ಮಾರ್ಚ್ 21 ರಂದು ತೆರೆಗೆ ಬರಲಿದೆ ಕೇಸರಿ 

 Kesari Will be Screening on March 21

13-02-2019

ಸಿಖ್ಖರ್ ಯುದ್ಧದ ಕತೆಯನ್ನು ಒಳಗೊಂಡ ಕೇಸರಿ ಚಿತ್ರದ ಫಸ್ರ್ಟ ಲುಕ್ ಬಿಡುಗಡೆಯಾಗಿದ್ದು, ಬಾಲಿವುಡ್‍ನ ಪವರ್ ಹೌಸ್ ಖ್ಯಾತಿಯ ಅಕ್ಷಯಕುಮಾರ್ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ.  ಇದೊಂದು ನಂಬಲು ಅಸಾಧ್ಯವಾದ ಸತ್ಯ ಎಂಬ ಟ್ಯಾಗ್‍ಲೈನ್‍ನೊಂದಿಗೆ ಈ ಚಿತ್ರ ತೆರೆಗೆ ಬರುತ್ತಿದೆ. 

ಈ ಚಿತ್ರದ ಫಸ್ರ್ಟ ಲುಕ್ ಪೋಸ್ಟರ್ ನ್ನು  ಅಕ್ಷಯಕುಮಾರ್ ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.  ಫಸ್ರ್ಟ ಲುಕ್‍ನೊಂದಿಗೆ ಪುಟ್ಟ ವಿಡಿಯೋವನ್ನು ಚಿತ್ರತಂಡ ರಿಲೀಸ್ ಮಾಡಿದ್ದು, 30 ಸೆಕೆಂಡ್‍ನ ಈ ವಿಡಿಯೋದಲ್ಲಿ  ಸಿಖ್ಖರಿಂದ 1897 ರಲ್ಲಿ ನಡೆದ ಸಾರ್ಗಘಿ ಯುದ್ಧ ಸನ್ನಿವೇಶದ ತುಣುಕು ಇದೆ. ಶಸ್ತ್ರಾಸ್ತ್ರ ಹಿಡಿದ ಸೈನಿಕರು ಓಡುವ ದೃಶ್ಯವನ್ನು ತೋರಿಸಲಾಗಿದೆ. 
ಇನ್ನು ಕೇಸರಿ ಚಿತ್ರ ನಿರ್ಮಾಪಕರು ಅಕ್ಷಯ್ ಕುಮಾರ್ ಅಭಿಮಾನಿಗಳಿಗಾಗಿಯೇ ವಿಶೇಷವಾದ ಪೋಸ್ಟರ್‍ವೊಂದನ್ನು ಬಿಡುಗಡೆಗೊಳಿಸಿದ್ದು, ಇದರಲ್ಲಿ ಅಕ್ಷಯ್ ಕುಮಾರ್, ಕೇಸರಿಯ ತಾರ್ಬನ್ ಸುತ್ತಿಕೊಂಡು  ಕತ್ತಿಯೊಂದಿಗೆ ನಿಂತಿದ್ದಾರೆ. 

ಕೇಸರಿ ಚಿತ್ರದ ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆ ಅಕ್ಷಯ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. 1897 ರಲ್ಲಿ 10 ಸಾವಿರ ಅಪ್ಘಾನರ ವಿರುದ್ಧ 21 ಸಿಖ್ಖರು ನಡೆಸಿದ ಸ್ವಾತಂತ್ರ್ಯ ಹೋರಾಟ ಸಾರ್ಗಘಿ ಕತೆ ಈ ಚಿತ್ರದ ಮೂಲಕ ತೆರೆಗೆ ತರಲಿದೆ. ಸಾರ್ಗಘಿ ಹೋರಾಟದ ನೇತೃತ್ವ ವಹಿಸಿದ್ದ ಹವಿಲ್ದಾರ್ ಇಸಾರ್ ಸಿಂಗ್ ಪಾತ್ರದಲ್ಲಿ ಅಕ್ಷಯ್ ಕುಮಾರ ಕಾಣಿಸಿಕೊಳ್ಳಲಿದ್ದಾರೆ. 
ಅನುರಾಗ್ ಸಿಂಗ್ ಈ ಸಿನಿಮಾ ನಿರ್ದೇಶಿಸುತ್ತಿದ್ದು, ಪರಿಣಿತಿ ಚೋಪ್ರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಕ್ಷಯ್ ಹಾಗೂ ಪರಿಣಿತಿ ಅಭಿಮಾನಿಗಳಿಗೆ ಈ ಚಿತ್ರ ಹೋಳಿ ಹಬ್ಬದ ಗಿಫ್ಟ್ ಆಗಿದ್ದು, ಮಾರ್ಚ್ 21 ರಂದು ರಿಲೀಸ್ ಆಗಲಿದೆ. 
 


ಸಂಬಂಧಿತ ಟ್ಯಾಗ್ಗಳು

#Kesari #March 21 #Akashy Kumar #Release


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ