ರಾಷ್ಟ್ರಪ್ರಶಸ್ತಿಗೆ ಕುರುಕ್ಷೇತ್ರ

 Kurukshetra To National Award

13-02-2019

ಕುರುಕ್ಷೇತ್ರ ಸ್ಯಾಂಡಲವುಡ್‍ನಲ್ಲಿ ಸಾಕಷ್ಟು ನೀರಿಕ್ಷೆ ಮೂಡಿಸಿದ ಚಿತ್ರ. ಕನ್ನಡ ಚಿತ್ರರಂಗದ ಹಲವು ಹಿರಿಯ ನಟರು ಹಾಗೂ ಯುವನಟರು ಒಟ್ಟಿಗೆ ಕಾಣಿಸಿಕೊಂಡಿರುವ ಈ ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಇದು ಚಾಲೆಂಜಿಂಗ್ ಸ್ಟಾರ್ ದರ್ಶನ 50 ನೇ ಚಿತ್ರವಾಗಿದ್ದು, ಇದರಲ್ಲಿ ದರ್ಶನ ಕೂಡ ವಿಭಿನ್ನ ಗೆಟಪ್ ಹಾಗೂ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಡುಗಡೆಗೂ ಮುನ್ನವೇ ಸಾಕಷ್ಟು ನೀರಿಕ್ಷೆ ಮೂಡಿಸಿರುವ ಈ ಚಿತ್ರವನ್ನು ರಾಷ್ಟ್ರ ಪ್ರಶಸ್ತಿಗೆ ಪರಿಗಣಿಸುವಂತೆ ಚಿತ್ರತಂಡ ಕೋರಿದೆ. 

2018 ರಲ್ಲಿ ನಿರ್ಮಾಣವಾದ 2ಡಿ ಸಿನಿಮಾಗೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. 3 ಗಂಟೆ 5 ನಿಮಿಷಗಳ ಈ ಸಿನಿಮಾ ಇದಾಗಿದ್ದು,  ದೊಡ್ಡ ಬಜೆಟ್ ಚಿತ್ರವಾಗಿರೋದರಿಂದ  ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದೆ. ಸಧ್ಯ ಈ ಚಿತ್ರದ 3ಡಿ ವರ್ಷನ್ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದ್ದು, ನಾಗಣ್ಣ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. 

ಲಹರಿ ಆಡಿಯೋಗೆ ಈ ಚಿತ್ರದ ಆಡಿಯೋ ಹಕ್ಕು ಮಾರಾಟವಾಗಿದ್ದು, ಮಾರ್ಚ್ ತಿಂಗಳಲ್ಲಿ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ. ಅಲ್ಲದೆ ಮೇ ವೇಳೆಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. 

ಈ ಚಿತ್ರದಲ್ಲಿ ಅದ್ದೂರಿ ಸೆಟ್‍ಗಳ ಮೂಲಕ ಚಿತ್ರೀಕರಣ ನಡೆಸಲಾಗಿದ್ದು, ದರ್ಶನ ದುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೇ, ರವಿಚಂದ್ರದ ಕೃಷ್ಣನಾಗಿ, ಕರ್ಣನಾಗಿ ಅರ್ಜುನ್ ಸರ್ಜಾ, ಅಭಿಮನ್ಯುವಾಗಿ ನಿಖಿಲ್ ಕುಮಾರಸ್ವಾಮಿ ನಟಿಸಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Kurukshetra #Darshan # National Award #Movie


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ