ವಿವಾದಿತ ಪುಸ್ತಕಕ್ಕೆ ಸಿನಿಮಾ ರೂಪ !

Kannada News

06-06-2017 515

ನವದೆಹಲಿ:- ಸಂಜಯ್ ಬರು ಅವರ ವಿವಾದಿತ ಪುಸ್ತಕವಾದ ಆಕ್ಸಿಡೆಂಟಲ್ ಪ್ರೈಮಿನಿಸ್ಟರ್ ಅನ್ನು ಸಿನಿಮಾ ಮಾಡಲು ಹೊರಟಿದೆ ಬಾಲಿವುಡ್. 2004 ರಿಂದ 2008 ರ ವರೆಗೆ ಮಾಜಿ ಪ್ರಧಾನ ಮಂತ್ರಿ ಮನ್ ಮೋಹನ್ ಸಿಂಗ್ ಅವರಿಗೆ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬರು ಅವರು ಈ ಪುಸ್ತಕ ಬರೆದಿದ್ದಾರೆ. ಅಂದಿನ ಕಾಂಗ್ರೆಸ್ ಸರ್ಕಾರದಿಂದ ಇದಕ್ಕೆ ತೀವ್ರ ವಿರೋಧವೂ ವ್ಯಕ್ತವಾಗಿತ್ತು. ಪುಸ್ತಕದಲ್ಲಿ ಮನ್ ಮೋಹನ್ ಸಿಂಗ್ ಅವರ ಕಾರ್ಯ ವೈಖರಿ ಮತ್ತು ಕೇಂದ್ರ ಸಂಪುಟಸಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪಾತ್ರವನ್ನು ಎಳೆ ಎಳೆಯಾಗಿ ಬಿಡಿಸಿದ್ದರು, ಪುಸ್ತಕವು 2014 ರ ಲೋಕಸಭಾ ಚುನಾವಣೆಗೂ ಮೊದಲು ಬಿಡುಗಡೆ ಮಾಡಿದ್ದರು. ಪುಸ್ತಕದಲ್ಲಿ ಮನ್ ಮೋಹನ್ ಸಿಂಗ್ ಅವರನ್ನು ಸೋನಿಯಾ ಗಾಂಧಿ ನಿರ್ಲಕ್ಷಿಸಿರುವುದನ್ನು ಹಾಗೂ ಪ್ರಮುಖ ವಿಚಾರಗಳಲ್ಲಿ ಪ್ರಧಾನಿಯವರ ಅಭಿಪ್ರಾಯಕ್ಕೂ ಅವಕಾಶ ನೀಡದೆ ನೇರ ತೀರ್ಮಾನಗಳನ್ನು ಮಾಡುತ್ತಿದ್ದ ಸೋನಿಯಾ ಗಾಂಧಿ ಹಾಗೂ, ಯುಪಿಎ ಸರ್ಕಾರದ ಹಲವು ಪ್ರಮುಖ ವಿಚಾರಗಳನ್ನು ಸಂಜಯ್ ಬರು ಅವರು ಪುಸ್ತಕದಿಂದ ಹೊರ ತಂದಿದ್ದರು. ಇದೀಗ ಇದೇ ವಿವಾದಿತ ಪುಸ್ತಕವನ್ನು ಸಿನಿಮಾವನ್ನಾಗಿಸಲು ಹೊರಟಿದೆ, ಬಾಲಿವುಡ್ ನ  ಸುನಿಲ್ ಬೋರಾ ಅವರು ನಿರ್ಮಾಣ ಮಾಡುತ್ತಿದ್ದು, ವಿಜಯ್ ರತ್ನಾಕರ್ ಗುಟ್ಟೇ ನಿರ್ದೇಶಿಸುತ್ತಿದ್ದಾರೆ. ಅಲ್ಲದೆ ಮನ್ ಮೋಹನ್ ಸಿಂಗ್ ಅವರ ಪಾತ್ರಕ್ಕೆ ಅನುಪಮ್ ಖೆಹರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಯುಪಿಎ ಸರ್ಕಾರದ ವಿಚಾರಗಳನ್ನು ಹೊಂದಿರುವ ಈ ಸಿನಿಮಾ ಸಾಕಷ್ಟು ಕುತೂಹಲ ಕೆರಳಿಸಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ