ತೆರೆಗೆ ಬರ್ತಿದೆ ಮೂಗುತಿ ಸುಂದರಿ ಲೈಫ್ಸ್ಟೋರಿ

12-02-2019
ಮೂಗುತಿ ಸುಂದರಿ, ಟೆನ್ನಿಸ್ ಸೆನ್ಸೇಷನ್ ಎಂದೆಲ್ಲ ಕರೆಸಿಕೊಳ್ಳುವ ಸಾನಿಯಾ ಮಿರ್ಜಾ ಯಾರಿಗೆ ಗೊತ್ತಿಲ್ಲ ಹೇಳಿ. ಒಂದು ಕಾಲದಲ್ಲಿ ಯುವಜನತೆ ಸಿನಿಮಾ ನಟಿಯರಷ್ಟೇ ಆಸಕ್ತಿಯಿಂದ, ಅಭಿಮಾನದಿಂದ ಸಾನಿಯಾ ಮಿರ್ಜಾ ಪೋಟೋ, ಆಟ ಎಲ್ಲವನ್ನು ಆರಾಧಿಸುತ್ತಿದ್ದರು. ಇಂತಹ ಸುಂದರಿ ಆಟಗಾರ್ತಿಯ ಬದುಕು ಕೂಡ ಆಟದಷ್ಟೇ ಇಂಟ್ರಸ್ಟಿಂಗ್. ಸಾನಿಯಾ ಮಿರ್ಜಾರ ಈ ಇಂಟ್ರಸ್ಟಿಂಗ್ ಕಹಾನಿ ಸಧ್ಯದಲ್ಲೇ ಚಿತ್ರವಾಗಿ ತೆರೆ ಮೇಲೆ ಬರಲಿದೆ.
ಹೌದು 2019 ಭಾರತದಲ್ಲಿ ಬಯೋಪಿಕ್ ವರ್ಷವಾಗೋ ಎಲ್ಲ ಸಾಧ್ಯತೆ ಇದೆ. ಬಾಳ ಠಾಕ್ರೆ, ನರೇಂದ್ರ ಮೋದಿ ಬಳಿಕ ಇದೀಗ ಪಡ್ಡೆಹೈಕಳ ಕನಸಿನ ರಾಣಿಯಾಗಿದ್ದ ಸಾನಿಯಾಮಿರ್ಜಾ ಬಯೋಪಿಕ್ ಕೂಡ ತೆರೆಗೆ ಬರಲಿದೆ. ದೇಶದಾದ್ಯಂತ ಮನೆಮಾತಾದ ಬ್ಲಾಕ್ ಬಸ್ಟರ್ ಮೂವಿ ಉರಿ ದ ಸರ್ಜಿಕಲ್ ಸ್ಟ್ರೈಕ್ ನಿರ್ಮಿಸಿರುವ ನಿರ್ಮಾಪಕ ರೊನ್ನಿ ಸ್ಕ್ರಿವ್ವಾಲಾ ಈ ಬಯೋಪಿಕ್ ನಿರ್ಮಿಸಲಿದ್ದಾರೆ.
ವಿಶ್ವದಾದ್ಯಂತ ಉತ್ತಮ ಟೆನ್ನಿಸ್ ಆಟಗಾರ್ತಿ ಎನ್ನಿಸಿಕೊಂಡಿರುವ ಸಾನಿಯಾ ಮಿರ್ಜಾ ಅವರು ಯುವಜನತೆಯ ಮೇಲೆ ಬೀರಿದ ಪ್ರಭಾವ ಅಪಾರ. ಆದರೆ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವ ಸಾನಿಯಾ ಮಿರ್ಜಾ ಕ್ರೀಡಾ ಜರ್ನಿ ಹೂವಿನ ಹಾದಿಯಾಗಿರಲಿಲ್ಲ. ಸಾನಿಯಾ ಮಿರ್ಜಾ ತಮ್ಮ ಉಡುಗೆ-ತೊಡುಗೆಯಿಂದ ಆರಂಭಿಸಿ ಎಲ್ಲ ವಿಚಾರಕ್ಕೂ ಅತಿ ಹೆಚ್ಚು ಟೀಕೆಗೆ ಒಳಗಾಗಿದ್ದರು. ಆದರೂ ಇವುಗಳನ್ನೆಲ್ಲ ಎದುರಿಸಿ ಸಾನಿಯಾ ಮಿರ್ಜಾ ತಮ್ಮ ವೃತ್ತಿ ಬದುಕಿನಲ್ಲಿ ಇತರರಿಗೆ ಮಾದರಿಯಾಗುವಂತ ಸಾಧನೆ ಮಾಡಿದ್ದಾರೆ.
ಹೀಗಾಗಿ ಈ ಏರಿಳಿತದ ಕತೆಯನ್ನು ಯುವಜನತೆಗೆ ಮಾದರಿಯಾಗಿರುವಂತೆ ಉದ್ದೇಶದಿಂದ ಚಿತ್ರ ನಿರ್ಮಿಸಲಾಗುತ್ತಿದೆ ಅಂತಾರೆ ನಿರ್ಮಾಪಕ ರೊನ್ನೀ ಸ್ಕ್ರಿವ್ವಾಲಾ. ಇನ್ನು ಸಾನಿಯಾ ಮಿರ್ಜಾ ಅವರ ಪಾತ್ರವನ್ನು ಯಾರು ನಿರ್ಮಿಸುತ್ತಾರೆ ಎಂಬ ಕುತೂಹಲಕ್ಕೆ ಇನ್ನು ಉತ್ತರ ಸಿಕ್ಕಿಲ್ಲ. ತಮ್ಮ ಜೀವನಗಾಥೆ ಸಿನಿಮಾ ಆಗೋತ್ತಿರೋದರ ಕುರಿತು ಪ್ರತಿಕ್ರಿಯೆ ನೀಡಿರುವ ಸಾನಿಯಾ ಮಿರ್ಜಾ, ನನ್ನ ಬದುಕಿನ ಕತೆ ತೆರೆ ಮೇಲೆ ಬರುತ್ತಿದೆ ಎಂದು ಗೊತ್ತಾದಾಗ ಒಂದು ರೀತಿ ಕುತೂಹಲ ಮತ್ತು ನರ್ವಸ್ ಎರಡು ಆಗುತ್ತಿದೆ ಎಂದರು. ಒಟ್ಟಿನಲ್ಲಿ ಈ ವರ್ಷ ಒಂದಿಷ್ಟು ಪ್ರೇರಣಾದಾಯಕ ಬಯೋಪಿಕ್ಗಳು ತೆರೆಗೆ ಬರಲಿದ್ದು, ಜನ ಈ ಚಿತ್ರಗಳನ್ನು ಹೇಗೆ ಸ್ವೀಕರಿಸುತ್ತಾರೆ ಕಾದು ನೋಡಬೇಕಿದೆ.
ಒಂದು ಕಮೆಂಟನ್ನು ಹಾಕಿ