ಇಂಡಿಗೋ ಏರ್ ವಿಮಾನದ ಎಂಜಿನ್‍ನಲ್ಲಿ ತಾಂತ್ರಿಕ ದೋಷ

 Technical Error on the Indigo Air Engine

13-02-2019

ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬ್ಯಾಂಕಾಕ್‍ಗೆ ಮಂಗಳವಾರ ಹೊರಟ ಇಂಡಿಗೋ ಏರ್ ವಿಮಾನದ ಎಂಜಿನ್‍ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಮ್ಯಾನ್ಮಾರ್‍ನ ಯಾಂಗೂನ್‍ನಲ್ಲಿ ಇಳಿಸಲಾಗಿದೆ.

ಎಂಜಿನ್‍ನಲ್ಲಿ ದೋಷ ಕಂಡುಬಂದಿದ್ದನ್ನು ಗಮನಿಸಿದ ಪೈಲಟ್‍ಗಳು ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

129 ಪ್ರಯಾಣಿಕರು ಹಾಗೂ 6 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಇಂಡಿಗೋ ಏರ್ ವಿಮಾನದ ಎರಡು ಎಂಜಿನ್‍ಗಳ ಪೈಕಿ ಒಂದರಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಇಂಡಿಗೋ ಏರ್ ಅಧಿಕಾರಿಗಳು  ತಿಳಿಸಿದ್ದಾರೆ.

ವಿಮಾನ ಹಾರಾಟ(ಟೇಕ್‍ಆಫ್)ನಡೆಸಲು ಹೋದ ನಂತರ ಒಂದು ಎಂಜಿನ್‍ನಲ್ಲಿ ಆಯಿಲ್ ಪ್ರೆಶರ್ ಕಾಣಿಸಿಕೊಂಡಿದ್ದು, ಪೈಲಟ್ ಮುನ್ನೆಚ್ಚರಿಕೆ ವಹಿಸಿ ಯಾಂಗೂನ್‍ನಲ್ಲಿ ಇಳಿಸಿದ್ದಾರೆ. ತಕ್ಷಣವೇ ಅಲ್ಲಿಂದ ಮರು ಬುಕ್ಕಿಂಗ್ ಮಾಡಿ ಬ್ಯಾಂಕಾಕ್‍ಗೆ ಪ್ರಯಾಣಿಕರನ್ನು ಕಳುಹಿಸಲಾಗಿದೆ.ದೋಷ ಕಾಣಿಸಿಕೊಂಡ ಹಿನ್ನಲೆಯಲ್ಲಿ 129 ಪ್ರಯಾಣಿಕರಿಗೂ ಊಟ, ತಿಂಡಿ, ವಾಸ್ತವ್ಯ ಒದಗಿಸಲಾಗಿದೆ.
 


ಸಂಬಂಧಿತ ಟ್ಯಾಗ್ಗಳು

#Indigo #Error # Technical #BA


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ