ಅತೃಪ್ತರ ವಿರುದ್ಧ ಸ್ಪೀಕರ್ ಗೆ ದೂರು ಸಂಕಷ್ಟಕ್ಕಿಡಾದ ಎಮ್‍ಎಲ್‍ಎಗಳು

Siddu Complent Against Mlas

11-02-2019

ಜೆಡಿಎಸ್-ಕಾಂಗ್ರೆಸ್ ಸರ್ಕಾರದ ಪಾಲಿಗೆ ತಲೆನೋವಾಗಿ ಪರಿಣಮಿಸಿದ್ದ  ನಾಲ್ವರು ಅತೃಪ್ತ ಶಾಸಕರಿಗೆ ಇದೀಗ ಸಂಕಷ್ಟ ಎದುರಾಗಿದ್ದು, ಕಾಂಗ್ರೆಸ್ ನ ನಾಲ್ವರು ಅತೃಪ್ತ ಶಾಸಕರನ್ನು  ಅನರ್ಹ ಮಾಡುವಂತೆ ಕೋರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯ ಸ್ಪೀಕರ್ ರಮೇಶ್ ಕುಮಾರ್ ಗೆ ದೂರು ಸಲ್ಲಿಸಿದ್ದಾರೆ. 

ಶಾಸಕರಾದ ಮಹೇಶ್ ಕುಮಠಳ್ಳಿ, ಬಿ.ನಾಗೇಂದ್ರ, ಡಾ.ಉಮೇಶ್ ಜಾಧವ್ ಹಾಗೂ ರಮೇಶ್ ಜಾರಕಿಹೊಳಿ ವಿರುದ್ಧ ಸಿದ್ಧರಾಮಯ್ಯ ಸ್ಪೀಕರ್‍ಗೆ ದೂರು ಸಲ್ಲಿಸಿದ್ದಾರೆ. ಪಕ್ಷದಿಂದ ಹಲವಾರು ಬಾರಿ ಶೋಕಾಸ್ ನೊಟೀಸ್ ನೀಡಿ, ವಿಪ್ ಜಾರಿ ಮಾಡಿದ್ದರೂ ಅತೃಪ್ತ ಶಾಸಕರು ಸ್ಪಂದಿಸುತ್ತಿಲ್ಲ. ಹೀಗಾಗಿ ಇವರುಗಳನ್ನು ಪಕ್ಷಾಂತರ ಕಾಯಿದೆಯಡಿ ಅನರ್ಹಗೊಳಿಸುವಂತೆ ಸಿದ್ದು ದೂರಿನಲ್ಲಿ ಮನವಿ ಮಾಡಿದ್ದಾರೆ. 

ಸಿದ್ಧರಾಮಯ್ಯ ಸಲ್ಲಿಸಿರುವ 82 ಪುಟಗಳ ದೂರಿನಲ್ಲಿ ನಾಲ್ವರು ಎಮ್‍ಎಲ್‍ಎಗಳು ಶಾಸಕಾಂಗ ಸಭೆಗೆ ಗೈರಾಗಿರುವುದು, ಬಜೆಟ್ ಅಧಿವೇಶನಕ್ಕೂ ಬಾರದೆ ಇರೋದು ವಿಪ್ ಉಲ್ಲಂಘನೆ, ಶೋಕಾಸ್ ನೊಟೀಸ್‍ಗೆ ಉತ್ತರ ನೀಡದಿರುವುದು ಸೇರಿದಂತೆ ಹಲವು ಆರೋಪಗಳನ್ನು ಉಲ್ಲೇಖಿಸಲಾಗಿದ್ದು, ಪಕ್ಷ ವಿರೋದಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ. ದೂರು ಸಲ್ಲಿಕೆ ವೇಳೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಜರಿದ್ದರು. 

ಶಾಸನಸಭೆಯ ಕಾನೂನಿನ ಪ್ರಕಾರ ಸ್ಪೀಕರ್ ಅಮಾನತು ಕೋರಿ ಸಲ್ಲಿಸಲಾಗಿರುವ ಅರ್ಜಿ ವಿಲೇವಾರಿ ಮಾಡುವ ಮುನ್ನವೇ,ನಾಲ್ವರು ಶಾಸಕರು ಕೂಡ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬಹುದಾಗಿದೆ. ಆದರೆ ಸ್ಪೀಕರ್ ರಾಜೀನಾಮೆಯನ್ನು ತಕ್ಷಣ ಅನುಮೋದಿಸಬೇಕೆಂಬ ಒತ್ತಾಯವಿಲ್ಲ. ಒಂದೊಮ್ಮೆ ರಾಜೀನಾಮೆ ಅಂಕಿತಕ್ಕೂ ಮುನ್ನವೇ ರಾಜ್ಯಪಾಲರು ಪ್ರಸ್ತುತ ಅಧಿಕಾರದಲ್ಲಿರುವ ಸರ್ಕಾರಕ್ಕೆ ಬಹುಮತ ಸಾಬೀತುಪಡಿಸಲು ಹೇಳಿದರೆ ಈ ಶಾಸಕರಿಗೆ ಪಕ್ಷ ವಿಪ್ ಕೂಡ ವಿಧಿಸಬಹುದಾಗಿದೆ. 

ಈ ವಿಪ್ ಉಲ್ಲಂಘಿಸಿದರೆ ಸ್ಪೀಕರ್ ಶಾಸಕರುಗಳ ಸದಸ್ಯತ್ವವನ್ನು ವಜಾಗೊಳಿಸಬಹುದಾಗಿದೆ. ಆದರೆ ಸ್ಪೀಕರ್ ಕ್ರಮಕೈಗೊಳ್ಳುವ ಮುನ್ನವೇ ಎಮ್‍ಎಲ್‍ಎ ರಾಜೀನಾಮೆ ನೀಡಿದರೆ ಕಠಿಣ ಕ್ರಮದಿಂದ ಬಚಾವಾಗಬಹುದಾಗಿದೆ. ಅಲ್ಲದೇ ಸ್ಪೀಕರ್ ಎಮ್‍ಎಲ್‍ಎಗಳನ್ನು ಅಮಾನತ್ತು ಮಾಡಿದರೆ ರಾಜ್ಯಪಾಲರ ಮೊರೆ ಹೋಗಲು ಅವಕಾಶವಿದೆ. ಒಟ್ಟಿನಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯನವರು,  ಅತೃಪ್ತರ ಪಾಲಿಗೆ ದುಸ್ವಪ್ನವಾಗಿ ಕಾಡುತ್ತಿರೋದು ಮಾತ್ರ ನಿಜ. 
 

 


ಸಂಬಂಧಿತ ಟ್ಯಾಗ್ಗಳು

#Siddaramayya #State #Complent #Politics


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ