ಇನ್ನೆಷ್ಟು ಜೀವದ ಬಲಿಬೇಕು? ಪೈಲಟ್ ಪತ್ನಿಯ ನೋವಿನ ಪ್ರಶ್ನೆ

 How Much More  Life Shouldbe Sacrificed? The Pilot

12-02-2019

ದೇಶ ವಿಜ್ಞಾನ-ತಂತ್ರಜ್ಞಾನ, ಯುದ್ಧದ ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ಎಷ್ಟು ಮುಂದುವರಿದಿದ್ದರೂ ಇಂದಿಗೂ ಸೈನಿಕರ, ಪೈಟಲ್‍ಗಳ ದುರ್ಮರಣ ತಪ್ಪಿಸುವುದಕ್ಕೆ ಸಾಧ್ಯವಾಗಿಲ್ಲ. ದೇಶ ಸೇವೆಗೆ ಹೊರಟುನಿಂತ ಯೋಧರನ್ನು ಕಳಿಸಿಕೊಡುವ ಕುಟುಂಬದವರಿಗೂ, ಸ್ವತಃ ದೇಶಸೇವೆಗೆ ಹೊರಟ ಸೈನಿಕರ ಎದೆಯಲ್ಲೂ ಈ ಅಳುಕು ಕಾಡುತ್ತಿರುತ್ತದೆ. ಮೊನ್ನೆಯಷ್ಟೇ ಯುದ್ಧ ವಿಮಾನ ಪತನದಿಂದ ಸಾವನ್ನಪ್ಪಿದ ಪೈಲಟ್ ಪತ್ನಿಯೊರ್ವರು ಈ ವಿಚಾರದ ಬಗ್ಗೆಯೇ ತಮ್ಮ ನೋವು ತೋಡಿಕೊಂಡಿದ್ದು, ಇನ್ನೇಷ್ಟು ಜೀವ ಪಡೆಯಬೇಕು ಎಂದು ಪ್ರಶ್ನಿಸಿದ್ದಾರೆ. 

ಫೆ. 1 ರಂದು ಎಚ್‍ಎಎಲ್‍ನ ವಿಮಾನ ನಿಲ್ದಾಣದಲ್ಲಿ  ಮಿರಾಜ್ 2000 ತರಬೇತಿ ವಿಮಾನ ಪತನಗೊಂಡು ಸ್ಕಾಡ್ರನ್ ಲೀಡರ್‍ಗಳಾದ ಸಮೀರ್ ಅಬ್ರೋಲ್ ಮತ್ತು ಸಿದ್ಧಾರ್ಥ ನೇಗಿ ಮೃತಪಟ್ಟಿದ್ದರು. ಈ ಪೈಕಿ ಪೈಲಟ್ ಸಮೀರ್ ಅಬ್ರೋಲ್ ಪತ್ನಿ ಗರೀಮಾ ಅಬ್ರೋಲ್ ತಮ್ಮ ಪೇಸ್‍ಬುಕ್‍ನಲ್ಲಿ ಪತಿ ಅಗಲಿಕೆಯ ನೋವು ಹಂಚಿಕೊಂಡಿದ್ದು,  ವ್ಯವಸ್ಥೆಯ ಲೋಪದೋಷಗಳ ಬಗ್ಗೆ ಸೂಕ್ಷ್ಮವಾಗಿ ಪ್ರಶ್ನಿಸಿದ್ದಾರೆ. 

ಫೇಸ್‍ಬುಕ್‍ನಲ್ಲಿ ಗರೀಮಾ, " ನನ್ನ ಕಣ್ಣೀರು ಇಂದಿಗೂ ನಿಂತಿಲ್ಲ. ಪತಿಯ ಅಗಲಿಕೆಯ ನೋವು ಸದಾ ಕಾಡುತ್ತದೆ. ಅವರು ಇನ್ನೂ ನನ್ನ ಮುಂದೆ ಮಾತನಾಡುತ್ತಿದ್ದಾರೆ. ಟೀ ಕುಡಿಯುತ್ತಿದ್ದಾರೆ ಎಂದೇ ಭಾಸವಾಗುತ್ತಿದೆ. ನನ್ನ ಪತಿ ದೇಶ ಸೇವೆಯ ತುಡಿತವಿದ್ದ ಹೆಮ್ಮೆಯ ಭಾರತೀಯ. ಇನ್ನೂ ಇಂತಹ  ಅದೆಷ್ಟು ಪೈಲಟ್‍ಗಳು ಮಿರಾಜ್ 2000 ನಂತಹ ವಿಮಾನ ದುರಂತಗಳಿಗೆ ಬಲಿಯಾಗಬೇಕು? ವ್ಯವಸ್ಥೆಯಲ್ಲಿನ ದೋಷ ಸರಿಪಡಿಸುವವರು ಯಾರು? ಎಂದು ಬರೆದಿದ್ದಾರೆ. ಪರೋಕ್ಷವಾಗಿ ವಾಯುಪಡೆಯ ಅವ್ಯವಸ್ಥೆಯನ್ನು ಪ್ರಶ್ನಿಸಿದ್ದಾರೆ. 

ಕೇವಲ ಗರೀಮಾ ಮಾತ್ರವಲ್ಲದೇ ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಇನ್ನೊರ್ವ ಪೈಲಟ್ ಸಿದ್ಧಾರ್ಥ ನೇಗಿ ಸಹೋದರರು ಕೂಡ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರತಿವರ್ಷ ತರಬೇತಿ ವಿಮಾನಗಳ ಪರಿಕ್ಷಾರ್ಥ ಹಾರಾಟಗಳ ಸಂದರ್ಭದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ಸ್ಪಂದಿಸಬೇಕಾದ ವಾಯುಪಡೆಯ ಅಧಿಕಾರಿಗಳು ಮೌನ ವಹಿಸುತ್ತಾರೆ ಎಂಬುದು ಘಟನೆಯಲ್ಲಿ ಪ್ರಾಣ ಕಳೆದುಕೊಳ್ಳುವ ಯೋಧರ ಕುಟುಂಬದ ನೋವು. ಇದೀಗ ಇಬ್ಬರು ಪೈಟಲ್‍ಗಳ ಸಾವು ಇಂತಹುದೇ ಘಟನೆಗೆ ಉದಾಹರಣೆಯಾಗಿದೆ. 
 


ಸಂಬಂಧಿತ ಟ್ಯಾಗ್ಗಳು

#India #Question #Pilot #Hal Plane Crash


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ