ಸ್ಪೀಕರ್ ರಮೇಶ್ ಕುಮಾರ್ ಗೆ ಕುಮಾರಸ್ವಾಮಿ ಪತ್ರ

Kumaraswamy Letter to Speaker Ramesh Kumar

08-02-2019

ಈ ಮಧ್ಯೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಲ್ಲದೆ ಬಿಜೆಪಿ ನಾಯಕರು ಸಭಾಧ್ಯಕ್ಷರ ಬಗ್ಗೆ ಆಡಿದ ಆಕ್ಷೇಪಾರ್ಹ ಮಾತುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಹೀಗೆ ಇಂದು ನಡೆದ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವನ್ನುಂಟು ಮಾಡಿದ್ದು ಹೀಗೆ ಬಾಂಬ್ ಸಿಡಿಯುತ್ತದೆ ಎಂಬ ವಿವರ ಪಡೆದ ಕೂಡಲೇ ಆಪರೇಷನ್ ಕಮಲ ಕಾರ್ಯಾಚರಣೆಗೆ ಬೆಂಬಲ ನೀಡಿದ್ದ ಬಹುತೇಕ ಶಾಸಕರು ಯೂ ಟರ್ನ್ ಹೊಡೆದು ನಾವು ಪಕ್ಷ ನಿಷ್ಟರು ಎಂದು ಘೋಷಿಸಿಕೊಂಡಿದ್ದಾರೆ.

ಈ ಪೈಕಿ ಮುಂಬಯಿಯಲ್ಲಿ ಅಡಗಿಕೊಂಡಿದ್ದವರು ತರಾತುರಿಯಲ್ಲಿ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ಇಂದು ನಡೆದ ಶಾಸಕಾಂಗ ಪಕ್ಷದ ಸಭೆಗೆ ಬಂದರೆ ಅನರ್ಹತೆಯ ಭೀತಿ ಎದುರಿಸುತ್ತಿರುವ ಶಾಸಕರ ಪೈಕಿ ರಮೇಶ್ ಜಾರಕಿಹೊಳಿ,ನನ್ನ ಮಗಳ ಮದುವೆ ತಯಾರಿಯಲ್ಲಿರುವುದರಿಂದ ಗೈರು ಹಾಜರಾತಿಯನ್ನು ಮನ್ನಿಸಿ ಎಂದಿದ್ದಾರೆ.

ಇದೇ ರೀತಿ ಉಮೇಶ್ ಜಾಧರ್ ಅವರು ಕೂಡಾ ವೈಯಕ್ತಿಕ ಕಾರಣಗಳಿಂದ ಶಾಸಕಾಂಗ ಸಭೆಗೆ ಬರಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರಾದರೂ ಗೈರು ಹಾಜರಾದ ನಾಲ್ವರ ವಿರುದ್ಧ ಕ್ರಮ ಜರುಗಿಸಲು ಕಾಂಗ್ರೆಸ್ ಶಾಸಕಾಂಗ ಸಭೆ ನಿರ್ಧರಿಸಿತು.

ಆದರೆ ಈ ಎಲ್ಲದರ ನಡುವೆ ನೆನ್ನೆಯವರೆಗೆ ವಿಪರೀತ ಆತ್ಮವಿಶ್ವಾಸದಲ್ಲಿದ್ದ ಬಿಜೆಪಿ ನಾಯಕರು ಕುಮಾರಸ್ವಾಮಿ ಸಿಡಿಸಿದ ಆಡಿಯೋ ಬಾಂಬ್ ರಿಲೀಸ್‍ನಿಂದ ವಿಚಲಿತರಾಗಿದ್ದು ಇದರ ಪರಿಣಾಮವಾಗಿ ಮುಂದಿನ ವಾರ ಹಣಕಾಸು ಬಿಲ್ ಮಂಡನೆ ಮಾಡುವ ಸಮಯದಲ್ಲಿ ಅದು ಸರ್ಕಾರವನ್ನು ಬೀಳಿಸುವ ಸಾಹಸಕ್ಕೆ ಮುಂದಾಗುತ್ತದೆಯೇ?ಎಂಬುದನ್ನು ಕಾದು ನೋಡಬೇಕಿದೆ.
 


ಸಂಬಂಧಿತ ಟ್ಯಾಗ್ಗಳು

#Speaker #Kumarswamy #Letter #Bjp


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ