ಬಂಡಾಯ ಶಾಸಕರ ವಿರುದ್ಧ ಅಮಾನತ್ತು ಅಸ್ತ್ರ?

Suspension Weapon Against Rebels?

09-02-2019

ಸಮ್ಮಿಶ್ರ ಸರ್ಕಾರವನ್ನು ಬಿಟ್ಟು ಬಿಡದೆ ಕಾಡುತ್ತಿರುವ ನಾಲ್ವರು ಅತೃಪ್ತ ಶಾಸಕರ ಅದೃಷ್ಟ ಕೈಕೊಟ್ಟಂತಿದೆ. ಹೌದು ಇಷ್ಟು ದಿನಗಳ ಕಾಂಗ್ರೆಸ್ ಪಾಲಿಗೆ ತಲೆನೋವಾಗಿದ್ದ ನಾಲ್ವರು ಶಾಸಕರಿಗೆ ಈಗ ಕಾಂಗ್ರೆಸ್ ಬಾರಿ ಶಾಕ್ ನೀಡಲು ಸಿದ್ಧತೆ ನಡೆಸಿದ್ದು,  ಪಕ್ಷಾಂತರ ನಿಷೇಧ ಕಾಯಿದೆ ಅಡಿ  ಕ್ರಮಕೈಗೊಳ್ಳಲು ಕಾಂಗ್ರೆಸ್ ಶಾಸಕಾಂಗ ಸಭೆ ನಿರ್ಧರಿಸಿದೆ. 

ಈ ನಿರ್ಧಾರದಿಂದ  ಬಿಜೆಪಿ ಸಂಪರ್ಕದಲ್ಲಿರುವ ಶಾಸಕರಾದ ರಮೇಶ್ ಜಾರಕಿಹೊಳಿ,ಡಾ.ಉಮೇಶ್ ಜಾಧವ್,ಬಿ.ನಾಗೇಂದ್ರ,ಮಹೇಶ್ ಕುಮಠಳ್ಳಿ ಅವರಿಗೆ ಕಾಂಗ್ರೆಸ್‍ನ ಬಾಗಿಲು ಶಾಶ್ವತವಾಗಿ ಮುಚ್ಚಿದಂತಾಗಿದ್ದು,  ಈ ನಾಲ್ವರು ಶಾಸಕರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್ ಸ್ಪೀಕರ್‍ಗೆ  ದೂರು ಸಲ್ಲಿಸಲಿದೆ. 

ಕಾಂಗ್ರೆಸ್‍ನ ಈ ಕ್ರಮ ಬಿಜೆಪಿಯತ್ತ ಮುಖಮಾಡುವ ಚಿಂತನೆಯಲ್ಲಿದ್ದ ಇತರ ಶಾಸಕರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದು,  ಪದೇ ಪದೇ ಪಕ್ಷದ ಶಿಸ್ತು ಉಲ್ಲಂಘಿಸುವವ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಕಾಂಗ್ರೆಸ್ ರವಾನಿಸಿದೆ. 
ಮಾಜಿ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದ ಸಿಎಲ್‍ಪಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು, ತಪ್ಪು ತಿದ್ದಿಕೊಂಡು ಸಿಎಲ್‍ಪಿ ಹಾಗೂ ಅಧಿವೇಶನಕ್ಕೆ ಹಾಜರಾಗಲು ಸೂಚನೆ ನೀಡಲಾಗಿತ್ತು. ಆದರೆ ಈ ಶಾಸಕರು ಯಾವುದಕ್ಕು ಸರಿಯಾಗಿ ಸ್ಪಂದಿಸದೇ ನಿರ್ಲಕ್ಷ್ಯತೋರಿಸಿದ್ದರಿಂದ ಈ ಕ್ರಮ ಅನಿವಾರ್ಯವಾಯಿತು ಅನ್ನೋದು ಕಾಂಗ್ರೆಸ್ ನಾಯಕರ ಅಭಿಮತ. ಒಟ್ಟಿನಲ್ಲಿ ಅತೃಪ್ತಿಯಿಂದ ಪಕ್ಷವನ್ನು ಹಾಗೂ ಸರ್ಕಾರವನ್ನು ನಡುಗಿಸಲು ಮುಂದಾಗಿದ್ದ ಶಾಸಕರು ಈಗ ತಾವೇ ಸಂಕಷ್ಟಕ್ಕೆ ತುತ್ತಾಗಿತ್ತು. ಏನಾಗುತ್ತೆ ಕಾದು ನೋಡಬೇಕಿದೆ. 


ಸಂಬಂಧಿತ ಟ್ಯಾಗ್ಗಳು

#Clp #Suspension #Rebel Mla #Congress


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ