ಜೆಡಿಎಸ್ ಕಚೇರಿಯಾಗಿದೆ ತಾಜ್ ವೆಸ್ಟೆಂಡ್

 The JDS office is Taj Westend

14-02-2019

ರಾಜಕಾರಣಿಗಳು ಶಾಸಕರಾಗಿ, ಸಚಿವರಾಗಿ,ಮುಖ್ಯಮಂತ್ರಿಗಳಾಗಿ ಆಯ್ಕೆಯಾದ ಮೇಲೆ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡೋದನ್ನಾದರೂ ತಪ್ಪಿಸುತ್ತಾರೆ. ಆದರೆ ನಗರದ ಪಂಚತಾರಾ ಹೊಟೇಲ್‍ಗಳಿಗೆ ಹೋಗೋದನ್ನು ಮಾತ್ರ ಯಾವತ್ತು ತಪ್ಪಿಸೋದಿಲ್ಲ. ಅದರಲ್ಲೂ ಕರ್ನಾಟಕದಲ್ಲಿ ಆಡಳಿತದಲ್ಲಿರುವ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿಯವರಂತೂ ತಾಜ್ ವೆಸ್ಟೆಂಡ್‍ನಲ್ಲಿ ಒಂದು ಕೋಣೆಯನ್ನೆ ಹೊಂದಿದ್ದಾರೆ. ಆದರೆ ಇದೀಗ ಕೇವಲ ಸಿಎಂ ಕುಮಾರಸ್ವಾಮಿ ಮಾತ್ರವಲ್ಲ ಜೆಡಿಎಸ್ ಸಚಿವ ಸಂಪುಟವೇ ವೆಸ್ಟೆಂಡ್‍ನ ಖಾಯಂ ಅತಿಥಿಗಳಾಗಿರುವ ಸಂಗತಿ ಬೆಳಕಿಗೆ ಬಂದಿದೆ. 

ಹೌದು ತಾಜ್ ವೆಸ್ಟೆಂಡ್‍ನ ಮೂಲಗಳು ಹೇಳುವ ಪ್ರಕಾರ ಸಿಎಂ ಕುಮಾರಸ್ವಾಮಿ ಮಾತ್ರವಲ್ಲ ಅವರ ಸಚಿವ ಸಂಪುಟದ ಬಹುತೇಕ ಸಚಿವರು, ಅದರಲ್ಲೂ ವಿಶೇಷವಾಗಿ ಜೆಡಿಎಸ್‍ನಿಂದ ಸಚಿವ ಸಂಪುಟ ಸೇರಿದ ಸಚಿವರುಗಳು ತಮ್ಮ ಬಹುತೇಕ ಸಮಯವನ್ನು ತಾಜ್ ವೆಸ್ಟೆಂಡ್‍ನಲ್ಲೆ ಕಳೆಯುತ್ತಿದ್ದಾರಂತೆ. ಕೇವಲ ಸಚಿವರುಗಳು ಮಾತ್ರವಲ್ಲ ಜೆಡಿಎಸ್‍ನ ಎಮ್‍ಎಲ್‍ಎಗಳು ಕೂಡ ಅಲ್ಲೆ ಇರತೊಡಗಿದ್ದು, ಒಂದು ರೀತಿ ಜೆಡಿಎಸ್‍ನ ಕೇಂದ್ರ ಕಚೇರಿಯೇ ತಾಜ್ ವೆಸ್ಟೆಂಡ್ ಎಂದರೂ ತಪ್ಪಿಲ್ಲ ಅಂತಿದ್ದಾರೆ ಜನರು.

 ರಾಜ್ಯದಲ್ಲಿ ಬರ ಸೇರಿದಂತೆ ನೂರಾರು ಸಮಸ್ಯೆಗಳಿದ್ದು, ಜಿಲ್ಲೆಗಳಲ್ಲಿ ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಆದರೆ ಇಲ್ಲಿ ಮಾತ್ರ ಶಾಸಕರು, ಸಚಿವರು ಐಷಾರಾಮಿ ಹೊಟೇಲ್‍ನಲ್ಲಿ ಮೋಜು ಮಾಡುತ್ತಿದ್ದು, ಕ್ಷೇತ್ರಗಳಿಗೆ ಭೇಟಿ ನೀಡುವ ಕುರಿತು ಚಿಂತನೆಯನ್ನು ನಡೆಸದೆ ಹಾಯಾಗಿದ್ದಾರೆ ಎನ್ನಲಾಗುತ್ತಿದೆ. 
ಬಿಎಸ್‍ಪಿ ಶಾಸಕ ಮಹೇಶ್‍ರಿಂದ ಆರಂಭಿಸಿ ಬಹುತೇಕ ಸದಸ್ಯರು ತಾಜ್ ವೆಸ್ಟೆಂಡ್ ಖಾಯಂ ರೂಂ ಪಡೆಯುವ ಮಟ್ಟಕ್ಕೆ ಮೋಜು-ಮಸ್ತಿ ಮೈಗೂಡಿಸಿಕೊಂಡಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುವುದನ್ನೆ ಮರೆತಂತೆ ಬದುಕುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. 
ಈ ಹಿಂದೆ ಸಿಎಂ ಕುಮಾರಸ್ವಾಮಿ ತಾಜ್ ವೆಸ್ಟೆಂಡ್‍ನಲ್ಲಿ ರೂಂ ಪಡೆದಿರುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೆ ಈಗ ಜೆಡಿಎಸ್ ನವರೆಲ್ಲರೂ ಕೂಡ ತಾಜ್ ವೆಸ್ಟೆಂಡ್‍ನಂತಹ ಫೈವ್ ಸ್ಟಾರ್ ಹೊಟೇಲ್‍ಗಳ ಮೊರೆ ಹೋಗಿದ್ದು, ಸರ್ಕಾರದ ಬೊಕ್ಕಸಕ್ಕೆ ಅನಗತ್ಯ ಹೊರೆಯಾಗುತ್ತಿದ್ದರು ಯಾರು ಚಕಾರ ಎತ್ತುತ್ತಿಲ್ಲ. ಜೆಡಿಎಸ್ ಕಚೇರಿಯನ್ನೆ ಹೊಟೇಲ್‍ಗೆ ಶಿಫ್ಟ್ ಮಾಡಿ ದರ್ಬಾರ ನಡೆಸುತ್ತಿದ್ದು ರಾಜಕಾರಣಿಗಳ ಈ ಅಂಧಾದರ್ಬಾರಗೆ ಕೊನೆಯಿಲ್ಲವೇ ಎಂದು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#The Taj westend #Kumarswamy #Jds Office #Mlas


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ