ಹಾಲಿ ಮತ್ತು ಮಾಜಿ ಸಿಎಂಗಳ ಆಡಿಯೋ ವಾರ್

Audio War of the Cm And Former CM

11-02-2019

ಕರ್ನಾಟಕದಲ್ಲಿ ಈಗ ಆಡಿಯೋ ಸಿಡಿಯದ್ದೇ ಮಾತು. ರಾಜ್ಯ ರಾಜಕಾರಣ ಪ್ರತಿ ಗಂಟೆಗೊಂದು ವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮಾಜಿ ಹಾಗೂ ಹಾಲಿ ಸಿಎಂ ನಡುವೆ ಆಡಿಯೋವಾರ್ ತಾರಕಕ್ಕೇರಿದೆ. ಆಡಿಯೋ ನನ್ನದಲ್ಲ. ಮಾತನಾಡಿದ್ದು, ನಾನು ಎಂದು ಸಾಬೀತಾದ್ರೆ ರಾಜೀನಾಮೆ ನೀಡುತ್ತೇನೆ ಎಂದಿದ್ದ ಬಿಎಸ್‍ವೈ ಆಶ್ಚರ್ಯಕರ ಬೆಳವಣಿಗೆಯಲ್ಲಿ ಈ ಆಡಿಯೋ ನನ್ನದು. ನಾನು ಗುರುಮಿಠ್‍ಕಲ್ ಶಾಸಕ ನಾಗನಗೌಡ್ ಅವರ ಪುತ್ರನೊಂದಿಗೆ ಮಾತನಾಡಿದ್ದು ನಿಜ ಎನ್ನುವ ಮೂಲಕ ಶಾಕ್ ನೀಡಿದ್ದಾರೆ.  

 ಅಷ್ಟೇ ಅಲ್ಲ ಇದು ಸಿಎಂ ಕುಮಾರಸ್ವಾಮಿಯವರ ತಂತ್ರ. ಅವರೇ ಗುರುಮಿಠಕಲ್ ಶಾಸಕರ ಪುತ್ರನನ್ನು ನನ್ನ ಬಳಿ ಮಾತನಾಡಲು ಕಳಿಸಿದ್ದಾರೆ. ಇದು ಸಿಎಂ ಪ್ಲ್ಯಾನ್ ಎಂದು ಬಿಎಸ್‍ವೈ ಆರೋಪಿಸಿದ್ದಾರೆ. ನಿನ್ನೆ ಮೋದಿ ಕಾರ್ಯಕ್ರಮದ ವೇಳೆ ಮಾತನಾಡಿದ ಬಿಎಸ್‍ವೈ, ನಮ್ಮ ಬಳಿಯೂ ಸಾಕಷ್ಟು ಆಡಿಯೋ ಇದೆ. ನಾಳೆ ವಿಧಾನಸಭೆಯಲ್ಲಿ ನಾವು ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ. 

ಇನ್ನೊಂದೆಡೆ ಯಡಿಯೂರಪ್ಪ ಈ ಆಡಿಯೋದಲ್ಲಿನ ಧ್ವನಿ ನನ್ನದೇ ಎಂದು ಒಪ್ಪಿಕೊಳ್ಳುತ್ತಿದ್ದಂತೆ ಕಾಂಗ್ರೆಸ್ ಬಿಜೆಪಿ ಮೇಲೆ ಮುಗಿಬಿದ್ದಿದ್ದು, ಆಡಿದ ಮಾತಿನಂತೆ ಬಿಎಸ್‍ವೈ ರಾಜೀನಾಮೆ ಕೊಡೋದು ಯಾವಾಗ ಎಂದು ಪ್ರಶ್ನಿಸಲಾರಂಭಿಸಿದೆ. ಅಲ್ಲದೇ ಇದೇ ಅಂಶವನ್ನು ಮುಂದಿಟ್ಟುಕೊಂಡು ಇವತ್ತು ವಿಧಾನಸಭೆಯಲ್ಲಿ ಗದ್ದಲ ಎಬ್ಬಿಸುವ ಸಾಧ್ಯತೆ ಇದೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಯಡಿಯೂರಪ್ಪ ರಾಜೀನಾಮೆ ಯಾವಾಗ ಎಂಬ ಸರಣಿ ಟ್ವಿಟ್‍ಗಳನ್ನು ಕಾಂಗ್ರೆಸ್ ಆರಂಭಿಸಿದೆ. 

ಆದರೆ ಆಡಿಯೋ ನನ್ನದಲ್ಲ ಎಂದಿದ್ದ ಬಿಎಸ್‍ವೈ, ಆಡಿಯೋ ನನ್ನದೆಂದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯೋದಾಗಿ ಹೇಳಿದ್ದರು. ಹೀಗಿರುವಾಗ  ಆಡಿತಪ್ಪೊಪ್ಪಿಕೊಂಡು ಆಡಿಯೋ ನನ್ನದೆ ಎಂದಿರೋದು ಹಲವು ಅನುಮಾನ ಮೂಡಿಸಿದ್ದು, ಇದರ ಹಿಂದೆ ಇರಬಹುದಾದ ರಾಜಕೀಯ ಲೆಕ್ಕಾಚಾರ ಏನು ಎಂಬುದು ಸಧ್ಯದ ಕುತೂಹಲ. 
 


ಸಂಬಂಧಿತ ಟ್ಯಾಗ್ಗಳು

#Kumarswamy #Audio #Bsy #War


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ