ಅತೃಪ್ತರಿಗೆ ಶರಣಾದ ಸಿಎಂ ಕುಮಾರಸ್ವಾಮಿ 

 CM Kumaraswamy who surrendered to dissatisfied People

12-02-2019

ಕೊನೆಗೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಅತೃಪ್ತರ ಆಸೆ ಈಡೇರಿದಂತಿದೆ. ಅತೃಪ್ತ ಶಾಸಕರ ಬೆದರಿಕೆಗೆ ಮಣಿದಿರುವ ಸಿಎಂ ಕುಮಾರಸ್ವಾಮಿ ಸರ್ಕಾರವನ್ನು ಉಳಿಸಿಕೊಳ್ಳಲೇ ಬೇಕೆಂಬ ಕಾರಣಕ್ಕೆ ಅಸಮಧಾನಗೊಂಡ ಶಾಸಕರ ಜೊತೆ ಮಾತುಕತೆ ನಡೆಸಿ ಸಚಿವ ಸ್ಥಾನ ನೀಡುವುದಾಗಿ ಮನವೊಲಿಸಲು ಮುಂಧಾಗಿದ್ದಾರೆ ಎಂಬ ಮಾಹಿತಿ ಸೂಪರ್ ಸುದ್ದಿಗೆ ಲಭ್ಯವಾಗಿದೆ. 

ರಮೇಶ್ ಜಾರಕಿಹೊಳಿ ಸೇರಿದಂತೆ ಅತೃಪ್ತ ಶಾಸಕರ ಮನವೊಲಿಸುವಲ್ಲಿ ವಿಫಲವಾಗಿದ್ದ ಕಾಂಗ್ರೆಸ್ ಶಾಸಕರ ನಡವಳಿಕೆಯಿಂದ ಬೇಸತ್ತು ಶಾಸಕರ ಅಮಾನತ್ತಿಗೆ ಸ್ಪೀಕರ್‍ಗೆ ಮನವಿ ಮಾಡಿತ್ತು. ಆದರೆ ದಿನದಿಂದ ದಿನಕ್ಕೆ ಅತೃಪ್ತ ಶಾಸಕರ ಸಂಖ್ಯೆ ಏರುತ್ತಿರೋದಿಕ್ಕೆ  ಹೆದರಿದ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ಕೈಬಿಟ್ಟಿರುವ ಶಾಸಕರೊಂದಿಗೆ ತಾವೆ ಖುದ್ದು ಮಾತನಾಡಿ ಮನವೊಲಿಸುವ ಪ್ರಯತ್ನ ನಡೆಸಲಿದ್ದಾರೆ. 

ಸರ್ಕಾರ ರಚನೆಯ ಕನಸಿನಲ್ಲಿದ್ದ ಬಿಜೆಪಿಯನ್ನು ಕುಮಾರಸ್ವಾಮಿ ಸಿಡಿ ಪ್ರಕರಣದಲ್ಲಿ ಕಟ್ಟಿಹಾಕಿದ್ದು, ರಾಜ್ಯದ ಜನತೆಯ ಮುಂದೆ ತಲೆ ಎತ್ತದಂತೆ ಮಾಡಿಬಿಟ್ಟಿದ್ದಾರೆ. ಜೊತೆಗೆ ಶಾಸಕ ರಮೇಶ್ ಜಾರಕಿಹೊಳಿ ಜೊತೆ ಸಿಎಂ ಕುಮಾರಸ್ವಾಮಿ ದೂರವಾಣಿಯಲ್ಲಿ ಮಾತನಾಡಲಿದ್ದು, ಯು.ಟಿ.ಖಾದರ್‍ರಿಂದ ಸಚಿವ ಸ್ಥಾನ ಕಿತ್ತು ನೀಡುವುದಾಗಿ ಒಪ್ಪಿಸಲಿದ್ದಾರೆ ಎನ್ನಲಾಗುತ್ತಿದೆ. 
 ಜಾಧವ್, ಜಾರಕಿಹೊಳಿ ಸೇರಿದಂತೆ ನಾಲ್ವರು ಅತೃಪ್ತರ ಜೊತೆಗೆ ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಹಾಗೂ ಇನ್ನೊರ್ವ ಜೆಡಿಎಸ್ ಶಾಸಕರು ಕೂಡ ಮುಂಬೈ ಸೇರಿದ್ದು ಸರ್ಕಾರದ ಬಹುಮತ ನಿಧಾನಕ್ಕೆ ಕುಸಿಯತೊಡಗಿದೆ. ಹೀಗಾಗಿ ಕುಮಾರಸ್ವಾಮಿ ಸರ್ಕಾರ ಉಳಿಸಿಕೊಳ್ಳಲು ಕೊನೆಯ ಸರ್ಕಸ್ ಆರಂಭಿಸಿದ್ದು, ಕಾಂಗ್ರೆಸ್ ಮಾತನ್ನೇ ಕೇಳದ ಅತೃಪ್ತರು ಕುಮಾರಸ್ವಾಮಿ ಮನವೊಲಿಕೆಗೆ ಸ್ಪಂದಿಸ್ತಾರಾ ಕಾದು ನೋಡಬೇಕಿದೆ. 


ಸಂಬಂಧಿತ ಟ್ಯಾಗ್ಗಳು

#Karnataka #Surrendered # Kumaraswamy #Dissatisfied


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Super
  • Madesh
  • Kuli