ಪೊಲಿಟಿಕಲ್ ಹೈಡ್ರಾಮಾ ಹಾಸನಕ್ಕೆ ಶಿಫ್ಟ್, ರಂಗೇರಿದ ಜೆಡಿಎಸ್-ಬಿಜೆಪಿ ಕದನ

Political Hydrama Shifted to Hasan

13-02-2019

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶರಣಗೌಡ್ ಅವರೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವಿಧಾನಸಭೆಯ ಕಲಾಪಗಳನ್ನು ಬಲಿತೆಗೆದುಕೊಂಡ ಬೆನ್ನಲ್ಲೇ, ಈ ಆಡಿಯೋದ ಇನ್ನೊಂದು ವಿಚಾರಕ್ಕೆ ಅತ್ತ ಹಾಸನ ಜಿಲ್ಲೆ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಯುದ್ಧ ಭೂಮಿಯಾಗಿ ಬದಲಾಗುತ್ತಿದೆ. 

ಬಿಎಸ್‍ವೈ ಶರಣಗೌಡರ್ ಬಳಿ ಮಾತನಾಡಿದ ಆಡಿಯೋದಲ್ಲಿ ಇನ್ನೊರ್ವ ಶಾಸಕ ಪ್ರೀತಂ ಗೌಡ್ ಆಡಿಯೋ ಸಹ ಇದೆ ಎನ್ನಲಾಗಿದೆ. ಹೀಗೆ ಶರಣಗೌಡ ಜೊತೆ ಮಾತನಾಡುವ ವೇಳೆ ಶಾಸಕ ಪ್ರೀತಂ ಗೌಡ್ ದೇವೆಗೌಡರು ಹಾಗೂ ಸಿಎಂ ಕುಮಾರಸ್ವಾಮಿ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಾರೆ ಎಂಬ ಮಾತು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಜೆಡಿಎಸ್ ಕಾರ್ಯಕರ್ತರು ಹಾಸನದ ಪ್ರೀತ್‍ಂ ಗೌಡ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. 

ಇನ್ನು ಬಿಜೆಪಿ ಶಾಸಕರ ಮನೆ ಮುಂದೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕಿಡಿಗೇಡಿಗಳು ಎಮ್‍ಎಲ್‍ಎ ಪ್ರೀತ್‍ಂ ಗೌಡರ ಮನೆಯತ್ತ ಕಲ್ಲು ತೂರಿದ್ದಾರೆ. ಈ ಕಲ್ಲು ಕಾರ್ಯಕರ್ತನಿಗೆ ತಗುಲಿದ್ದು, ಕಣ್ಣಿನ ಮೇಲ್ಬಾಗ ಹಾಗೂ  ಹಣೆಗೆ ಪೆಟ್ಟಾಗಿದೆ. ಗಾಯಗೊಂಡಿರುವ ಕಾರ್ಯಕರ್ತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಇನ್ನೊಂದೆಡೆ ಬಿಜೆಪಿ ಶಾಸಕನ ಮನೆ ಮೇಲೆ ನಡೆದ ದಾಳಿಗೆ ಬಿಜೆಪಿ ಪಾಳಯ ಆಕ್ರೋಶ ವ್ಯಕ್ತಪಡಿಸಿದ್ದು, ಘಟನೆ ಖಂಡಿಸಿದೆ. ಅಷ್ಟೇ ಅಲ್ಲ ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿ ಹಾಸನ ಬಂದ್ ಗೆ ಕರೆ ನೀಡಲಾಗಿದ್ದು, ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ  15 ಶಾಸಕರ ಜೊತೆಗೆ ಹಾಸನಕ್ಕೆ ತೆರಳಲು ಸಿದ್ಧವಾಗಿದ್ದಾರೆ. 

ಆಡಿಯೋ ಕ್ಲಿಪ್‍ನಲ್ಲಿ ದೇವೆಗೌಡರ ವಿಕೇಟ್ ಇನ್ನೇನು ಒಂದೆರಡು ತಿಂಗಳಿನಲ್ಲಿ  ಉರುಳುತ್ತೆ. ಆಮೇಲೆ ಕುಮಾರಸ್ವಾಮಿಯವರ ಆರೋಗ್ಯ ಕೂಡ ಸರಿ ಇಲ್ಲ. ಅವರಿಬ್ಬರ ನಂತರ ಪಕ್ಷದ ಬಾಗಿಲು ಮುಚ್ಚಲಿದೆ ಎಂಬರ್ಥದಲ್ಲಿ ಪ್ರೀತ್‍ಂ ಗೌಡ್ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಾಸನದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಕದನ ತಾರಕಕ್ಕೇರಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Hasan #Jds #Bjp #Political Hydrama


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ