ಕೆರೆಯಲ್ಲಿ ಮುಳುಗಿದ್ದ ಬಾಲಕರ ಶವ ಪತ್ತೆ !

Kannada News

06-06-2017

ಬಳ್ಳಾರಿ:- ಕಳೆದ ಜೂನ್ 4ರ ಸಂಜೆ ಸಂಡೂರು ತಾಲ್ಲೂಕಿನ ಬಂಡ್ರಿ ಗ್ರಾಮದ ಕೆರೆಯಲ್ಲಿ ಮುಳುಗಿದ್ದ  ಮೂವರು ಬಾಲಕರ ಶವಗಳು ಇಂದು ಪತ್ತೆಯಾಗಿವೆ, ನಾಲ್ಕನೇ ತರಗತಿಯ ಮಾರುತಿ(10) ವರ್ಷ,  ಮೊಹಮ್ಮದ್ ಸುಬಾನಿ (7), ಮೂರನೇ ತರಗತಿಯ ಗುರುರಾಜ(9) ಸಾವನ್ನಪ್ಪಿದ್ದಾರೆ. ಕೆರೆಯಲ್ಲಿ ಮುಳುಗಿದ್ದ ಮಕ್ಕಳನ್ನು ಮೊನ್ನೆ ಮತ್ತು ನಿನ್ನೆ ಇಡೀ ದಿನ ಪೋಷಕರು ಗ್ರಾಮದ ಜನತೆ ಮತ್ತು ಪೊಲೀಸರು ಹುಡುಕಾಟ ನಡೆಸಿದ್ದರು, ಆದರೆ ಬಾಲಕರ ಮೃತ ದೇಹಗಳು ದೊರೆತಿರಲಿಲ್ಲ. ಇಂದು ಬೆಳಗಾಗುವುದರೊಳಗೆ ಬಾಲಕರ ಶವಗಳು ಕೆರೆಯ ನೀರಲ್ಲಿ ತೇಲಿವೆ. ಇದನ್ನು ಕಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಪುಟ್ಟ ಬಾಲಕರನ್ನು ಕಳೆದುಕೊಂಡಿರುವ ಪೊಷಕರಿಗೆ ದಿಕ್ಕು ತೋಚದಂತಾಗಿದ್ದು, ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.  ಈ ಬಗ್ಗೆ ಕೂಡ್ಲಿಗಿ ರಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ