ಮೋದಿ ವಿರುದ್ಧ ಮಲ್ಯ ಟ್ವಿಟ್ ವಾರ್

 Modi vs. Mallya Twitter War

14-02-2019

ಬ್ಯಾಂಕ್‍ಗಳಿಂದ ಅಪಾರ ಪ್ರಮಾಣದ ಸಾಲ ಪಡೆದು ಹಿಂತಿರುಗಿಸದೆ ದೇಶಬಿಟ್ಟು ಓಡಿ ಹೋಗಿದ್ದ ಉದ್ಯಮಿ ವಿಜಯ್ ಮಲ್ಯರ ವಂಚನೆ ಕುರಿತು  ಪ್ರಧಾನಿ ಮೋದಿ ನಿನ್ನೆ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಹಿನ್ನೆಲೆಯಲ್ಲಿ ಲಂಡನ್‍ನಲ್ಲಿರುವ ಉದ್ಯಮಿ ವಿಜಯ್ ಮಲ್ಯ ಟ್ವಿಟ್ ಮೂಲಕ ಮೋದಿ ತಿರುಗೇಟು ನೀಡಿದ್ದಾರೆ. 

ಲೋಕಸಭೆಯಲ್ಲಿ ಬುಧವಾರ ತಮ್ಮ ಕೊನೆಯ ಭಾಷಣ ಮಾಡಿದ  ನರೇಂದ್ರ ಮೋದಿ ಆರ್ಥಿಕ ಅಪರಾಧಗಳನ್ನು ಎಸಗಿ ದೇಶ ಬಿಟ್ಟು ಓಡಿ ಹೋದ ಮಲ್ಯನನ್ನು ಉಲ್ಲೇಖಿಸಿ ಮಾತನಾಡಿದ್ದರು. ಓಡಿ ಹೋದ ವ್ಯಕ್ತಿಯೊಬ್ಬ  ತಾನು 9000 ಕೋಟಿ ಯೊಂದಿಗೆ ಓಡಿ ಹೋಗಿದ್ದೇನೆ. ಆದರೆ ಮೋದಿ 13 ಸಾವಿರ ಕೋಟಿ ವಾಪಸ ಪಡೆದುಕೊಂಡಿದ್ದಾರೆ ಎಂದು  ಅಳುತ್ತಿದ್ದಾರೆ ಎಂದಿದ್ದರು. ಇದಕ್ಕೆ ಲಂಡನ್‍ನಲ್ಲಿರುವ ಮಲ್ಯ ಆಕ್ಷೇಪ ವ್ಯಕ್ತಪಡಿಸಿದ್ದು, ಟ್ವಿಟ್ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
 
ಮೋದಿ ಒಬ್ಬರು ಉತ್ತಮ ವಾಗ್ಮಿ ಎಂದಿರುವ ವಿಜಯ್ ಮಲ್ಯ, ತಮ್ಮ ಸಾಲದ ವಿಚಾರವನ್ನು ಉಲ್ಲೇಖಿಸಿದ್ದಾರೆ.  ನಾನು ಟೇಬಲ್ ಮೇಲೆ  ಇರಿಸಿದ್ದ ಹಣವನ್ನು ತೆಗೆದುಕೊಳ್ಳಲು ಬ್ಯಾಂಕ್‍ಗಳಿಗೆ ಮೋದಿ ಯಾಕೆ ಸೂಚನೆ ನೀಡುತ್ತಿಲ್ಲ ಎಂದು ನಾನು ಗೌರವಯುತವಾಗಿ ಪ್ರಶ್ನಿಸುತ್ತೇನೆ.  ಇದರಿಂದ ಕನಿಷ್ಟ  ಕಿಂಗ್‍ಫಿಶರ್‍ಗೆ ನೀಡಿದ ಎಲ್ಲ ಸಾಲವನ್ನು ಸಂಪೂರ್ಣವಾಗಿ ವಸೂಲಿ ಮಾಡಿದ  ಶ್ರೇಯಸ್ಸನ್ನು ತಾವೆ ಪಡೆದುಕೊಳ್ಳಬಹುದಾಗಿತ್ತು ಎಂದು ಮಲ್ಯ ಹೇಳಿದ್ದಾರೆ.

ಇನ್ನು ಕೆಲ ಮಾಧ್ಯಮಗಳು ನಾನು ನನ್ನ ಸಂಪತ್ತನ್ನು ಅಡಗಿಸಿಟ್ಟಿದ್ದೇನೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ ಎಂದು ವರದಿ ಮಾಡಿದ್ದಾರೆ. ಈ ವರದಿ ನನಗೆ ಆತಂಕ ಉಂಟು ಮಾಡಿದೆ. ನಾನು ಆಸ್ತಿಯನ್ನು ಮುಚ್ಚಿಟ್ಟಿದ್ದರೇ, ನ್ಯಾಯಾಲಯದ ಮುಂದೆ ನನ್ನ ಆಸ್ತಿ 14 ಸಾವಿರ ಕೋಟಿ ರೂಪಾಯಿ ಎಂದು ಹೇಗೆ ಹೇಳಿಕೊಳ್ಳುತ್ತಿದ್ದೆ? ಯಾಕೆ ಹೀಗೆ ನನ್ನ ವಿಚಾರದಲ್ಲಿ ಸಾರ್ವಜನಿಕರನ್ನು ತಪ್ಪುದಾರಿಗೆ ಎಳೆಯುವ ಕೆಲಸವಾಗುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ತಮ್ಮ ಟ್ವಿಟ್‍ನಲ್ಲಿ ಅಸಮಧಾನ ವ್ಯಕ್ತಪಡಿಸಿದ್ದಾರೆ. 

ನಿನ್ನೆ ಪ್ರಧಾನಿ ಮೋದಿಯವರು ಸಂಸತನಲ್ಲಿ ಭಾಷಣ ಮಾಡುವ ವೇಳೆ ಮಲ್ಯ ಹೆಸರನ್ನು ಉಲ್ಲೇಖಿಸಿದ್ದರು. ಇದನ್ನು ಮಾಧ್ಯಮಗಳು ವರದಿ ಮಾಡಿದ್ದವು. ಇದನ್ನು ಆಧರಿಸಿ ವಿಜಯ್ ಮಲ್ಯ ಮೋದಿ ವಿರುದ್ಧ ತಮ್ಮ ಆಕ್ರೋಶವನ್ನು ಸರಣಿ ಟ್ವಿಟ್‍ಗಳ ಮೂಲಕ ಹೊರಹಾಕಿದ್ದಾರೆ. 
 


ಸಂಬಂಧಿತ ಟ್ಯಾಗ್ಗಳು

#Modi #Twitter #Vijay Malya #War


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ