ನಾಳೆ ಯಜಮಾನ ಟ್ರೇಲರ್ ರಿಲೀಸ್

 Tomorrow

09-02-2019

ಒಂದೆಡೆ ಕೆಜಿಎಫ್ 50 ದಿನಗಳನ್ನು ಪೊರೈಸಿ ಯಶಸ್ವಿ ಪ್ರದರ್ಶನ ಮುಂದುವರೆಸಿದ್ದರೇ, ಇತ್ತ ದರ್ಶನ ಬಹುನೀರಿಕ್ಷಿತ ಚಿತ್ರ ಯಜಮಾನದ ಟ್ರೇಲರ್ ನಾಳೆ ರಿಲೀಸ್ ಆಗಲಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ಯಜಮಾನ ಚಿತ್ರಕ್ಕೆ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಯು/ಎ ಪ್ರಮಾಣ ಪತ್ರ ನೀಡಿದ್ದು, ಸಿನಿಮಾದ ನಾಲ್ಕು ಹಾಡುಗಳು ಈಗಾಗಲೇ ಮೂಡಿ ಮಾಡಿವೆ. 

ಚಿತ್ರದ ಯಾವುದೇ ದೃಶ್ಯಗಳಿಗೆ ಮಂಡಳಿಯು ಕತ್ತರಿ ಪ್ರಯೋಗ ಮಾಡಿಲ್ಲ ಮತ್ತು ಸಂಭಾಷಣೆಯನ್ನು ಮ್ಯೂಟ್ ಮಾಡದೆ ಯು/ಎ ಪ್ರಮಾಣಪತ್ರ ನೀಡಲಾಗಿದೆ ಎಂಬ  ವಿಚಾರವನ್ನು ನಿರ್ಮಾಪಕರಾದ ಶೈಲಜಾ ನಾಗ್ ಮತ್ತು ಬಿ.ಸುರೇಶ್ ಹೇಳಿದ್ದಾರೆ. ನಾಳೆ ಡಿ.ಬೀಟ್ಸ್ ಯುಟ್ಯೂಬ್ ಚಾನೆಲ್‍ನಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ.

ವಿ.ಹರಿಕೃಷ್ಣ ಅವರ ಸಂಗೀತವಿರುವ ಈ ಚಿತ್ರದಲ್ಲಿ ಚಾಲೆಜಿಂಗ್ ಸ್ಟಾರ್ ದರ್ಶನಗೆ ರಶ್ಮಿಕಾ ಮಂದಣ್ಣ ಮತ್ತು ತಾನ್ಯಾ ಹೊಪೆ ನಟಿಸಿದ್ದಾರೆ. ಬಿಡುಗಡೆಯಾದ ಹಾಡುಗಳು ಯುವಜನತೆಯನ್ನು ಸೆಳೆದಿರೋದರಿಂದ ಚಿತ್ರದ ಮೇಲಿನ ನೀರಿಕ್ಷೆ ಹೆಚ್ಚಿದೆ. 
ಇನ್ನು ಟ್ರೇಲರ್ ಬಿಡುಗಡೆ ಕುರಿತು  ನಟ ದರ್ಶನ್ ಟ್ವಿಟ್ ಮಾಡಿದ್ದು, ಹಾಡುಗಳಿಗೆ ನೀವು ತೋರಿದ ಅಭಿಮಾನ  ಪ್ರೀತಿಗೆ ನಾನು ಆಭಾರಿ. ಇದು ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ.  ಫೆ 10 ರಂದು  ಬೆಳಗ್ಗೆ 10 ಗಂಟೆಗೆ ಟ್ರೇಲರ್ ಬಿಡುಗಡೆಯಾಗಲಿದೆ ಎಂದಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Yejmana #Trailer #Darshan #Release


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ