ಫೇಸ್‍ಬುಕ್‍ಗೂ ಬಂತು ನಿಯಂತ್ರಣ

Control To  Facebook

12-02-2019

ಚುನಾವಣೆ ಹತ್ತಿರವಾಗುತ್ತಿದ್ದಂತೆ ಪೇಸ್‍ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳು ರೂಮರ್, ಗಾಸಿಪ್ ಹಬ್ಬಿಸುವ ಹಾಗೂ ಮಾನಹಾನಿ ಮಾಡುವ ಅಸ್ತ್ರಗಳಾಗಿ ಬಳಸಲ್ಪಡುತ್ತವೆ. ಇದರಿಂದ ಎಷ್ಟೋ ಅಭ್ಯರ್ಥಿಗಳು ಸೋಲು ಅನುಭವಿಸಿದ್ದು ಉಂಟು. ಹೀಗಾಗಿ ಈ ಬಾರಿ ಇಂತಹ ಅವಾಂತರಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಫೇಸ್‍ಬುಕ್  ಸುಳ್ಳು ಸುದ್ದಿ ಪ್ರಸಾರ ತಡೆಯಲು ಪ್ರತ್ಯೇಕ ಸಮಿತಿ ರಚಿಸಿದೆ. 

ವಿಶೇಷವಾಗಿ ಭಾರತದಲ್ಲಿನ ತನ್ನ ನೆಟ್‍ವರ್ಕ್‍ನಲ್ಲಿ  ಸುಳ್ಳು ಸುದ್ದಿ ಹಬ್ಬಿಸೋದನ್ನು  ತಡೆಯಲು ಫೇಸ್‍ಬುಕ್  ಸಮಿತಿ  ರಚಿಸಿದೆ.  ಇಂಡಿಯಾ ಟುಡೇ ಗ್ರೂಪ್,ಸ್ಟಾರ್ಟಿಂಗ್ ಟುಡೆ, ವಿಶ್ವಾಸ್ ಡಾಟ್ ನ್ಯೂಸ್, ನ್ಯೂಸ್ ಮೊಬೈಲ್ ಸೇರಿದಂತೆ ಹಲವು ಸಂಸ್ಥೆಗಳನ್ನು ಒಳಗೊಂಡ  ಸಮಿತಿಯ ಮೂಲಕ ಸುಳ್ಳು ಸುದ್ದಿ ಹಬ್ಬಿಸುವುದನ್ನು ತಡೆಯಲು ಕಾರ್ಯ ಪ್ರವೃತ್ತವಾಗೋದಾಗಿ ಫೇಸ್‍ಬುಕ್  ಹೇಳಿಕೊಂಡಿದೆ. 

ಇನ್ನು ಈ ಸಮಿತಿಯು ಪೇಸ್ ಬುಕ್‍ನಲ್ಲಿ ಪ್ರಸಾರವಾಗುವ ಸುದ್ದಿ, ಮಾಹಿತಿಗಳ ಪರಾಮರ್ಶೆ ನಡೆಸಲಿದ್ದು, ಇಂಗ್ಲೀಷ್, ಹಿಂದಿ,ಬೆಂಗಾಲಿ,ತೆಲುಗು,ಮಲಯಾಳಂ ಮತ್ತು ಮರಾಠಿಭಾಷೆಯಲ್ಲಿನ ಕಂಟೆಂಟ್‍ಗಳನ್ನೂ ಪರಿಶೀಲಿಸಿ ಅಗತ್ಯಬಿದ್ದರೇ ಕಾನೂನು ಕ್ರಮಕ್ಕೆ ರೆಫರ್ ಮಾಡಲಿದೆ. 

ಒಟ್ಟಿನಲ್ಲಿ 2019 ರ ಚುನಾವಣೆಯಲ್ಲಿ ಸುಳ್ಳು ಸುದ್ದಿಗೆ  ಬ್ರೇಕ್ ಹಾಕಲು ಫೇಸ್‍ಬುಕ್ ಈ ನಿರ್ಧಾರ ಕೈಗೊಂಡಿದ್ದು, ಇದಕ್ಕಾಗಿ ಸೂಕ್ತ ತಂತ್ರಜ್ಞಾನ ಹಾಗೂ ಟೂಲ್ಸ್‍ಗಳನ್ನು ಕೂಡ ಫೇಸ್‍ಬುಕ್ ಅಳವಡಿಸಿಕೊಂಡಿದೆ ಎನ್ನಲಾಗಿದೆ. 

ರಾಜಕೀಯ ವಲಯದಲ್ಲಿ ಇತ್ತಿಚಿಗ ಫೇಸ್‍ಬುಕ್ ಅತ್ಯಂತ ಪ್ರಭಾವಿ ಮಾಧ್ಯಮವಾಗಿ ಬಳಕೆಯಾಗುತ್ತಿದ್ದು, ರಾಜಕೀಯ ನಾಯಕರು, ಹಿಂಬಾಲಕರು ಫೇಸ್‍ಬುಕ್‍ನ್ನು ಫೇಕ್ ಪಬ್ಲಿಸಿಟಿ, ರೂಮರ್ಸ್ ಹಾಗೂ ಸುಳ್ಳು ಸುದ್ದಿ ಹಬ್ಬಿಸಲು ಯಥೇಚ್ಛವಾಗಿ ಬಳಸಿಕೊಳ್ಳುತ್ತಿದ್ದರು. ಈಗ ಫೇಸ್‍ಬುಕ್ ಸ್ವತಃ ಇಂತಹ ಸುದ್ದಿಗಳ ನಿಯಂತ್ರಣಕ್ಕೆ ಮುಂದಾಗಿರೋದರಿಂದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ. 


ಸಂಬಂಧಿತ ಟ್ಯಾಗ್ಗಳು

#Facebook #Fake News #Control #India


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ