ಆಫರೇಶನ್ ಕಮಲಕ್ಕೆ ಆಡಿಯೋ ಸಾಕ್ಷಿ ಒದಗಿಸಿದ ಸಿಎಂ ಕುಮಾರಸ್ವಾಮಿ 

 CM Kumaraswamy provided Audio Proof to Operation Kamala

08-02-2019

ರಾಜ್ಯ ಬಜೆಟ್ ನೀರಿಕ್ಷೆಯಲ್ಲಿದ್ದ ರಾಜ್ಯದ ಜನತೆಗೆ ಸಿಎಂ ಕುಮಾರಸ್ವಾಮಿ ಭರ್ಜರಿ ಶಾಕ್ ನೀಡಿದ್ದಾರೆ. ಪ್ರತಿಪಕ್ಷ ನಡೆಸುತ್ತಿದ್ದ ಆಫರೇಶನ್ ಕಮಲಕ್ಕೆ ಭರ್ಜರಿ ಸಾಕ್ಷಿ ಒದಗಿಸಿರುವ ಸಿಎಂ ಕುಮಾರಸ್ವಾಮಿ , ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಾಸಕರೊಂದಿಗೆ ಮಾತನಾಡಿ ಆಮಿಷ ಒಡ್ಡಿರುವ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. 

ಬೆಳಗ್ಗೆ 10.29 ಕ್ಕೆ ಈ ಆಡಿಯೋ ಬಿಡುಗಡೆಯಾಗಿದ್ದು, ಬಿಎಸ್‍ವೈ ಗುರುಮಿಠ್‍ಕಲ್ ಶಾಸಕ ನಾಗನಗೌಡ್ ಅವರ ಪುತ್ರನೊಂದಿಗೆ ಮಾತನಾಡಿ ಕೋಟಿ ಕೋಟಿ ಹಣ ನೀಡುತ್ತೇವೆ. ನಿಮ್ಮ ತಂದೆಗೆ  ಮಂತ್ರಿ ಸ್ಥಾನ ನೀಡುತ್ತೇವೆ ನೀವು ಹಣ ಮಾಡಿಕೊಳ್ಳಿ ಹಾಗೂ ಬಿಜೆಪಿಗೆ ಬನ್ನಿ ಎಂದು ಆಹ್ವಾನಿಸಿದ್ದಾರೆ. ಅಲ್ಲದೇ ನಿಮಗೆಲ್ಲ ಹಣ ನೀಡುವುದನ್ನು ಮುಂಬೈನಲ್ಲಿರುವ ವಿಜಯೇಂದ್ರ ನೋಡಿಕೊಳ್ಳುತ್ತಾರೆ ಎಂದು ಕೂಡ ಹೇಳಿರುವುದು ದಾಖಲಾಗಿದೆ.

ಮಾಧ್ಯಮಗಳ ಮುಂದೆ ಈ ಆಡಿಯೋವನ್ನು ಸಿಎಂ ಕುಮಾರಸ್ವಾಮಿ ರಿಲೀಸ್ ಮಾಡಲಾಗಿದ್ದು, ಇದರಲ್ಲಿರುವ ಧ್ವನಿ ಯಡಿಯೂರಪ್ಪನವರದ್ದು ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಇನ್ನು ದೇವದುರ್ಗದಲ್ಲಿ ಆಫರೇಶನ್ ಕಮಲದ ಡೀಲ್ ನಡೆಯುವಾಗ ಹಾಸನ ಎಮ್‍ಎಲ್‍ಎ ಪ್ರೀತ್‍ಂ ಗೌಡ ಕೂಡ ಇದ್ದರು ಎಂದು ಎಮ್‍ಎಲ್‍ಎ ಪುತ್ರ ಶರಣಗೌಡ್ ಹೇಳಿದ್ದಾರೆ.

ಇದೀಗ ಈ ಆಡಿಯೋ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು,  ಬಿಜೆಪಿಗೆ ತೀವ್ರ ಮುಜುಗರ ತಂದಿದೆ. ಈ ಪೋನ್ ಮಾತುಕತೆಯಲ್ಲಿ ಸ್ಪೀಕರ್ ಹೆಸರನ್ನು ಬಳಸಲಾಗಿರೋದರಿಂದ ಅವರಿಗೂ ಪತ್ರ ಬರೆಯೋದಾಗಿ ಸಿಎಂ ಹೇಳಿದ್ದಾರೆ. ಒಟ್ಟಿನಲ್ಲಿ ಬಜೆಟ್ ಮಂಡನೆಗೆ ಕ್ಷಣಗಣನೆ ನಡೆದಿರುವಾಗ ರಾಜಕೀಯದಲ್ಲಿ ಹಲವು ಬೆಳವಣಿಗೆಗಳು ಆರಂಭವಾಗಿದ್ದು, ಏನಾಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ. 


ಸಂಬಂಧಿತ ಟ್ಯಾಗ್ಗಳು

#Karnataka #Bsy #Kumarswamy #Audio Proof


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ