ಮದುವೆಯಲ್ಲಿ ಅಂತ್ಯವಾದ ಐಎಎಸ್ ಪ್ರೇಮಪ್ರಕರಣ

 IAS love Story Ends at the wedding

14-02-2019

ಪ್ರೇಮಿಗಳ ದಿನವಾದ ಇಂದು ಕರ್ನಾಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇಬ್ಬರು ಐಎಎಸ್ ಅಧಿಕಾರಿಗಳು  ತಮ್ಮ ನಾಲ್ಕು ವರ್ಷಗಳ ಪ್ರೇಮಬಂಧಕ್ಕೆ ವಿವಾಹದ ಮುದ್ರೆಯೊತ್ತಿದ್ದಾರೆ. ಅವರು ಬೇರೆ ಯಾರು ಅಲ್ಲ, ದಾವಣಗೆರೆಯ ಜಿಲ್ಲಾಧಿಕಾರಿ ಡಾ.ಗೌತಮ ಬಗಾದಿ ಮತ್ತು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ಅಶ್ವತಿ. 


ಹೌದು ಕೇರಳ ಹಾಗೂ ಆಂಧ್ರಪ್ರದೇಶದ ಈ ಇಬ್ಬರು ಐಎಎಸ್ ಅಧಿಕಾರಿಗಳು ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಬಳಿಕ ಕುಟುಂಬಸ್ಥರ ಒಪ್ಪಿಗೆ ಪಡೆದು ಇಂದು ಕೇರಳದ ಕೋಯಿಕ್ಕೋಡ್‍ನ ಟಾಗೋರ್ ಸಭಾಂಗಣದಲ್ಲಿ ಕೇರಳ ಸಂಪ್ರದಾಯದಂತೆ ಹೊಸಬದುಕಿಗೆ ಕಾಲಿರಿಸಿದ್ದಾರೆ. ಅತ್ಯಂತ ಸರಳವಾಗಿ ಹಾಗೂ ಸಾಂಪ್ರದಾಯಿಕವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ಈ ವಿವಾಹ ನಡೆದಿದೆ. 


ಆಂಧ್ರಪ್ರದೇಶದ  ವಿಶಾಖಪಟ್ಟಣಂ ಕೃಷ್ಣರಾವ್ ಹಾಗೂ ಪಾರ್ವತಿ ದಂಪತಿಯ ಪುತ್ರ ಗೌತಮ ಬಗಾದಿ 2009 ನೇ ಬ್ಯಾಚ್‍ನ ಐಎಎಸ್ ಅಧಿಕಾರಿ. ಕೇರಳ ಕ್ಯಾಲಿಕಟ್‍ನ ಹಿರಿಯ ವಕೀಲರಾದ ಸೆಲ್ವಿರಾಜ್ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಜಿಲ್ಲಾಧಿಕಾರಿ ಪುಷ್ಪಾ ಅವರ ಪುತ್ರಿ ಅಶ್ವತಿ ಕೂಡ 2013 ನೇ ಬ್ಯಾಚ್‍ನ ಐಎಎಸ್ ಅಧಿಕಾರಿ. ವೃತ್ತಿಯಲ್ಲಿ ವೈದ್ಯರಾಗಿದ್ದ ಡಾ.ಗೌತಮ ಬಗಾದಿ ಇದಕ್ಕೂ ಮೊದಲು ರಾಯಚೂರಿನಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಅಶ್ವತಿಯವರು ಉಡುಪಿಯಲ್ಲಿ  ವೃತ್ತಿ ಆರಂಭಿಸಿದ್ದರು. 


ಅಶ್ವತಿಯವರ ತವರಿಯಲ್ಲಿ ವಿವಾಹ ನಡೆದಿದ್ದರೇ, ಗೌತಮ ಬಗಾದಿಯವರ ಊರಲ್ಲಿ ಆರತಕ್ಷತೆ ನಡೆಯಲಿದೆ. ಬಳಿಕ ದಾವಣಗೆರೆಯಲ್ಲೂ ತಮ್ಮ ಆಪ್ತರಿಗೆ ಔತಣಕೂಟವೊಂದು ಆಯೋಜಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇಬ್ಬರು ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಗಳಾಗಿದ್ದರೂ ತಮ್ಮ ಪ್ರೇಮಪ್ರಕರಣವನ್ನು ಅತ್ಯಂತ ಗೌಪ್ಯವಾಗಿ ಕಾಪಾಡಿಕೊಂಡು ಬಂದ ಈ ಜೋಡಿ ಆಹ್ವಾನ ಪತ್ರಿಕೆ ನೀಡುವವರೆಗೂ ಯಾರಿಗೂ ಈ ವಿಚಾರವೇ ಗೊತ್ತಿರಲಿಲ್ಲವಂತೆ. 


ಸಂಬಂಧಿತ ಟ್ಯಾಗ್ಗಳು

#Karnataka #Love Story #IAS #Marrige


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ