ಭತ್ತದ ಪೈರಿನಲ್ಲಿ ಮೂಡಿದ ಅಂಬಿ ಅಭಿಮಾನ

 Ambi

09-02-2019

ಸಿನಿಮಾ ನಟರು ಅಂದ ಮೇಲೆ ಅಭಿಮಾನಿಗಳು ಇರಲೇ ಬೇಕು. ಆದರೆ ಅಭಿಮಾನದ ಹೆಸರಿನಲ್ಲಿ ಅತಿರೇಕಗಳನ್ನು ಮಾಡೋ ಅಭಿಮಾನಿಗಳ ಸಂಖ್ಯೆಯೇ ಹೆಚ್ಚು. ಆದರೆ ಮಂಡ್ಯದ ಅಂಬಿ ಅಭಿಮಾನಿ ಕುಟುಂಬವೊಂದು ಮಾತ್ರ ಅಭಿಮಾನದ ಹೆಸರಿನಲ್ಲಿ ವಿಭಿನ್ನವಾದ ಹಾಗೂ ಎಲ್ಲರೂ ಮೆಚ್ಚಿಕೊಳ್ಳುವಂತ ಕೆಲಸ ಮಾಡಿದೆ. ಹೌದು ತಮ್ಮ ಜಮೀನಿನಲ್ಲಿ ಅಂಬಿ ಮೇಲಿನ ಗೌರವ ಮೆರೆದಿರುವ ಕುಟುಂಬದ ಪ್ರೀತಿಯಿಂದ ಹಸಿರಾದ ಪೈರಿನಲ್ಲಿ ರೆಬಲ್ ಸ್ಟಾರ್ ಅಭಿಮಾನ ಮೂಡಿಬಂದಿದೆ. 

ಮಂಡ್ಯ ತಾಲೂಕಿನ ಮೊತ್ತಹಳ್ಳಿ ಗ್ರಾಮದ ಎಂ.ಪಿ.ಹರ್ಷಿತ್, ರಾಜು ಕಾಳಪ್ಪ, ಎಂ.ಜೆ.ದಿಲೀಪ್ ಕುಮಾರ್ ಸಹೋದರರು ಹೀಗೆ ವಿಭಿನ್ನ ಅಭಿಮಾನ ಮೆರೆದಿದ್ದಾರೆ.  ತಮ್ಮ ಗದ್ದೆಯಲ್ಲಿ ಭತ್ತದ ಬೀಜವನ್ನು ಬಿತ್ತುವ ಈ ಸಹೋದರರು ಅಂಬಿಗೆ ಗೌರವ ಸಲ್ಲಿಸಿದ್ದರು. ಇದೀಗ ಈ ಭತ್ತದ ಬೀಜ ಮೊಳಕೆಯಾಗಿ, ಪೈರಾಗಿ ಅಂಬಿಯ ನೆನಪು ಮೂಡಿಸಿದೆ. 

ಬೇಸಿಗೆ ಬೆಳೆಗಾಗಿ ಈ ಭತ್ತದ ಬಿತ್ತನೆಯನ್ನು ಒಂದು ಗುಂಟೆ ಗದ್ದೆಯಲ್ಲಿ ಮಾಡಲಾಗಿದ್ದು, ಗದ್ದೆಯ ಮಧ್ಯದಲ್ಲಿಹೃದಯಾಕಾರದಲ್ಲಿ  ಮತ್ತೆ ಹುಟ್ಟಿ ಬಾ ಅಂಬರೀಷ್ ಅಣ್ಣ ಎಂದು ಬರೆದು ಆ ಜಾಗದಲ್ಲಿ ಭತ್ತ ಬಿತ್ತಿದ್ದರು. ಈಗ ಈ ಪೈರು ಮೇಲಕ್ಕೆದ್ದು ಬಂದಿದ್ದು ಹಸಿರಾಗಿ ಅಂಬರೀಶ್ ಅಭಿಮಾನಿಗಳನ್ನು ಸೆಳೆಯುತ್ತಿದೆ. 

ಇನ್ನು ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನಟ ಅಂಬರೀಶ್ ಕುಟುಂಬದವರನ್ನು ಸೆಳೆಯುತ್ತಿದೆ. ಅಂಬರೀಶ್ ಪತ್ನಿ ಸುಮಲತಾ ಅವರು ಕೂಡ ಈ ಪೋಟೋವನ್ನು ತಮ್ಮ ಟ್ವಿಟ್‍ರ ಖಾತೆಯಲ್ಲಿ ಪ್ರಕಟಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದೆ ಶಾಶ್ವತವಾದ ಪ್ರೇಮ. ಅಭಿಮಾನ ತೋರಿಸಲು ಎಂತಹ ಸುಂದರ ಅಭಿವ್ಯಕ್ತಿ ಮನಸ್ಸು ತುಂಬಿ ಬಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ನಿಜಕ್ಕೂ ಕ್ರಿಯಾತ್ಮಕವಾದ ಈ ಅಭಿಮಾನಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.


ಸಂಬಂಧಿತ ಟ್ಯಾಗ್ಗಳು

#Ambarish #Rice Pie #Fan #Mandya


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Very very very super
  • Anil kumar nr
  • Petrol bunk