ಶೋಭಾ ಕರಂದ್ಲಾಜೆ ಅಕೌಂಟ್‍ಗೆ ಕನ್ನ 

 Shobha Karandlaje Account Theft

12-02-2019

ಡಿಜಿಟಲ್ ಕಳ್ಳತನ ಎಲ್ಲೆ ಮೀರಿದೆ. ಜನಸಾಮಾನ್ಯರು ದುಡಿದು ಸಂಗ್ರಹಿಸಿದ ಹಣವನ್ನು  ಅದೆಲ್ಲೋ ಕೂತ ಕಳ್ಳರು ಕ್ಷಣಮಾತ್ರದಲ್ಲೇ ಲಪಟಾಯಿಸಿ ನುಂಗಿ ನೀರು ಕುಡಿಯುತ್ತಿದ್ದಾರೆ. ಇಷ್ಟು ದಿನಗಳ ಕಾಲ ಈ ಸಂಕಷ್ಟಕ್ಕೆ ಜನಸಾಮಾನ್ಯರು ಮಾತ್ರ ಬಲಿಯಾಗುತ್ತಿದ್ದರು, ಆದರೆ ಇದೀಗ ಸ್ವತಃ ಸಂಸದೆ ಶೋಭಾ ಕರಂದ್ಲಾಜೆ ಕೂಡ ಬಲಿಪಶುವಾಗಿದ್ದು, ಅವರ ವೈಯಕ್ತಿಕ ಖಾತೆಯಿಂದ ಕಳ್ಳರು 20 ಲಕ್ಷ ರೂಪಾಯಿ ಲಪಟಾಯಿಸಿ ಶಾಕ್ ನೀಡಿದ್ದಾರೆ. 

ಶೋಭಾ ಕರಂದ್ಲಾಜೆಯವರ ದೆಹಲಿಯಲ್ಲಿರುವ ಬ್ಯಾಂಕ್ ಖಾತೆಗೆ ಕಳ್ಳರು ಕನ್ನ ಹಾಕಿದ್ದು, ಬರೋಬ್ಬರಿ 20 ಲಕ್ಷ ರೂಪಾಯಿ ದೋಚಿದ್ದಾರೆ.  ಇದನ್ನು ತಿಳಿದು ಶಾಕ್ ಆದ ಸಂಸದೆ ಶೋಭಾ ಕರಂದ್ಲಾಜೆ, ನವದೆಹಲಿಯ ಸಂಸತ್ ಭವನ ಮಾರ್ಗದ ಪೊಲೀಸರಿಗೆ ದೂರು ನೀಡಿದ್ದಾರೆ. 

ಮಾಜಿ ಸಚಿವೆ ಶೋಭಾ ಕರಂದ್ಲಾಜೆಯವರ ಸ್ಟೇಟ್ ಬ್ಯಾಂಕ್‍ನ ಸಂಸದರ ವೇತನ ಖಾತೆಯಿಂದ ಹಣ ಲಪಟಾಯಿಸಲಾಗಿದ್ದು, ತಮಗೆ ಅರಿವೇ ಇಲ್ಲದಂತೆ ಈ ಕೃತ್ಯ ಎಸಗಲಾಗಿದೆ ಎಂದು ಶೋಭಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹ್ಯಾಕರ್‍ಗಳೇ ಈ ಕೃತ್ಯ ಎಸಗಿಸುವ ಶಂಕೆ ವ್ಯಕ್ತವಾಗಿದೆ. 

ಈ ಹಿಂದೆ ಇದೇ ಪ್ರಭಾವಿಗಳ ಬ್ಯಾಂಕ್ ಖಾತೆಯನ್ನೇ ಟಾರ್ಗೆಟ್ ಮಾಡಿದ್ದ ಚೋರರು ನಟ ಹಾಗೂ ರಾಜಕಾರಣಿ ಸಿ.ಪಿ.ಯೋಗೇಶ್ವರ್ ಅಕೌಂಟ್‍ನಿಂದ ಬಾರಿ ಮೊತ್ತದ ಹಣ ದೋಚಿ ಪರಾರಿಯಾಗಿದ್ದರು. ದೇಶದಾದ್ಯಂತ ಈ ಡಿಜಿಟಲ್ ಲೂಟಿ ಎಗ್ಗಿಲ್ಲದೇ ನಡೆದಿದ್ದು, ಕೆಲವೆಡೆ ಪ್ರತಿನಿತ್ಯ ಅಮಾಯಕ ಗ್ರಾಹಕರು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಇನ್ನು ಇಂಥ ಕೃತ್ಯ ನಡೆಸುವವರಿಗೆ ಬ್ಯಾಂಕ್‍ನ ಆಂತರಿಕ ಸಿಬ್ಬಂದಿಗಳ ಬೆಂಬಲ ಇದೆ ಎಂಬ ಮಾತು ಕೂಡ ಕೇಳಿಬಂದಿದೆ. 
 


ಸಂಬಂಧಿತ ಟ್ಯಾಗ್ಗಳು

#Shobha Kardlaje #Theft #Account #Dehli


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ