ಅವತಾರ ಪುರುಷನಾಗಿ ಶರಣ್

Comedy King Sharan In Avtaar Purush

08-02-2019

ಹಾಸ್ಯ ಚಿತ್ರಗಳ ಮೂಲಕ ಮೋಡಿ ಮಾಡಿದ ನಟ ಶರಣ್ ಈ ಬಾರಿ ವಿಭಿನ್ನವಾದ ಗೆಟಪ್‍ನಲ್ಲಿ  ಅವತಾರ ಪುರುಷನಾಗಿ ಬರುತ್ತಿದ್ದಾರೆ. ವಿಭಿನ್ನವಾದ ಈ ಚಿತ್ರದಲ್ಲಿ ಶರಣ್ ಕೂಡ ಹೊಸ ಗೆಟಪ್‍ನಲ್ಲಿ ಕಾಣಿಸಿಕೊಳ್ಳಲಿದ್ದು, ಈ ಚಿತ್ರದ ಪೋಸ್ಟರ್‍ನ್ನು ಶರಣ್ ಹುಟ್ಟುಹಬ್ಬದಂದು ಬಿಡುಗಡೆ ಮಾಡಲಾಗಿದೆ. 

ಮಹಾಭಾರತದ ಎಳೆಯನ್ನು ಇಟ್ಕೊಂಡು ಈ ಚಿತ್ರ ನಿರ್ಮಿಸಲಾಗಿದೆಯಂತೆ. ಶರಣಕ್ಕೆ ಅಭಿನಯಕ್ಕೆ ಸರಿಹೊಂದುವ ಟೈಟಲ್ ಇಡುವ ಉದ್ದೇಶದಿಂದ ಚಿತ್ರಕ್ಕೆ ಅವತಾರ ಪುರುಷ ಎಂದು ಹೆಸರಿಡಲಾಗಿದೆ.  ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾಗೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕರು.
 
 ಈ ಚಿತ್ರದಲ್ಲಿ ಕಾಮಿಡಿ ಕಿಂಗ್ ಶರಣ, ಜ್ಯೂನಿಯರ್ ಆರ್ಟಿಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಫೆಬ್ರವರಿ 11 ರಿಂದ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ಚಿಕ್ಕಮಗಳೂರಿನಲ್ಲಿ ಬಹುತೇಕ  ಚಿತ್ರೀಕರಣ ನಡೆಯಲಿದ್ದು, ಸಿನಿಮಾಕ್ಕೆ ಚರಣ್ ರಾಜ್ ಅವರ ಸಂಗೀತ ಮತ್ತು ವಿಲಿಯಮ್ ಡೇವಿಡ್ ಅವರ ಕೈಚಳಕವಿದೆ.
ಕಳೆದ 30ವರ್ಷದ ಹಿಂದೆ ಇದನ್ನೆ ಹೋಲುವ ಟೈಟಲ್‍ನಲ್ಲಿ ಹಿರಿಯ ನಟ ಅಂಬರೀಶ್ ನಟಿಸಿದ್ದರು. ಈಗ ಶರಣ್ ಮೂಲಕ ಮತ್ತೊಮ್ಮೆ ಅವತಾರ ಪುರುಷ ತೆರೆಗೆ ಬರಲಿರೋದು ನಿಜಕ್ಕೂ ಖುಷಿ ಸಂಗತಿ. 


ಸಂಬಂಧಿತ ಟ್ಯಾಗ್ಗಳು

#Sharan #Goverment #Comedy KIng #Karnataka


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ