ಗಾಂಜಾ ಮಾರುತ್ತಿದ್ದ ವಿದ್ಯಾರ್ಥಿಗಳ ಬಂಧನ

Detention of students selling Ganja

13-02-2019

ನೆರೆಯ ಆಂಧ್ರಪ್ರದೇಶದಿಂದ ಗಾಂಜಾ ಎಸ್‍ಎಲ್‍ಡಿ ಪೇಪರ್‍ಗಳನ್ನು ಖರೀದಿಸಿಕೊಂಡು ಬಂದು  ಸಾಫ್ಟ್‍ವೇರ್ ಉದ್ಯೋಗಿಗಳು ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಮೋಜು ಮಾಡುತ್ತಿದ್ದ ಪದವಿ ವಿದ್ಯಾರ್ಥಿ ಸೇರಿ ಇಬ್ಬರನ್ನು ಸುದ್ದಗುಂಟೆ ಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಗಾಂಜಾ ಮಾರಾಟ ಮಾಡುತ್ತಿದ್ದ ಸುದ್ದಗುಂಟೆ ಪಾಳ್ಯದ ಜುನೇದ್ ಅಹ್ಮದ್ (24) ಹಾಗೂ ಕೇರಳದ ತ್ರಿಶೂರ್‍ನ ಗುರುವಾಯುನ ನೀಲಕಂಠನ್ (19) ಬಂಧಿಸಿ 18 ಎಸ್‍ಎಲ್‍ಡಿ ಸ್ಟಿಫ್‍ಗಳು, 10 ಕೆಜಿ ಗಾಂಜಾ ಸೇರಿ ಆರೂವರೆ ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ. ಬೋರಲಿಂಗಯ್ಯ ಅವರು ತಿಳಿಸಿದ್ದಾರೆ.

ಆರೋಪಿಗಳಲ್ಲಿ ನೀಲಕಂಠನ್, ನ್ಯೂ ಆರಿಜನ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಬಿಎ ಪದವಿ ಓದುತ್ತಿದ್ದಾನೆ.ಮತ್ತೊಬ್ಬ ಆರೋಪಿ ಜುನೇದ್ ಪಿಯುಸಿಗೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಗಾಂಜಾ ಮಾರಾಟಕ್ಕಿಳಿದಿದ್ದ. ಇವರಿಬ್ಬರು ಕಳೆದ 2 ತಿಂಗಳಿನಿಂದ ಆಂಧ್ರಪ್ರದೇಶದ ಕರ್ನೂಲ್‍ನಿಂದ ಗಾಂಜಾ ಖರೀದಿಸಿಕೊಂಡು ಬರುತ್ತಿದ್ದರು.

ನಗರಕ್ಕೆ ರೈಲು-ಬಸ್‍ಗಳ ಮೂಲಕ ತಂದ ಗಾಂಜಾವನ್ನು ಇಬ್ಬರು ಹಂಚಿಕೊಂಡು ಮಾರತ್‍ಹಳ್ಳಿ, ಜಯದೇವ, ಕ್ರೈಸ್ಟ್ ಕಾಲೇಜು, ಕೋರಮಂಗಲ, ಬನ್ನೇರುಘಟ್ಟ ಇನ್ನಿತರ ಕಡೆಗಳಲ್ಲಿ ಮಾರಾಟ ಮಾಡುತ್ತಿದ್ದರು

ಆರೋಪಿ ಜುನೇದ್ ನಾಲ್ಕೈದು ವರ್ಷಗಳಿಂದ ಗಾಂಜಾ ಮಾರಾಟದಲ್ಲಿ ತೊಡಗಿದ್ದು, ಕಳೆದ ವರ್ಷ ಮೈಕೋ ಲೇಔಟ್ ಪೆÇಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಕಳೆದ ಡಿಸೆಂಬರ್‍ನಲ್ಲಿ ಜಾಮೀನಿನ ಮೇಲೆ ಹೊರ ಬಂದ ಆತ, ಮತ್ತೆ ಗಾಂಜಾ ಮಾರಾಟ ಕೃತ್ಯಕ್ಕಿಳಿದಿದ್ದ.

ಆರೋಪಿಗಳು ಮೋಜಿನ ಜೀವನಕ್ಕಾಗಿ ಗಾಂಜಾ ಹಾಗೂ ಎಸ್‍ಎಲ್‍ಡಿ ಸ್ಟಿಫ್ ಮಾರಾಟದಲ್ಲಿ ತೊಡಗಿದ್ದರು. ಆರೋಪಿಗಳಿಗೆ ಗಾಂಜಾ ಹಾಗೂ ಎಸ್‍ಎಲ್‍ಡಿ ಸ್ಟಿಫ್‍ಗಳನ್ನು ನೀಡುತ್ತಿದ್ದ ಕರ್ನೂಲ್‍ನ ವ್ಯಕ್ತಿಯ ಮಾಹಿತಿ ದೊರೆತಿದ್ದು, ಆತನನ್ನು ಬಂಧಿಸಿ ನಗರಕ್ಕೆ ತರಲು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಸುದ್ದಗುಂಟೆ ಪಾಳ್ಯದ ಪಿಜಿಯೊಂದರ ಬಳಿ ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿರುವುದನ್ನು ಗಿರಾಕಿಯೊಬ್ಬನು ನೀಡಿದ ಮಾಹಿತಿಯಾಧರಿಸಿ ಕಾರ್ಯಾಚರಣೆ ಕೈಗೊಂಡ ಇನ್ಸ್‍ಪೆಕ್ಟರ್ ಬೋಳೆತ್ತಿನ ಮತ್ತವರ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಿಬಿಎಂ ಪದವಿ ಓದುತ್ತಿದ್ದ ವಿದ್ಯಾರ್ಥಿ ಕೇರಳ ಮೂಲದ ನೀಲಕಂಠನ್ ಗಾಂಜಾ ಮಾರಾಟದಲ್ಲಿ ಸಿಕ್ಕಿ ಬಿದ್ದಿದ್ದಾನೆ. ಆತ ವ್ಯಾಸಂಗ ಮಾಡುತ್ತಿದ್ದ ಮಾರತ್‍ಹಳ್ಳಿಯ ನ್ಯೂ ಆರಿಜನ್ ಕಾಲೇಜಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಕಾಲೇಜಿನ ಮುಖ್ಯಸ್ಥರಿಗೆ ಮಾಹಿತಿ ನೀಡಿ ವಿದ್ಯಾರ್ಥಿಗಳು ಮುಂದೆ ಈ ರೀತಿಯ ಅಕ್ರಮ ಕೃತ್ಯಗಳಲ್ಲಿ ತೊಡಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗುವುದು ಎಂದು ತಿಳಿಸಿದ್ದಾರೆ.
 


ಸಂಬಂಧಿತ ಟ್ಯಾಗ್ಗಳು

#Ganja Case #Arrest #Students #Bangalore


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ