ಗೋರಿ ಮೇಲೆ ಜಾರಿ ಬಿದ್ದ ರಾಧಿಕಾ ಕುಮಾರಸ್ವಾಮಿ 

Radhika Kumaraswamy slipping on the tomb

11-02-2019

ತಮ್ಮ ಬ್ಯಾನರ್ ನ  ಬಹುನೀರಿಕ್ಷಿತ ಚಿತ್ರ ಭೈರಾದೇವಿ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದ ರಾಧಿಕಾ ಕುಮಾರಸ್ವಾಮಿ ಅದೃಷ್ಟ ಕೆಟ್ಟಂಗಿದ್ದು, ಶೂಟಿಂಗ್ ವೇಳೆ , ಸಶ್ಮಾನದ ಗೋರಿ ಮೇಲೆ ಬಿದ್ದು ರಾಧಿಕಾ ಕುಮಾರಸ್ವಾಮಿ ಗಾಯಗೊಂಡಿದ್ದಾರೆ. ಅಮಾವಾಸ್ಯೆ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ವೈದ್ಯರು ರಾಧಿಕಾಗೆ ಬರೋಬ್ಬರಿ 1 ತಿಂಗಳ ಬೆಡ್ ರೆಸ್ಟ್ ಸೂಚಿಸಿದ್ದಾರೆ. 

ರಾಧಿಕಾ ಕುಮಾರಸ್ವಾಮಿ ತಮ್ಮ ಹೋಂ ಬ್ಯಾನರ್‍ನ ನಲ್ಲಿ ಭೈರಾ ದೇವಿ ಚಿತ್ರ ನಿರ್ಮಾಣಕ್ಕೆ ಮುಂಧಾಗಿದ್ದರು. ಇದರಲ್ಲಿ ಖುದ್ದು ರಾಧಿಕಾ ಕುಮಾರಸ್ವಾಮಿ ಕಾಳಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರತಂಡ ಶಾಂತಿನಗರ ಸಶ್ಮಾನದಲ್ಲಿ ಈ ಚಿತ್ರದ ದೃಶ್ಯವೊಂದರ ಚಿತ್ರೀಕರಣ ನಡೆಸುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಕಾಳಿ ದೇವಿ ಪಾತ್ರಧಾರಿ ರಾಧಿಕಾ ಕುಮಾರಸ್ವಾಮಿ, ಕಾಳಿ ಮಂತ್ರ ಪಠಿಸುತ್ತ ಗೋರಿ ಮೇಲೆ ನಡೆದುಕೊಂಡು ಬರುವ ದೃಶ್ಯ ಚಿತ್ರೀಕರಿಸಲಾಗುತ್ತಿತ್ತು. 

ಈ ವೇಳೆ ರಾಧಿಕಾ ಕುಮಾರಸ್ವಾಮಿ ಆಯತಪ್ಪಿ ಗೋರಿ  ಮೇಲೆಯೇ ಬಿದ್ದಿದ್ದಾರೆ. ಬಿದ್ದ ವೇಳೆಯಲ್ಲಿ ಏನು ನೋವು ಗೊತ್ತಾಗದೆ ಇದ್ದಿದ್ದರಿಂದ ರಾಧಿಕಾ ಕುಮಾರಸ್ವಾಮಿ ಶೂಟಿಂಗ್ ಮುಂದುವರೆಸಿದ್ದರು. ಆದರೆ ನೋವು ಜಾಸ್ತಿಯಾಗಿದ್ದರಿಂದ ಆಸ್ಪತ್ರೆಗೆ ಹೋದಾಗ ಸ್ಪೈನಲ್ ಕಾರ್ಡ್ ಗೆ ಪೆಟ್ಟು ಬಿದ್ದಿರೋದು ಗೊತ್ತಾಗಿದ್ದು, ವೈದ್ಯರು ಒಂದು ತಿಂಗಳ ಕಾಲ ಕಡ್ಡಾಯ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. 

ಚಿತ್ರದಲ್ಲಿ ಲೀಡ್ ರೋಲ್ ನಿಭಾಯಿಸುತ್ತಿರುವ ರಾಧಿಕಾ ಕುಮಾರಸ್ವಾಮಿ ಇನ್ನೊಂದು ತಿಂಗಳು ಶೂಟಿಂಗ್‍ನಿಂದ ದೂರ ಉಳಿಯಬೇಕಾಗಿರೋದರಿಂದ ಅನಿವಾರ್ಯವಾಗಿ ಸಿನಿಮಾ ಶೂಟಿಂಗ್ ಮುಂದೂಡಲಾಗಿದೆ. ಮೇಡಂ ಚಿತ್ರದ ವೇಳೆ ಬಿದ್ದು ಗಾಯಗೊಂಡಿದ್ದಾರೆ. ಸ್ಪೈನಲ್ ಕಾರ್ಡ್ ಸಮಸ್ಯೆಯಾಗಿರೋದರಿಂದ ಒಂದು ತಿಂಗಳು ರೆಸ್ಟ್ ಮಾಡಲು ವೈದ್ಯರು ಸೂಚಿಸಿದ್ದು, ಚಿತ್ರೀಕರಣ ಮುಂದೂಡಲಾಗಿದೆ ಎಂದ್ರು ನಿರ್ದೇಶಕ ಶ್ರೀಜೈ. ವಿಶೇಷ ಮೇಕಪ್ ಹಾಗೂ ವಿಭಿನ್ನ ಕಾಸ್ಟ್ಯೂಮ್‍ಗಳಿಂದಲೇ  ಈ ಚಿತ್ರ ಸಖತ್ ಸುದ್ದಿಯಾಗಿದೆ. ಈ ಚಿತ್ರದಲ್ಲಿ ಖ್ಯಾತ ಖಳನಟ ರವಿಶಂಕರ್ ಹಾಗೂ ನಾಯಕ ನಟ ರಮೇಶ್ ಅರವಿಂದ ನಟಿಸಿದ್ದಾರೆ. 

ಅಮಾವಾಸ್ಯೆ ದಿನ ರಾಧಿಕಾ ಗೋರಿ ಮೇಲೆ ಜಾರಿ ಬಿದ್ದಿರೋರು ಈಗ ಶುಭ-ಅಶುಭಗಳ ಲೆಕ್ಕಾಚಾರ ಹುಟ್ಟುಹಾಕಿದ್ದು, ಈ ವಿಚಾರವನ್ನು ರಾಧಿಕಾ ಅವರ ಪತಿಯೊಂದಿಗಿನ ಬಾಂಧವ್ಯ ಸೇರಿ ಎಲ್ಲ ಸಂದರ್ಭಕ್ಕೂ ಹೋಲಿಸಿ ಮೀಡಿಯಾಗಳು ಚರ್ಚೆ ಆರಂಭಿಸಿವೆ. 


ಸಂಬಂಧಿತ ಟ್ಯಾಗ್ಗಳು

#Radhika Kumarswamy #Injured #Bhaira Devi #Sandalwood


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ