ಆಹಾರ ಕ್ಷೇತ್ರದಲ್ಲಿ ಕ್ರಾಂತಿ ತರಲಿದೆ ಈ ಆನ್ವೇಷಣೆ. 

 This is an exploration that will revolutionize the food industry.

09-02-2019

ಇವತ್ತು ಮಾಡಿದ ಇಡ್ಲಿ ಎಷ್ಟು ದಿನ ಬಳಸಬಹುದು? ಅಬ್ಬಬ್ಬಾ ಅಂದ್ರೆ ಎರಡು ದಿನ. ಆದರೆ ಇಲ್ಲೊಬ್ಬರು ನೀವು ಮಾಡಿದ ಇಡ್ಲಿಯನ್ನು ಮೂರು ವರ್ಷ ಸಂರಕ್ಷಿಸಿ ಇಟ್ಟುಕೊಳ್ಳುವ ತಂತ್ರಜ್ಞಾನವನ್ನು ಕಂಡುಹಿಡಿದ್ದಾರೆ. ಹೌದು ಮುಂಬಯಿ ಯೂನಿವರ್ಸಿಟಿ ಭೌತಶಾಸ್ತ್ರ ಪ್ರೊಫೆಸರ್ ವೈಶಾಲಿ ಬಾಂಬೊಳೆ ಇಂತಹದೊಂದು ವಿನೂತನ ಆವಿಷ್ಕಾರ ಮಾಡಿದ್ದಾರೆ. 

ಹಬೆಯಲ್ಲಿ ಬೇಯಿಸಿದ ಆಹಾರ ಮೂರುವರ್ಷ ಕೆಡದಂತೆ ಉಳಿಸುವ ತಂತ್ರವನ್ನು ವೈಶಾಲಿ ಕಂಡುಹಿಡಿದಿದ್ದು, ಸರಂಕ್ಷಣೆಗಾಗಿ ಯಾವುದೆ ರಾಸಾಯನಿಕ ಪದಾರ್ಥ ಬಳಸುವುದಿಲ್ಲವಂತೆ. ಅಲ್ಲದೆ ಮೂರು ವರ್ಷದ ಬಳಿಕವೂ ಆಹಾರ ಪದಾರ್ಥದ ರುಚಿ, ಬಣ್ಣ ಮತ್ತು ಪೋಷಕಾಂಶಗಳನ್ನು ಹಾಗೆಯೇ ಉಳಿಸಿಕೊಂಡಿರುವಂತೆ ಇದನ್ನು ಅಭಿವೃದ್ಧಿ ಪಡಿಸಲಾಗಿದೆ. 

ಪ್ರೊ.ವೈಶಾಲಿಯವರ ಈ ಆವಿಷ್ಕಾರದಿಂದ ಸೇನಾಪಡೆಗಳಿಗೆ, ಬಾಹ್ಯಾಕಾಶ ಮತ್ತಿತರ ಸಂಶೋಧನೆಗೆ ತೆರಳುವವರಿಗೆ ನೆರವಾಗಲಿದೆ. ಅಲ್ಲದೆ ನೈಸರ್ಗಿಕ ವಿಕೋಪದ ಸಂದರ್ಭದಲ್ಲಿಯೂ ಜನರಿಗೆ ಅನುಕೂಲವಾಗಲಿದೆ.  ಪ್ರಸ್ತುತ ಬಳಕೆಯಲ್ಲಿರುವ ತಂತ್ರಜ್ಞಾನದ ಮೂಲಕ ಆಹಾರವನ್ನು 90 ದಿನದವರೆಗೆ ಉಳಿಸಬಹುದಾಗಿದೆ. 

ಈ ನೂತನ ಆವಿಷ್ಕಾರಕ್ಕೆ ವೈಶಾಲಿಯವರು ಪೇಟೆಂಟ್ ಪಡೆಯಲಿದ್ದು, 2013 ರಿಂದಲೇ ಈ ವಿಚಾರದ ಕುರಿತು ಸಂಶೋದನೆಯಲ್ಲಿ ತೊಡಗಿದ್ದಾರೆ. ಎಲೆಕ್ಟ್ರಾನ್ ಬೀಮ್ ರೇಡಿಯೇಶನ್ ತಂತ್ರಜ್ಞಾನದಲ್ಲಿ 15 ವರ್ಷದ ಸಂಶೋಧನಾ ಅನುಭವ ಹೊಂದಿರುವ ಪ್ರೊ.ವೈಶಾಲಿ ಮುಂದೆ ಈ ತಂತ್ರಜ್ಞಾನವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Vaishali Bambole #Preserve #Technology #Steamed food


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ