ಅತಿಯಾಗಿ ಪೇಸ್‍ಬುಕ್ ಬಳಸಿದ್ರೆ ಕಾದಿದೆ ಆಪತ್ತು

 Facebook is threatening personal life

07-02-2019

ನೀವು ಅತಿಯಾಗಿ ಪೇಸ್‍ಬುಕ್ ಬಳಸ್ತಿರಾ? ಸಾಮಾಜಿಕ ಜಾಲತಾಣದಲ್ಲೇ ಹೆಚ್ಚಿನ ಸಮಯ ಕಳೆಯುತ್ತೀರಾ?  ನಿಮ್ಮ ಈ ಹವ್ಯಾಸ ನಿಮ್ಮ ಹಾಗೂ ನಿಮ್ಮ ಸಂಗಾತಿಯ ನಡುವಿನ ಪ್ರಣಯ ಸಂಬಂಧದ ಮೇಲೆ ದುಷ್ಪರಿಣಾಮ ಬೀಳಬಹುದು ಹುಶಾರ್. ಹೌದು ಇತ್ತೀಚಿಗೆ ಸೋಷಿಯಲ್ ಸೈನ್ಸ್ ಕಂಪ್ಯೂಟರ್ ರಿವ್ಯೂ ಎಂಬ ನಿಯತಕಾಲಿಕ ಪ್ರಕಟಿಸಿದ ಅಧ್ಯಯನ ವರದಿಯಲ್ಲಿ ಈ ಅಂಶ ಸಾಬೀತಾಗಿದೆ. ಸಾಮಾಜಿಕ ಜಾಲತಾಣಗಳ ಅತಿಯಾದ  ಬಳಕೆ ಪ್ರಣಯ ಸಂಬಂಧಗಳ ಮೇಲೆ ಹಾಗೂ ವೈಯಕ್ತಿಕ ಬದುಕಿನ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ ಎಂದ ಅಂಶ ಪ್ರಕಟಿಸಿದೆ. 

ಸೋಷಿಯಲ್ ಮೀಡಿಯಾದಲ್ಲಿ ಆನ್‍ಲೈನ್‍ನಲ್ಲೇ ಸುಲಭವಾಗಿ ಹೊಸ ಹೊಸ ಸ್ನೇಹಿತರನ್ನು ಪಡೆಯಲು ಸಾಧ್ಯವಾಗುವುದು ಹಾಗೂ ಅವರೊಂದಿಗೆ ವೈಯಕ್ತಿಕವಾಗಿ ಬೆಸೆದುಕೊಳ್ಳಲು ಅವಕಾಶ ಸಿಗೋದರಿಂದ ಸಂಗಾತಿ ಅಥವಾ ಪತಿ-ಪತ್ನಿ ನಡುವಿನ ಬಾಂಧವ್ಯ ಹಳಸಲು ಅವಕಾಶವಾಗುತ್ತಿದೆ ಎಂಬುದನ್ನು ಅಧ್ಯಯನ ಉಲ್ಲೇಖಿಸಿದೆ. ಅಲ್ಲದೆ ಹೀಗೆ ಆನ್‍ಲೈನ್‍ನಲ್ಲಿ ಲಭ್ಯವಾಗುವ ಪ್ರೆಂಡ್ಸ್ ವ್ಯಕ್ತಿಗಳ ಜೊತೆ ಭಾವನಾತ್ಮಕವಾದ ಹಾಗೂ ಲೈಂಗಿಕ ಸಂಬಂಧ ಬೆಳೆಸಿಕೊಳ್ಳುವುದು ಸುಲಭವಾಗಿರುವದರಿಂದ ಜನರು ಸುಲಭವಾಗಿ ನೈತಿಕ ಎಲ್ಲೇ ಮೀರುತ್ತಿದ್ದಾರೆ.
 ಈ ಅಧ್ಯಯನವು ಪ್ರಣಯ ಸಂಬಂಧ, ನೀರಸವಾದ ಬದುಕು, ಸಾಮಾಜಿಕ ಜಾಲತಾಣಗಳ ಅತಿಯಾದ ಅವಲಂಬನೆ, ಬೇರೆ ಸಾಂಗತ್ಯದ ಬಯಕೆ ಇಂಥ ವಿಚಾರಗಳ ಕುರಿತು ಅಧ್ಯಯನ ನಡೆಸಿದೆ. ಈ ವರದಿಯನ್ನು ಸೋಷಿಯಲ್ ಸೈನ್ಸ್ ಕಂಪ್ಯೂಟರ್ ರಿವ್ಯೂ ನಿಯತಕಾಲಿಕ ಪ್ರಕಟಿಸಿದೆ.
ಈ ಅಧ್ಯಯನಕ್ಕಾಗಿ ಒಟ್ಟು 578 ಸಂಗಾತಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇವರ ಪೈಕಿ 330 ಜೋಡಿಗಳು ಬದ್ಧವಾದ ಹೊಣೆಗಾರಿಕೆಯನ್ನು ನಿರ್ವಹಿಸಲು ಇಚ್ಛಿಸಿದರೆ ಇನ್ನುಳಿದ 248 ಜೋಡಿಗಳು ಸಂದರ್ಭಕ್ಕೆ ಸಿಕ್ಕವರ ಜೊತೆ ರೋಮ್ಯಾಂಟಿಕ್ ಗಳಿಗೆಗಳನ್ನು ಕಳೆಯುವ ಆಸಕ್ತಿ ಹೊಂದಿದ್ದರು ಎಂಬ ಅಂಶ ಬಯಲಾಗಿದೆ. 

ಇತ್ತೀಚಿನ ದಿನಗಳಲ್ಲಿ ಪೇಸ್‍ಬುಕ್‍ನ ಅತಿಯಾದ ಗೀಳು ಪತಿ-ಪತ್ನಿಯ ನಡುವೆ ಕಲಹ ಹಾಗೂ ಡಿವೋರ್ಸಗೆ ಕಾರಣವಾಗಿರುವ ಹಲವು ಪ್ರಕರಣಗಳು ವರದಿಯಾಗುತ್ತಲೆ ಇದೆ. ಹೀಗಾಗಿ ಈ ಅಧ್ಯಯನ ವಾಸ್ತವವಾಗಿ ಸಮಾಜದಲ್ಲಿನಡೆಯುತ್ತಿರೋದನ್ನೆ ಬಿಂಬಿಸಿದೆ ಎಂಬ ಮಾತು ಕೇಳಿಬಂದಿದೆ. 


ಸಂಬಂಧಿತ ಟ್ಯಾಗ್ಗಳು

#Facebook #Personal Life #Study #Threatening


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ