ಮೋದಿಯವರನ್ನು ಜಶೋಧಾ ಬೆನ್ ಪತಿ ಎನ್ನಬಹುದೇ? ನಾಯ್ಡು ಪ್ರಶ್ನೆ!

Can Modi be Jashodh Ben

11-02-2019

ಪ್ರಧಾನಿ ನರೇಂದ್ರ ಮೋದಿ ಮತ್ತು  ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನಡುವಿನ ಅಸಮಧಾನ ಇದೀಗ ವೈಯಕ್ತಿಕ ಟೀಕೆಯ ಹಂತವನ್ನು ತಲುಪಿದ್ದು, ನಿಮ್ಮನ್ನು ಜಶೋಧಾ ಬೆನ್ ಪತಿ ಎಂದು ಕರೆಯಬಹುದೇ ಎಂದು ಪ್ರಶ್ನಿಸುವ ಮೂಲಕ ನಾಯ್ಡು ತಮ್ಮ ವಿರುದ್ಧ ಪ್ರಧಾನಿ ಮೋದಿಯವರು ಮಾಡಿದ ಟೀಕೆಗೆ ತಿರುಗೇಟು ನೀಡಿದ್ದಾರೆ. ಆ ಮೂಲಕ ಮತ್ತೆ ಮೋದಿ ಪತ್ನಿ ಜಶೋದಾ ಬೆನ್ ಹೆಸರು ಚರ್ಚೆಗೆ ಬಂದಿದೆ. 

ಗುಂಟೂರಿನಲ್ಲಿ ಭಾನುವಾರ ನಡೆದ ರ್ಯಾಲಿ ವೇಳೆ ಪ್ರಧಾನಿ ನರೇಂದ್ರ ಮೋದಿ, ಚಂದ್ರಬಾಬು ನಾಯ್ಡು ಅವರನ್ನು ನಾರಾ ಲೊಕೇಶ್ ಅವರ ಅಪ್ಪ ಎಂದು ಸಂಬೋಧಿಸಿ ಲೇವಡಿ ಮಾಡಿದ್ದರು. ಇದಕ್ಕೆ ಉತ್ತರವಾಗಿ ವಿಜಯವಾಡಾದಲ್ಲಿ  ಸಾರ್ವಜನಿಕ ಸಭೆಯಲ್ಲಿ ಮಾತನಾಡಿನ ನಾಯ್ಡು, ಮೋದಿಯವರ ವೈಯಕ್ತಿಕ ಬದುಕಿನ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. 

ನಾನು ನಾರಾ ಲೋಕೇಶನ್ ಅಪ್ಪ ಎಂದು ಗುರುತಿಸಿಕೊಳ್ಳಲು ಹೆಮ್ಮೆ ಇದೆ. ಭುವನೇಶ್ವರಿಯ ಪತಿ ಎಂದು ಕರೆಯಿಸಿಕೊಳ್ಳಲು ಗರ್ವ ಪಡುತ್ತೇನೆ. ದೇವಾಂಶನ ಅಜ್ಜ ಎಂದು ಕರೆದರೂ ಖುಷಿ ಪಡುತ್ತೇನೆ. ಕೌಟುಂಬಿಕ ಜವಾಬ್ದಾರಿಯನ್ನು  ಯಶಸ್ವಿಯಾಗಿ ನಿರ್ವಹಿಸಿದ ಹೆಮ್ಮೆ ಇದೆ. ಆದರೆ ನೀವು ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದರು. 
ಕೈ ಹಿಡಿದ ಪತ್ನಿ ಜಶೋದಾ ಬೆನ್ ಜೊತೆ ಸಂಸಾರ ಮಾಡದೆ. ಆಕೆಗೆ ವಿಚ್ಛೆದನವನ್ನು ನೀಡಿದೆ ಆ ಮಹಿಳೆಯನ್ನು ಕೈಬಿಟ್ಟ ನಿಮ್ಮನ್ನು ಒಳ್ಳೆಯ ಗಂಡ ಎಂದು ಕರೆಯಲು ಸಾಧ್ಯವೇ ಎಂದು ಟೀಕಾತ್ಮಕವಾಗಿ ಪ್ರಶ್ನಿಸಿದ್ದಾರೆ. ಅಲ್ಲದೇ ನನ್ನನ್ನು ಟೀಕಿಸುವುದಕ್ಕಾಗಿಯೇ ಮೋದಿ ದೆಹಲಿಯಿಂದ ಇಲ್ಲಿಗೆ ಬಂದಿದ್ದರು ಎಂದು ನಾಯ್ಡು ಆರೋಪಿಸಿದ್ದಾರೆ. 

ಮೋದಿ ಮಾತ್ರವಲ್ಲದೇ  ವೈಎಸ್‍ಆರ್ ಕಾಂಗ್ರೆಸ್‍ನ ಜಗನ್ ಮೋಹನ್ ರೆಡ್ಡಿಯನ್ನು ಟೀಕಿಸಿರುವ ಚಂದ್ರಬಾಬು ನಾಯ್ಡು, ಜಗನ್‍ಗೆ ಮೋದಿ ಅವರ ವಿರುದ್ಧ ಸಿಬಿಐ ಅಸ್ತ್ರ ಬಳಸಬಹುದೆಂಬ ಭಯವಿದೆ ಎಂದು ಲೇವಡಿ ಮಾಡಿದ್ದಾರೆ. ಒಟ್ಟಿನಲ್ಲಿ ನಾಯ್ಡು ಮತ್ತು ಮೋದಿ ನಡುವಿನ ವಾಕ್ಸಮರ್ ಇದೀಗ ವೈಯಕ್ತಿಕ ವಿಚಾರಗಳತ್ತ ತಿರುಗಿದೆ. ಪ್ರತಿಬಾರಿಯೂ ಚುನಾವಣೆಯ ಸಂದರ್ಭ ಬಂದಾಗ ಮೋದಿಯವರ ವೈಯಕ್ತಿಕ ಬದುಕು ಚರ್ಚೆಗೆ ಗ್ರಾಸವಾಗೋದು ಮಾಮೂಲಾದ ಸಂಗತಿಯಾಗಿದೆ. ಆದರೆ ಇದುವರೆಗೂ ಮೋದಿಯವರು ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮಾಡಲಾಗಿರುವ ಯಾವ ಟೀಕೆಗೂ ಉತ್ತರಿಸಿಲ್ಲ. ನಾಯ್ಡು ಟೀಕೆಗೆ ಹೇಗೆ ಉತ್ತರ ನೀಡುತ್ತಾರೆ ಕಾದು ನೋಡಬೇಕಿದೆ. 
 


ಸಂಬಂಧಿತ ಟ್ಯಾಗ್ಗಳು

#Narendra Modi #Jashoda ben #Chandrababu Naidu #Criticize


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ