ಮಧುಬಾಲಾಗೆ ಗೂಗಲ್ ಗೌರವ 

 Google Honors Madhubala

14-02-2019

ತಮ್ಮ ಮನಮೋಹಕ ಸೌಂದರ್ಯ ಹಾಗೂ ನಟನೆಯಿಂದ ಚಿತ್ರರಸಿಕರ ಮನಸೊರೆಗೊಂಡಿದ್ದ ಬಾಲಿವುಡ್ ನಟಿ ಮಧುಬಾಲಾ ಅವರ 86 ನೇ ಹುಟ್ಟುಹಬ್ಬ ಇಂದು. ಬಾಲಿವುಡ್‍ನ ಈ ಎವರ್‍ಗ್ರೀನ್  ನಾಯಕಿಯ ಹುಟ್ಟುಹಬ್ಬದ ಪ್ರಯುಕ್ತ ಜಗತ್ತಿನ ಅತ್ಯಂತ ವೇಗದ ಸರ್ಚ್ ಇಂಜಿನ್ ಗೂಗಲ್ ತನ್ನ ಡೂಡಲ್ ಮೂಲಕ ಮಧುಬಾಲಾಗೆ ಗೌರವ ಸಮರ್ಪಿಸಿದೆ. 
 ಮಧುಬಾಲಾ ಅವರು ನೃತ್ಯಕ್ಕೆ ಹೆಜ್ಜೆ ಹಾಕುತ್ತಿರುವಂತ ಚಿತ್ರವನ್ನು ಡೂಡಲ್ ಆಗಿ ಗೂಗಲ್ ನೀಡಿದ್ದು, ಬಾಲಿವುಡ್ ಹಾಗೂ ಮಧುಬಾಲಾ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಹಿಂದಿ ಚಿತ್ರರಂಗದ ಅಪ್ರತಿಮ ಸುಂದರಿ ಎಂದೇ ಖ್ಯಾತಿ ಗಳಿಸಿಕೊಂಡಿದ್ದ ಮಧುಬಾಲಾ ತಮ್ಮ 36 ನೇ ವಯಸ್ಸಿನಲ್ಲಿ ನಿಧನರಾದರು. 

ಬರ್‍ಸಾತ್ ಕಿ ರಾತ್, ಮೊಘಲ ಏ ಅಜಂನಂತಹ ಚಿತ್ರಗಳಲ್ಲಿ ನಟಿಸಿದ್ದ ಮಧುಬಾಲಾ ತಮ್ಮ ಅಭಿನಯ ಹಾಗೂ ಸೌಂದರ್ಯದಿಂದ ಪ್ರೇಕ್ಷಕರ ಮನಗೆದ್ದಿದ್ದರು. ತಮ್ಮ ಮನಮೋಹಕ ನೋಟದಿಂದಲೇ ಚಿತ್ರರಸಿಕರ ಮನಗೆದ್ದಿದ್ದ ಮಧುಬಾಲಾ 1942 ರಿಂದ 1962 ರವರೆಗೆ  ಬಹುಬೇಡಿಕೆಯ ನಟಿಯಾಗಿ ಹಲವು ಚಿತ್ರಗಳ ಮೂಲಕ ಪ್ರಪಂಚದ ಗಮನ ಸೆಳೆದಿದ್ದರು. 

ಮಧುಬಾಲಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ  ಚಲ್ತಿ ಕಾ ನಾಮ್ ಗಾಡಿ, ಮುಘಲ್ ಎ ಅಜಮ್ ನಂತರ ಚಿತ್ರಗಳಿಂದ ಬೆಳ್ಳೆತೆರೆಯಲ್ಲಿ ಹೊಸ ಇತಿಹಾಸ ಬರೆದಿದ್ದ ಅವರ ಅಭಿನಯದ ಗೀತೆಗಳು ಈಗಲೂ ಜನರ ಸ್ಮøತಿ ಪಟಲದಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿವೆ. 2017 ರಲ್ಲಿಯೇ ದೆಹಲಿಯ ಟುಸ್ಸಾಡ್ಸ್‍ನಲ್ಲಿ ಮಧುಬಾಲಾರ ಮೇಣದ ಪ್ರತಿಮೆ ನಿರ್ಮಾಣಮಾಡಲಾಗಿದೆ. ಇನ್ನು ವಿಶೇಷ ಸಂದರ್ಭದಲ್ಲಿ ಡೂಡಲ್ ಮೂಲಕ ಗೌರವ ಸಮರ್ಪಿಸುವ ಗೂಗಲ್ ಕೂಡ ಮಧುಬಾಲಾಗೆ ಗೌರವ ಸಮರ್ಪಿಸಿದ್ದು, ಬಾಲಿವುಡ್ ಅಭಿಮಾನಿಗಳಿಗೆ ಖುಷಿ ತಂದಿದೆ. 


ಸಂಬಂಧಿತ ಟ್ಯಾಗ್ಗಳು

#Bollywood #Google #Madhubala # Honors


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ