ಸಿದ್ಧರಾಮಯ್ಯ ಸೋತಿದ್ದಕ್ಕೆ ಕೊಡಗಿನಲ್ಲಿ ಪ್ರವಾಹ ಬಂತಂತೆ!

 Flooding in Kodagu for Siddaramaiah

09-02-2019

ಚುನಾವಣೆ ಹಾಗೂ ವಿವಾದಾತ್ಮಕ ಭಾಷಣಗಳಿಗೆ ಇನ್ನಿಲ್ಲದ ನಂಟು.  ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರು ಮನಬಂದಂತೆ ಮಾತನಾಡಿ ವಿವಾದ ಸೃಷ್ಟಿಸೋದು ಸಾಮಾನ್ಯ. ಆದರೆ ಇದೀಗ ಈ ಸಾಲಿಗೆ ಸ್ವಾಮೀಜಿಯೊಬ್ಬರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಹೌದು ಕೊಡಗಿನಲ್ಲಿ ಜಲಪ್ರವಾಹವಾಗಿರೋದಿಕ್ಕೆ ಸಿದ್ಧರಾಮಯ್ಯನವರನ್ನು ಸೋಲಿಸಿದ್ದೇ ಕಾರಣ ಎನ್ನುವ ಮೂಲಕ ಕಾವಿಧಾರಿಯೊಬ್ಬರು ಹೊಸ ವಿವಾದ ಸೃಷ್ಟಿಸಿದ್ದಾರೆ. 

ನಿನ್ನೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕನಕಪೀಠದ ನಿರಂಜನಾನಂದಪುರಿ ಸ್ವಾಮೀಜಿ ಇಂತಹದೊಂದು ವಿವಾದಾತ್ಮಕ ಹೇಳಿಕೆ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಐದು ವರ್ಷಗಳ ಕಾಲ ಸಮರ್ಥವಾಗಿ ಆಡಳಿತ ಮಾಡಿ, ಬಡವರಿಗಾಗಿ ಹಲವಾರು ಯೋಜನೆಗಳನ್ನು ತಂದ ಸಿದ್ಧರಾಮಯ್ಯನವರನ್ನು 2019 ರ ಚುನಾವಣೆಯಲ್ಲಿ ಸೋಲಿಸಲಾಯಿತು. ಇದಕ್ಕೆ ಕೊಡಗಿನಲ್ಲಿ ಭೂಮಿ ನಡುಗಿತು ಎಂಬಂರ್ಥದಲ್ಲಿ ಸ್ವಾಮೀಜಿ ಮಾತನಾಡಿದ್ದಾರೆ. 

ಏಕೆ ನಡುಗಿದೆ ತಾಯಿ ಕೊಡಗಿನೊಳ್ ಏಕೆ ನಡುಗಿದೆ ತಾಯಿ? ಈ ರಾಜ್ಯದಲ್ಲಿ ಹಲವಾರು ಭಾಗ್ಯಗಳನ್ನು ನೀಡಿದವರ ಹೀನಾಯವಾಗಿ ಸೋಲಿಸಿದರೆಂದು ನಡುಗಿದೆಯಾ? ಏಕೆ ನಡುಗಿದೆ ತಾಯಿ ಏಕೆ ನಡುಗಿದೆ ತಾಯಿ? ಎಂದು ಪದ್ಯದ ದಾಟಿಯಲ್ಲಿ ಪ್ರಶ್ನಿಸುವ ಮೂಲಕ ಹೇಳಿದ್ದಾರೆ. ಇದಲ್ಲದೇ ಸಿದ್ಧರಾಮಯ್ಯನವರನ್ನು ಸಿಕ್ಕಾಪಟ್ಟೆ ಹೊಗಳಿದ ಸ್ವಾಮೀಜಿ,  ಈ ರಾಜ್ಯದಲ್ಲಿ, ಹಾಲುಮತ ಸಮುದಾಯದಲ್ಲಿ ಸಾಕಷ್ಟು ಜನರು ಸೃಷ್ಟಿಯಾಗುತ್ತಾರೆ. ಆದರೆ  ಸಿದ್ಧರಾಮಯ್ಯನವರಂತಹ ವ್ಯಕ್ತಿ ಇನ್ನೊಬ್ಬರು ಸೃಷ್ಟಿಯಾಗಲು ಸಾಧ್ಯವಿಲ್ಲ ಎಂದು ಸಿದ್ಧರಾಮಯ್ಯನವರನ್ನು ಹೊಗಳಿ ಅಟ್ಟಕ್ಕೇರಿಸಿದರು. 

ಇನ್ನು ಪ್ರಕೃತಿ ವಿಕೋಪದಿಂದ ಉಂಟಾದ ಪ್ರವಾಹ ಹಾಗೂ ಮಳೆ ಪೀಡಿತ ಕೊಡಗಿನ ವಿಚಾರಕ್ಕೆ ಸಿದ್ಧರಾಮಯ್ಯನವರನ್ನು ಲಿಂಕ್ ಮಾಡಿ ಮಾತನಾಡಿರುವುದು ಸಾಕಷ್ಟು ಟೀಕೆಗೆ ಗುರಿಯಾಗಿದ್ದು, ಸಿದ್ಧರಾಮಯ್ಯನವರನ್ನು ಹೊಗಳುವ ಭರದಲ್ಲಿ ಸ್ವಾಮೀಜಿ ತಮ್ಮ ಚೌಕಟ್ಟನ್ನು ಮರೆತರಾ? ಅನ್ನೋ ಪ್ರಶ್ನೆ ಕಾಡುತ್ತಿದೆ. 
 


ಸಂಬಂಧಿತ ಟ್ಯಾಗ್ಗಳು

#Nirajanananda puri swamiji # Defeat! #Siddaramayya #Kodagu Flood


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ