ಕುತೂಹಲ ಮೂಡಿಸಿದ ಎಚ್.ಸಿ.ಮಹದೇವಪ್ಪ ಭವಿಷ್ಯ

Whats HC Mahadevappa Political Future

12-02-2019

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ತಮ್ಮ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಕರ್ನಾಟಕದ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಹಿರಿಯ ನಾಯಕ ಹೆಚ್.ಸಿ.ಮಹದೇವಪ್ಪ ಅವರಿಗೆ ದುಂಬಾಲು ಬಿದ್ದಿವೆ.

ಹೀಗೆ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳಿಂದ ಇಂತಹ ಆಹ್ವಾನ ಪಡೆದಿರುವ ಹೆಚ್.ಸಿ.ಮಹದೇವಪ್ಪ, ಆ ಮೂಲಕ ರಾಜ್ಯ ರಾಜಕಾರಣದಲ್ಲಿ ತಮಗರಿವಿಲ್ಲದಂತೆ ಹೊಸ ಇತಿಹಾಸವೊಂದನ್ನು ಬರೆದಿದ್ದಾರೆ.

ಯಾಕೆಂದರೆ ಒಂದು ಚುನಾವಣೆಯಲ್ಲಿ ತಮ್ಮ ಪಕ್ಷದ ವತಿಯಿಂದ ಸ್ಪರ್ಧಿಸಿ ಎಂದು ಇತ್ತೀಚಿನ ದಿನಗಳಲ್ಲಿ ಮೂರೂ ಪಕ್ಷಗಳಿಂದ, ಅದೂ ಬೇರೆ, ಬೇರೆ ಕ್ಷೇತ್ರಗಳಿಂದ ಸ್ಪರ್ಧಿಸುವ ಆಫರ್ ಅನ್ನು ಯಾವ ನಾಯಕರೂ ಪಡೆದಿಲ್ಲ.

ಮೂಲಗಳ ಪ್ರಕಾರ, ಕಾಂಗ್ರೆಸ್ ಪಕ್ಷ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜಾಪುರ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಹೆಚ್.ಸಿ.ಮಹದೇವಪ್ಪ ಅವರ ಮನ ಒಲಿಸುವ ಕೆಲಸ ಮಾಡುತ್ತಿದೆ.

ಅದೇ ರೀತಿ ಜೆಡಿಎಸ್ ಕೂಡಾ ಹೆಚ್.ಸಿ.ಮಹದೇವಪ್ಪ ಅವರ ನಿರಂತರ ಸಂಪರ್ಕದಲ್ಲಿದ್ದು ಕೋಲಾರ ಲೋಕಸಭಾ ಕ್ಷೇತ್ರದಿಂದ ತಮ್ಮ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಪುಸಲಾಯಿಸಿದೆ.

ಈ ಮಧ್ಯೆ ಕರ್ನಾಟಕದ ಪ್ರಮುಖ ವಿರೋಧ ಪಕ್ಷ ಬಿಜೆಪಿ ಕೂಡಾ ಹೆಚ್.ಸಿ.ಮಹದೇವಪ್ಪ ಅವರಿಗೆ ಗಂಟು ಬಿದ್ದಿದ್ದು ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಮಲ ಪಾಳೆಯದ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಕೇಳಿಕೊಂಡಿದೆ.

ಆದರೆ ತಮಗೆ ಬಂದ ಆಫರ್ರುಗಳ ಸುರಿಮಳೆಗೆ ಹೆಚ್.ಸಿ.ಮಹದೇವಪ್ಪ ನೋಡೋಣ ಎಂದಷ್ಟೇ ಹೇಳಿದ್ದಾರಾದರೂ  ಯಾವ ತೀರ್ಮಾನ ತೆಗೆದುಕೊಂಡಿಲ್ಲ. ಆದರೆ ಮೂರೂ ಪಕ್ಷಗಳಿಂದ ಇಂತಹ ಆಫರ್ ಪಡೆದಿರುವ ಮಹದೇವಪ್ಪ ಮಾತ್ರ ಹೊಸ ದಾಖಲೆ ಮಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

#Karnataka #Political # H.C.Mahdevappa #Future


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ