಹಣದ ಮೊತ್ತ, ಫೆ.10 ರಂದು ಆಡಿಯೋ ತಮ್ಮದಲ್ಲ ಎಂಬ ಬಿಎಸ್‍ವೈ ಈ ಎಲ್ಲ ವಿಚಾರಗಳ ಬಗ್ಗೆಯೂ ಕಾಂಗ್ರೆಸ್ ಸರಣಿ ಪ್ರಶ್ನೆಗಳನ್ನು ಹಾಕಿದೆ. 

ಕೊನೆಯಲ್ಲಿ ಆಫರೇಷನ್ ಆಡಿಯೋದಲ್ಲಿರುವ ಧ್ವನಿ ತಮ್ಮದೆಂದು ಸಾಬೀತಾದರೆ ರಾಜಕೀಯ ತೊರೆಯುತ್ತೇನೆ. ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದ ರಾಜಕಾರಣಿ ಯಾರು ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಟ್ವಿಟ್ ನೂರಾರು ಜನರು ರೀ ಟ್ವಿಟ್ ಮಾಡಿದ್ದು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ. ಒಟ್ಟು 10 ಕ್ಕೂ ಹೆಚ್ಚು ಪ್ರಶ್ನೆಗಳ ಮೂಲಕ ಕಾಂಗ್ರೆಸ್ ಬಿಜೆಪಿಗೆ ಮುಜುಗರ ಉಂಟು ಮಾಡುವ ಪ್ರಯತ್ನ ಆರಂಭಿಸಿದೆ. ಇನ್ನೊಂದೆಡೆ ಬಿಜೆಪಿ ಕಾಂಗ್ರೆಸ್ ಕಾನೂನನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ರಾಜ್ಯಪಾಲರಿಗೆ ದೂರು ನೀಡಿದೆ. ಒಟ್ಟಿನಲ್ಲಿ ಕರ್ನಾಟಕದ ರಾಜಕೀಯ ಹೈಡ್ರಾಮಾ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತ ಸಾಗಿದ್ದು, ಮುಂದೆ 
ಏನಾಗುತ್ತೋ ಕಾದು ನೋಡಬೇಕಿದೆ. 


ಸಂಬಂಧಿತ ಟ್ಯಾಗ್ಗಳು

#Karnataka #Tweet #Congress #Bjp


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ