ಬಿಎಸ್‍ವೈ ವಿರುದ್ಧ ಎಫ್‍ಆಯ್‍ಆರ್

 FIR Against BSY

14-02-2019

ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದ  ಬಿಎಸ್ ಯಡಿಯೂರಪ್ಪ ಆಡಿಯೋ ಕ್ಲಿಪ್ ಪ್ರಕರಣ ಇದೀಗ ಮತ್ತೊಂದು ತಿರುವು  ಪಡೆದುಕೊಂಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶಾಸಕ ಶಿವನಗೌಡ್ ನಾಯಕ್, ಪ್ರೀತ್‍ಂ ಗೌಡ್ ಹಾಗೂ ಯಡಿಯೂರಪ್ಪ ಮಾಧ್ಯಮ ಸಲಹೆಗಾರ  ಎಂ.ಬಿ.ಮರಂಕಲ್ ವಿರುದ್ಧ  ಗುರುಮಿಟ್ಕಲ್ ಶಾಸಕರ ಪುತ್ರ ಶರಣಗೌಡ್ ಕಂದಕೂರ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. 

ಆಡಿಯೋ ಸಿಡಿ ಪ್ರಕರಣದ ಮುಂದುವರಿದ ಭಾಗವಾಗಿ ಈ ದೂರು ದಾಖಲಾಗಿದ್ದು, ದೂರಿನಲ್ಲಿ, ಯಡಿಯೂರಪ್ಪ ಹಾಗೂ ಶಿವನಗೌಡ್,ಪ್ರೀತಮ್ ಗೌಡ್ ಹಾಗೂ ಎಂ.ಬಿ.ಮರಂಕಲ್ ನನಗೆ ಬಿಜೆಪಿಗೆ ಬರಬೇಕೆಂದು ಹಣದ ಆಮಿಷವೊಡ್ಡಿದ್ದು,  ಒಂದೊಮ್ಮೆ ಬಿಜೆಪಿಗೆ ಬರದಿದ್ದರೆ ಸರಿ ಇರುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿ ಶರಣಗೌಡ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

ರಾಯಚೂರು ಎಸ್‍ಪಿ ಕಚೇರಿಯಲ್ಲಿ ಮೂರು ಪುಟಗಳ ದೂರು ಸಲ್ಲಿಸಿರುವ  ಶರಣಗೌಡ್, ಬಳಿಕ ದೇವದುರ್ಗ ಪೊಲೀಸ್ ಠಾಣೆಯಲ್ಲೂ ದೂರು ನೀಡಿದ್ದು, ದೇವದುರ್ಗ ಪ್ರವಾಸಿ ಮಂದಿರದಲ್ಲಿ ತನ್ನ ಹಾಗೂ  ಬಿಎಸ್‍ವೈ ನಡುವೆ ನಡೆದ ಮಾತುಕತೆಯ ಸಂಪೂರ್ಣ ವಿವರನ್ನು ಪೊಲೀಸರಿಗೆ ಹೇಳಿದ್ದಾರೆ. 

ಇನ್ನು ಪೊಲೀಸರು ಶರಣಗೌಡ್ ಹೇಳಿಕೆ ಅನ್ವಯ  ಅಪರಾಧಿಕ ಒಳಸಂಚು ನಡೆಸಿದ್ದಕ್ಕಾಗಿ ಐಪಿಸಿ 120 ಬಿ,ಐಪಿಸಿ 506, 34 ಹಾಗೂ ಭ್ರಷ್ಟಾಚಾರ ಅಧಿನಿಯಮದ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಈ ಆಡಿಯೋ ಪ್ರಕರಣ ಬಿಎಸ್‍ವೈಗೆ ಉರುಳಾಗುವ ಎಲ್ಲ ಸಾಧ್ಯತೆಗಳು ವ್ಯಕ್ತವಾಗಿದ್ದು, ಬಿಜೆಪಿಗೆ ತೀವ್ರ ಮುಜುಗರ ತಂದಿಟ್ಟಿರೋದಂತು ನಿಜ. 


ಸಂಬಂಧಿತ ಟ್ಯಾಗ್ಗಳು

#B.S Y #Sharan Gwoda #FIR #Devdurga


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ