ರಾಜ್ಯಕ್ಕೆ ಬರ್ತಿದ್ದಾರೆ ಬಿಜೆಪಿ ಚಾಣಾಕ್ಯ ಶಾ 

Amith Sha Karnataka Visit

12-02-2019

ರಾಜ್ಯ ಬಿಜೆಪಿ ಶಾಸಕರಿಗೆ ಆಮಿಷ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಬಿಡುಗಡೆ ಮಾಡಿದ ಆಡಿಯೋ ಸಿಡಿಯಿಂದ ಸಮಸ್ಯೆಗೀಡಾಗಿ ಕಂಗಾಲಾಗಿರುವಾಗಲೇ ರಾಜ್ಯಕ್ಕೆ ಬಿಜೆಪಿಯ ಚುನಾವಣಾ ಚಾಣಾಕ್ಯ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ  ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಫೆ 14 ಹಾಗೂ 21 ರಂದು ರಾಜ್ಯ ಭೇಟಿ ನಿಗದಿಯಾಗಿತ್ತು. ಆದರೆ ಇದೀಗ ಬಿಜೆಪಿ ಸಂಕಷ್ಟದ ಹಿನ್ನೆಲೆಯಲ್ಲಿ ಶಾ ಭೇಟಿ ಇನ್ನಷ್ಟು ಮಹತ್ವ ಪಡೆದುಕೊಂಡಿದೆ. 

ಈಗಾಗಲೆ ಗಂಡುಮೆಟ್ಟಿನ ನೆಲ ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಭರ್ಜರಿ ಚುನಾವಣಾ ಭಾಷಣ ಮಾಡಿದ್ದು,  ಚುನಾವಣಾ ಕಿಡಿ ಹೊತ್ತಿಸಿದ್ದಾರೆ. ಇದರ ಬಳಿಕ ಈಗ ಶಾ ಸರದಿಯಾಗಿದ್ದು, ಅಮಿತ್ ಶಾ ಭಾಷಣ ಸಾಕಷ್ಟು ಕುತೂಹಲ ಮೂಡಿಸಿದೆ. 

ಫೆ 14 ರಂದು ಸಿಂಧನೂರಿನಲ್ಲಿ  ನಡೆಯುವ ಶಕ್ತಿಕೇಂದ್ರದ ಪ್ರಮುಖರ ಸಭೆಯಲ್ಲಿ ಅಮಿತ್ ಶಾ ಭಾಗವಹಿಸಲಿದ್ದು, ಅದೇ ದಿನ ಸಂಜೆ  ಹೊಸಪೇಟೆಯಲ್ಲಿ ಪಕ್ಷದ ಪ್ರಮುಖರು ಹಾಗೂ ಪ್ರಬುದ್ಧರ ಜೊತೆ ಚರ್ಚೆ ನಡೆಸಲಿದ್ದಾರೆ. ಅದೇ ದಿನ ಸಂಜೆ ಹೊಸಪೇಟೆಯಲ್ಲಿ ಬಿಜೆಪಿಯ ಆಯ್ದ ಕಾರ್ಯಕರ್ತರ ಜೊತೆ ಚರ್ಚೆ ನಡೆಸಲಿದ್ದಾರೆ. 

ಇನ್ನು ಫೆಬ್ರವರಿ 21 ರಂದು ಚಿಕ್ಕಬಳ್ಳಾಪುರದಲ್ಲಿ ಶಕ್ತಿಕೇಂದ್ರ ಪ್ರಮುಖರ ಜತೆಗೆ ಸಭೆ ನಡೆಸಲಿದ್ದಾರೆ. ಇದೇ ವೇಳೆ ರಾಜ್ಯದ ಎಲ್ಲ ಬಿಜೆಪಿ ನಾಯಕರು ಚಿಕ್ಕಬಳ್ಳಾಪುರದಲ್ಲಿ ಶಾ ರನ್ನ ಭೇಟಿಯಾಗಲಿದ್ದು, ಲೋಕಸಭಾ ಚುನಾವಣೆಗೆ ಹೇಗೆ ಸಜ್ಜಾಗಬೇಕು ಎಂಬುದರ ಬಗ್ಗೆ ನಾಯಕರಿಗೆ ಮಾರ್ಗದರ್ಶನ ಮಾಡಲಿದ್ದಾರೆ. ಇದೇ ವೇಳೆ ಸಿಡಿ ವಿಚಾರದ ಕುರಿತು ಮುಖಾಮುಖಿ ಚರ್ಚೆಯಾಗಲಿದ್ದು, ರಾಜ್ಯ ನಾಯಕರ ವರ್ತನೆಯ ಬಗ್ಗೆ ಅಸಮಧಾನಗೊಂಡಿರುವ ಅಮಿತ್ ಶಾ ಬಿಎಸ್‍ವೈ ಸೇರಿದಂತೆ ಎಲ್ಲ ನಾಯಕರಿಗೂ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. 

ಅಮಿತ್ ಶಾ ರಾಜ್ಯ ಬಿಜಪಿ ನಾಯಕರಿಗೆ ಶತಾಯ-ಗತಾಯ ರಾಜ್ಯ ಬಜೆಟ್ ಮಂಡನೆಗೂ ಮುನ್ನವೇ ಸರ್ಕಾರ ಉರುಳಿಸುವಂತೆ ಸೂಚನೆ ನೀಡಿದ್ದರು ಎನ್ನಲಾಗಿದೆ. ಆದರೆ ರಾಜ್ಯ ಬಿಜೆಪಿ ನಾಯಕರು ಈ ಪ್ರಯತ್ನದಲ್ಲಿ ವಿಫಲರಾಗಿದ್ದಲ್ಲದೇ,  ಆಡಿಯೋ ಸಿಡಿ ವಿವಾದದಲ್ಲಿ ಸಿಲುಕಿಕೊಂಡು ರಾಷ್ಟ್ರ ನಾಯಕರಿಗೆ ಇನ್ನಷ್ಟು ಮುಜುಗರ  ತಂದಿಟ್ಟಿದ್ದಾರೆ. ಹೀಗಾಗಿ ಶಾ ಭೇಟಿ ರಾಜ್ಯ ಬಿಜೆಪಿ ನಾಯಕರಿಗೆ ಭಯ ಮೂಡಿಸಿರೋದಂತು ನಿಜ. 


ಸಂಬಂಧಿತ ಟ್ಯಾಗ್ಗಳು

#Amith Sha #Visit #Karnataka #Bjp


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ