ತಮಿಳುನಾಡಿನಲ್ಲಿ ಟಿಕ್‍ಟಾಕ್ ಬ್ಯಾನ್ ಕರ್ನಾಟಕದಲ್ಲಿ ಯಾವಾಗ?

Tictak Ban in Tamil Nadu  When Is In Karnataka?

13-02-2019

ಮೊಬೈಲ್‍ನಲ್ಲಿ ಮಾಯಾಜಾಲದಲ್ಲಿ ಮುಳುಗಿ ಹೋಗಿರುವ ಜನರನ್ನು ಇನ್ನಷ್ಟು ಮೋಡಿ ಮಾಡುತ್ತಿರೋದು ಟಿಕ್ ಟಾಕ್ ಅನ್ನೋ ಆ್ಯಪ್. ಮಾತು ಬರುವ ಮಕ್ಕಳಿಂದ ಆರಂಭಿಸಿ ಹಲ್ಲು ಉದುರಿ ಹೋಗಿರುವ ಅಜ್ಜಿಯ ತನಕೆ ಎಲ್ಲರೂ ಈ ಆ್ಯಪ್ ನ ತೆಕ್ಕೆಗೆ ಸಿಲುಕಿದ್ದಾರೆ. ಹಾಡು, ಡೈಲಾಗ್, ಡ್ಯಾನ್ಸ್‍ಗೆ ನಾವು ಲಿಪ್ ಸಿಂಕ್ ಮಾಡಿ ಅಭಿನಯಿಸುವ ಈ ಆ್ಯಪ್ ಈಗ ಮಾನಸಿಕ ಸ್ಥಿಮಿತ ಕೆಡಿಸುವಷ್ಟರ ಮಟ್ಟಿಗೆ ಜನರನ್ನು ಆಕರ್ಷಿಸಿದ್ದು,  ಅತಿಯಾದ ಟಿಕ್ ಟಾಕ್ ಮೋಹಕ್ಕೆ ಯುವಜನತೆ, ದಂಪತಿಗಳು, ಮಕ್ಕಳು ಬಲಿಯಾಗುತ್ತಿದ್ದಾರೆ. ಈ ಆ್ಯಪ್‍ನಿಂದಾಗುತ್ತಿರುವ ಆತಂಕಕಾರಿ ಬೆಳವಣಿಗೆ ಗಮನಿಸಿದ ತಮಿಳುನಾಡು ಸರ್ಕಾರ ಈ ಆ್ಯಪ್ ನಿಷೇಧಕ್ಕೆ ಚಿಂತನೆ ನಡೆಸಿದೆ.
 
ಹೌದು ಟಿಕ್ ಟಾಕ್ ಆ್ಯಪ್ ಇವತ್ತಿನ ಜನರಿಗೆ ಅನ್ನ ನೀರಿಗಿಂತ ಹೆಚ್ಚು ಆಕರ್ಷಣಿಯ ಮತ್ತು ಅನಿವಾರ್ಯದಂತಾಗಿದೆ. ಶಾಲೆ, ಆಸ್ಪತ್ರೆ, ಬಸ್ ನಿಲ್ದಾಣ, ಬೆಟ್ಟ,ಗುಡ್ಡ ಜಲಪಾತ ಹೀಗೆ ಎಲ್ಲಿ ಬೇಕೋ ಅಲ್ಲಿ ಜನರು ಟಿಕ್‍ಟಾಕ್ ಬಳಸಿ ವಿಡಿಯೋ, ಡೈಲಾಗ್ ಸಿದ್ಧಪಡಿಸಿ ಸಾಮಾಜಿಲ ಜಾಲತಾಣಗಳಿಗೆ ಹರಿಬಿಟ್ಟು ಎಂಜಾಯ್ ಮಾಡತೊಡಗಿದ್ದಾರೆ. ಆದರೆ ಈ ವಿಡಿಯೋಗಳು ದುರ್ಬಳಕೆಯಾಗುತ್ತಿದ್ದು, ಮಹಿಳೆಯರಿಗೆ ಸೂಕ್ತ ರಕ್ಷಣ ಇಲ್ಲದಂತಾಗಿದೆ. ಹೀಗೆ ಟಿಕ್‍ಟಾಕ್ ಬಳಸುವ ಮಹಿಳೆಯರು ಭಾವಚಿತ್ರವನ್ನು ಎಡಿಟ್ ಮಾಡಿ ಅಶ್ಲೀಲ್ ಚಿತ್ರಗಳಿಗೆ ಅಂಟಿಸಿ ಮಾರಾಟಮಾಡುವ ಜಾಲವೂ ಹುಟ್ಟಿಕೊಂಡಿದೆ. ಹೀಗಾಗಿ ಈ ರೀತಿಯ ಆ್ಯಪ್‍ಗಳು ಮಹಿಳೆಯರಿಗೆ, ಯುವತಿಯರಿ ಮಾರಕವಾಗಿ ಪರಿಣಮಿಸುತ್ತಿದೆ. 

ತಮಿಳುನಾಡು ವಿಧಾನಸಭೆಯಲ್ಲಿ ಇತ್ತೀಚಿಗೆ ಈ ವಿಚಾರ ಪ್ರಸ್ತಾಪವಾಗಿದ್ದು, ª ಮಣಿತನೇಯ ಜನನಾಯಕ ಪಕ್ಷದ ತಮೀಮುನ್ ಅನ್ಸಾರಿ  ಅವರು ಟಿಕ್‍ಟಾಕ್ ಆ್ಯಪ್ ಬ್ಯಾನ್ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದರು. ತಮಿಳುನಾಡಿನಲ್ಲಿ ಹೀಗೆ ಟಿಕ್‍ಟಾಕ್ ಮಾಡುವ ಮಹಿಳೆಯರ ಪೋಟೋವನ್ನು ಕೆಟ್ಟದಾಗಿ ಎಡಿಟ್ ಮಾಡುವುದನ್ನೆ ದಂಧೆ ಮಾಡಿಕೊಂಡಿದ್ದ ತಂಡವನ್ನು ಚೆನೈ ಪೊಲೀಸರು ಬಂಧಿಸಿದ್ದನ್ನು ಅವರು ಉಲ್ಲೇಖಿಸಿದ್ದರು. 

ಶಾಸಕರ ಈ ಪ್ರಸ್ತಾಪವನ್ನು ರಾಜ್ಯ ಮಾಹಿತಿ ತಂತ್ರಜ್ಞಾನ ಸಚಿವ ಎಂ ಮಣಿಕಂಠನ್ ಗಂಭೀರವಾಗಿ ಪರಿಗಣಿಸಿದ್ದು, ಈ ಆ್ಯಪ್‍ನ್ನು ಜನರು ಅತಿಯಾಗಿ ಬಳಸುತ್ತಿರುವುದರಿಂದ ಬ್ಯಾನ್ ಮಾಡುವುದಾಗಿ ಹೇಳಿದ್ದಾರೆ. ಇದು ಚೀನಾ ಮೂಲಕ ಆ್ಯಪ್ ಆಗಿದ್ದು, ಇದರ ಬಳಕೆದಾರರ ವಿಡಿಯೋ, ಪೋಟೋಗೆ ಯಾವುದೆ ಸುರಕ್ಷತೆಯಿಲ್ಲ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿಯೇ ತಮಿಳುನಾಡು ಸರ್ಕಾರ ನಿಷೇಧಿಸಲು ಮುಂದಾಗಿದೆ. 

ಇನ್ನು ಈ ಟಿಕ್ ಟಾಕ್‍ಗೆ ಕರ್ನಾಟಕದಲ್ಲೂ ಕೋಟ್ಯಾಂತರ ಅಭಿಮಾನಿಗಳಿದ್ದು, ಲಕ್ಷಾಂತರ ಜನರ ಮೊಬೈಲ್‍ನಲ್ಲಿ ಈ ಆ್ಯಪ್ ಜಾಗ ಪಡೆದುಕೊಂಡಿದೆ. ಅಲ್ಲದೆ ವಿದ್ಯಾರ್ಥಿಗಳು ಪರೀಕ್ಷಾ ವೇಳೆಯಲ್ಲೂ ಓದೋದನ್ನು ಬಿಟ್ಟು ಈ ಆ್ಯಪ್ ಬಳಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಎಷ್ಟೋ ಮನೆಗಳಲ್ಲಿ ಈ ಆ್ಯಪ್ ಬಳಕೆಯೇ ಸಂಸಾರದಲ್ಲಿ ಒಡಕು ಮೂಡಿಸಲು ಕಾರಣವಾಗಿದೆ. ಹೀಗಾಗಿ ರಾಜ್ಯದಲ್ಲೂ ಗೃಹ ಇಲಾಖೆ ಹಾಗೂ ತಂತ್ರಜ್ಞಾನ ಇಲಾಖೆ ಇತ್ತ ಗಮನ ಹರಿಸಿ ಆ್ಯಪ್ ನಿಷೇಧಕ್ಕೆ ಮನಸ್ಸು ಮಾಡಬೇಕಿದೆ. 


ಸಂಬಂಧಿತ ಟ್ಯಾಗ್ಗಳು

#Tamilnadu #Ban #Tictak #Karnataka


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ