ಭಾರತದ ಉದಾರಿಗಳ ಪಟ್ಟಿಯಲ್ಲಿ ಯಾರ ಯಾರ ಹೆಸರಿದೆ ಗೊತ್ತಾ

Whose Name Is In The List of Liberals

11-02-2019

ಭಾರತದ ಶ್ರೀಮಂತರ ಪಟ್ಟಿಯನ್ನು ನೀವೆಲ್ಲ ನೋಡಿದ್ದೀರಾ. ಆದರೆ ಶ್ರೀಮಂತರ ಪೈಕಿ ಉದಾರವಾಗಿ ದಾನ ಮಾಡೋರು ಯಾರು ಅನ್ನೋದು ನಿಮಗೆ ಗೊತ್ತಾ? ಈ ಪಟ್ಟಿಯಲ್ಲಿ  ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮಕೇಶ್ ಅಂಬಾನಿ ಮುಂಚೂಣಿಯಲ್ಲಿದ್ದಾರೆ. ಹೌದು  ಹುರುನ್ ಇಂಡಿಯಾ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ಹುರುನ್ ಇಂಡಿಯಾ ಉದಾರಿಗಳ ಪಟ್ಟಿ 2018 ರಲ್ಲಿ  ಮುಕೇಶ್ ಅಂಬಾನಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. 

ಅಧ್ಯಯನಗಳ ಪ್ರಕಾರ 2017 ರಿಂದ 2018 ರ ಅವಧಿಯಲ್ಲಿ ಮುಕೇಶ್ ಅಂಬಾನಿ 437 ಕೋಟಿ ರೂಪಾಯಿ ದಾನ ಮಾಡಿದೆ. ಎರಡನೇ ಸ್ಥಾನದಲ್ಲಿ  ಪಿರಮಲ್ ಗ್ರೂಪ್‍ನ ಅಜಯ್ ಪಿರಮಲ್ ಇದ್ದು, ಇವರು 200 ಕೋಟಿ ರೂಪಾಯಿಗಳನ್ನು  ಜನಪರ ಕೆಲಸಗಳಿಗೆ ಖರ್ಚು ಮಾಡಿದ್ದಾರೆ. ಇವರು ಸಾಕಷ್ಟು ಹಣವನ್ನು ಶಿಕ್ಷಣ, ವಿಪತ್ತು ನಿರ್ವಹಣೆ,ಜೀವನಮಟ್ಟ ಸುಧಾರಣೆ ಕಾರ್ಯಕ್ರಮಗಳಿಗೆ ದಾನ ಮಾಡಿದ್ದಾರೆ. 

ಇನ್ನು ಈ ಪಟ್ಟಿಯಲ್ಲಿ ಕ್ರಮವಾಗಿ  ವಿಪ್ರೋ ಕಂಪನಿಯ ಅಜೀಮ್ ಪ್ರೇಮ್‍ಜಿ, ಆದಿ ಗೋದ್ರೇಜ್, ಲುಲು ಕಂಪನಿ,ಎಚ್‍ಸಿಎಲ್‍ನ ಶಿವನಾಡರ್, ಹರಿಕೃಷ್ಣ ಎಕ್ಸಪೋಟ್ರ್ಸ ಸವ್ಜಿ ಡೋಲಾಕಿಯಾ,ಶಪೂರ್ಜಿ ಪಲ್ಲೊಂಜಿ ಹಾಗೂ 10 ನೇ ಸ್ಥಾನದಲ್ಲಿ ಅದಾನಿ ಎಂಟ್ರರಪ್ರೈಸಸ್‍ನ ಗೌತಮ ಅದಾನಿ ಇದ್ದಾರೆ. ಇವರೆಲ್ಲರೂ ನಿರಾಶ್ರಿತರು, ವಲಸೆ ಜನರು, ಸ್ಲಂನ ಮಕ್ಕಳು ಹೀಗೆ ಅಸಹಾಯಕರ ಊಟ,ವಸತಿ ಹಾಗೂ ಶಿಕ್ಷಣಕ್ಕೆ ದಾನ ಮಾಡಿದ್ದಾರೆ.  ಶ್ರೀಮಂತ ಹಲವರಿದ್ದರು ಎಲ್ಲರಿಗೂ ದಾನ ಮಾಡುವ ಗುಣ ಇರೋದಿಲ್ಲ. ಆದರೆ ಈ ಸಾಧಕರು ದಾನದಲ್ಲೇ ಸಾಧನೆ ಮಾಡಿದ್ದು ಮಾತ್ರ ಶ್ಲಾಘನೀಯ. 


ಸಂಬಂಧಿತ ಟ್ಯಾಗ್ಗಳು

#Liberals #ajeem Premji #Mukesh Ambani #India


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ