ಮೈ ನೇಮ್ ಈಸ್ ರಾಗಾ ಮೂಲಕ ತೆರೆಗೆ ಬರ್ತಿದ್ದಾರೆ ರಾಹುಲ್ ಗಾಂಧಿ

 Rahul Gandhi has been Exposed by My Name Is Raga

11-02-2019

ಆಕ್ಸಿಡೆಂಟಲ್ ಪ್ರೈಂ ಮಿನಿಸ್ಟರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಜೀವನ ಆಧಾರಿತ ಚಿತ್ರಗಳ ಬಳಿಕ ಇದೀಗ ಭವಿಷ್ಯದ ಪ್ರಧಾನಿ ಎಂದೇ ಬಿಂಬಿತವಾಗುವ ರಾಹುಲ್ ಗಾಂಧಿ ಸರದಿ. ಹೌದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯ ಜೀವನವೂ ಚಿತ್ರವಾಗಲಿದ್ದು, ಮೈ ನೇಮ್ ಈಸ್ ರಾಗಾ  ಶಿರ್ಷಿಕೆಯಲ್ಲಿ ಈ ಚಿತ್ರ ತೆರೆಗೆ ಬರಲಿದೆ. 

ಮದರ್ಸ್ ಲ್ಯಾಪ್‍ಟ್ಯಾಪ್, ಸೈಂಟ್ ಡ್ರಾಕುಲಾ 3ಡಿ ಮತ್ತು ಕಾಮಸೂತ್ರದಂತಹ ಚಿತ್ರಗಳನ್ನು ನಿರ್ಮಿಸಿದ  ರೂಪೇಶ್ ಪೌಲ್ ಈ ಚಿತ್ರ ನಿರ್ದೇಶಿಸಿದ್ದಾರೆ.  ಈಗಾಗಲೇ ಚಿತ್ರದ  ಟ್ರೇಲರ್ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೆಲವೆ ಗಂಟೆಗಳಲ್ಲಿ 20 ಲಕ್ಷಕ್ಕೂ ಅಧಿಕ ಜನರು ಇದನ್ನು ವೀಕ್ಷಿಸಿದ್ದಾರೆ. 

ಅಶ್ವಿನಿ ಕುಮಾರ್ ಈ ಚಿತ್ರದಲ್ಲಿ ರಾಹುಲ್ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಎಪ್ರಿಲ್ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ. ಇನ್ನು ಈ ಚಿತ್ರದಲ್ಲಿ ರಾಹುಲ್ ಗಾಂಧಿಯ ಪಾತ್ರದ ಜೊತೆಗೆ ಹಾಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪಾತ್ರವೂ ಇರಲಿದೆ.  ಹಿಮಂತ್ ಕಪಾಡಿಯಾ ನರೇಂದ್ರ ಮೋದಿ ಪಾತ್ರದಲ್ಲಿ ನಟಿಸಿದ್ದು, ರಾಜು ಖೇರ್ ಮನಮೋಹನ್ ಸಿಂಗ್ ಪಾತ್ರದಲ್ಲಿ ನಟಿಸಲಿದ್ದಾರೆ. 

ಒಟ್ಟಿನಲ್ಲಿ 2019 ರ ಲೋಕಸಭಾ ಚುನಾವಣೆ ವೇಳೆಗೆ ಬಹುತೇಕ ರಾಷ್ಟ್ರದ ಎಲ್ಲ ಪ್ರಮುಖ ನಾಯಕರ ಜೀವನಚರಿತ್ರೆಗಳು ಸಿನಿಮಾವಾಗಿ ತೆರೆಗೆ ಬರಲಿದ್ದು, ಚುನಾವಣೆಯ ಅಸ್ತ್ರವಾಗಿ ಈ ಸಿನಿಮಾಗಳನ್ನೇ ಬಳಸಿಕೊಳ್ಳುವ ಸಾಧ್ಯತೆಯೂ  ಇದೆ. ಈಗಾಗಲೇ ಮನಮೋಹನ್ ಸಿಂಗ್, ನರೇಂದ್ರ ಮೋದಿ, ಬಾಳ್ ಠಾಕ್ರೆ ಜೀವನ ಸಿನಿಮಾವಾಗಿದೆ. ಅಂದ ಹಾಗೆ ಇನ್ನು ಮೈ ನೇಮ್ ಈಸ್ ರಾಗಾ ಸಿನಿಮಾದಲ್ಲಿ ಗಾಂಧಿ ಮನೆತನದ ಚಿತ್ರಣ ಹಾಗೂ ರಾಹುಲ್ ಗಾಂಧಿ ರಾಗಾ ರೂಪದಲ್ಲಿ ಜನರಿಗೆ ಹತ್ತಿರವಾದ ಬಗೆಯನ್ನು ಚಿತ್ರೀಸಲಾಗಿದೆಯಂತೆ. 


ಸಂಬಂಧಿತ ಟ್ಯಾಗ್ಗಳು

#My Name Is Raga #Bollywood #Rahul Gandi #Movie


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ