ಕನ್ನಡಕ್ಕಿಲ್ಲ ಪೇಟಾ

No Peta To Kannada

14-02-2019

ರಜನಿಕಾಂತ್ ಬಹುನೀರಿಕ್ಷಿತ ಚಿತ್ರ ಪೇಟಾ ಕನ್ನಡಕ್ಕೆ   ಡಬ್ ಆಗಲಿದೆ ಎಂದು ರಜನಿಕಾಂತ್ ಅಭಿಮಾನಿಗಳು ಸಂಭ್ರಮದಿಂದ ಕಾಯುತ್ತಿದ್ದರು. ಆದರೆ ರಜನಿಕಾಂತ್ ಮಾತ್ರ  ಪೇಟಾ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಲಾರೆ ಎಂದಿದ್ದಾರೆ.  ಬಹುದಿನಗಳಿಂದ ಪೇಟಾ ಕನ್ನಡಕ್ಕೆ ಡಬ್ ಆಗಲಿದೆ ಎಂದ ಚರ್ಚೆ ಆರಂಭವಾಗಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟ ರಜನಿಕಾಂತ್, ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡೋದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. 

ಹಲವು ದಶಕಗಳ ಕಾಲ ಕನ್ನಡ ಚಿತ್ರರಂಗ  ಡಬ್ಬಿಂಗ್ ವಿರೋಧಿಸಿ ಹೋರಾಟ ಮಾಡುತ್ತಾ ಬಂದಿದೆ. ಆದರೆ  ಈಗ ಇಂಡಿಯಾದ ಕಾಂಪಿಟೇಶನ್ ಕಮಿಷನ್ ಅಫ್ ಇಂಡಿಯಾ  ಡಬ್ಬಿಂಗ್ ವಿರೋಧಿಸುತ್ತಿರುವ ಕನ್ನಡ ಇಂಡಸ್ಟ್ರಿಗೆ  ದಂಡ ಹಾಕಿದ ನಂತರ ಈಗ ಅದು ತನ್ನ ಯೋಚನೆಯನ್ನು  ಬದಲಾಯಿಸಿಕೊಂಡಿದೆ.  ಆದರೂ  ಕೂಡ ಕನ್ನಡ ಚಿತ್ರೋದ್ಯಮ  ಅನೇಕರು ಇಂದಿಗೂ  ಡಬ್ಬಿಂಗ್ ವಿರೋಧಿಸುವ  ಮನಸ್ಥಿತಿಯಿಂದ ಹೊರಬಂದಿಲ್ಲ.  ಹಾಗಾಗಿ ನಾನು ಪೇಟಾವನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಲಾರೆ ಎಂದು  ರಜನಿ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 


ಕನ್ನಡದಲ್ಲಿ ಡಬ್ಬಿಂಗ ವಿರೋದಿ ಹೋರಾಟ ಹಾಗೂ ಡಬ್ಬಿಂಗ ಎರಡು ಒಟ್ಟಿಗೆ ನಡೆದುಕೊಂಡು ಬರುತ್ತಿರುವುದು ಈಗಾಗಲೆ ಸಾಕಷ್ಟು ಬಾರಿ ನಡೆದಿದೆ. ಇದಕ್ಕೆ ಹಲವು ಚಿತ್ರಗಳು ಕನ್ನಡಕ್ಕೆ ಡಬ್ಬಿಂಗ್ ಆಗಿಲ್ಲ. 


ಇದೀಗ ರಜನಿಕಾಂತ್ ಕೂಡ ಯಾವುದೆ ವಿವಾದಗಳಿಗೆ ಒಳಗಾಗಲು ಇಷ್ಟಪಡುವುದಿಲ್ಲ ಎಂದಿದ್ದು, ಕನ್ನಡ ಚಿತ್ರರಂಗದಲ್ಲಿ ತಮಿಳು ನಟನಾಗಿ ಬೆಳೆದಿರುವ ನಾನು ನನ್ನ ಚಿತ್ರರಂಗದ ವೃತ್ತಿ ಬದುಕಿನ  ಕೊನೆಯ ಹಂತದಲ್ಲಿ ಈ ಚಿತ್ರವನ್ನು ಕನ್ನಡಕ್ಕೆ ಡಬ್‍ಮಾಡಿ ವಿವಾದಕ್ಕೆ ಒಳಗಾಗಲಾರೆ ಎಂದಿದ್ದಾರೆ. ಇದರಿಂದ ಪೇಟಾ ಚಿತ್ರವನ್ನು ಕನ್ನಡದಲ್ಲಿ ನೋಡುವ ಕನಸು ಹೊತ್ತಿದ್ದ ಹಲವರಿಗೆ ನಿರಾಸೆಯಾಗಿದೆ. 


ಸಂಬಂಧಿತ ಟ್ಯಾಗ್ಗಳು

#Peta #Kannada #Rajanikanth #Dubbing


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ