ಕಸ ಗುಡಿಸೋ ಕೆಲಸಕ್ಕೆ ಅರ್ಜಿ ಹಾಕಿದ ಇಂಜಿನಿಯರ್ಸ್

 Engineers Who Applied for Sweeper Work

07-02-2019

ಅಲ್ಲಿ ಕಸ ಗುಡಿಸುವ ಸಫಾಯಿ ಕರ್ಮಾಚಾರಿಗಳ ಕೆಲಸಕ್ಕೆ ಅರ್ಜಿ ಕರೆಯಲಾಗಿದೆ. 14 ಹುದ್ದೆಗಳಿವೆ. ಆದರೆ  ಸಲ್ಲಿಕೆಯಾಗಿರೋದು ಮಾತ್ರ ಬರೋಬ್ಬರಿ 4 ಸಾವಿರ ಅರ್ಜಿ. ಅದಕ್ಕಿಂತ ವಿಶೇಷ ಅಂದ್ರೆ ವಿದ್ಯಾರ್ಹತೆಯೇ ಬೇಕಿಲ್ಲದ ಈ ಹುದ್ದೆಗೆ ಎಂಜಿನಿಯರಿಂಗ್, ಬಿಟೆಕ್,ಎಂಟೆಕ್ ಹಾಗೂ ಎಂಬಿಎ ಪದವೀಧರರೂ ಅಪ್ಲಿಕೇಶನ್  ಸಲ್ಲಿಸಿದ್ದಾರೆ. ಇದೇನೋ ಜೋಕ್ ಅಂದುಕೊಂಡ್ರಾ ಖಂಡಿತಾ ಅಲ್ಲಾ. ಇಂತಹದೊಂದು ಸಂಗತಿ ಬೆಳಕಿಗೆ ಬಂದಿರೋದು ಪಕ್ಕದ ರಾಜ್ಯ ತಮಿಳುನಾಡಿನಲ್ಲಿ. 

ತಮಿಳುನಾಡಿನ  ವಿಧಾನಸಭೆಯಲ್ಲಿ ಕಸಗುಡಿಸುವ 14 ಸಫಾಯಿ ಕರ್ಮಾಚಾರಿಗಳ ಹುದ್ದೆ ನೇಮಕಕ್ಕೆ ಅರ್ಜಿ ಕರೆಯಲಾಗಿತ್ತು. ಇದಕ್ಕೆ ನಿಗದಿಪಡಿಸಲಾಗಿರುವ ಅರ್ಹತೆ,  ಶಾರೀರಿಕವಾಗಿ ಆರೋಗ್ಯವಂತರಾಗಿರಬೇಕು. 18 ವರ್ಷ ವಯಸ್ಸಾಗಿರಬೇಕು. ಈ ಉದ್ಯೋಗಕ್ಕೆ ನಿಗದಿಯಾದ ಸಂಬಳ ತಿಂಗಳಿಗೆ 17 ಸಾವಿರ ರೂಪಾಯಿ. 
ಇದಕ್ಕೆ 4 ಸಾವಿರ ಅರ್ಜಿಗಳು ಬಂದಿದ್ದು, ಬಹುತೇಕರು ಕನಿಷ್ಠ ಪದವೀಧರರಾಗಿದ್ದಾರೆ. ಇದು ನಿರುದ್ಯೋಗಿಗಳ ಪರಿಸ್ಥಿತಿಯನ್ನು ಎತ್ತಿಹಿಡಿಯುವಂತಿದ್ದು, ಬಹುತೇಕ ಖಾಸಗಿ ಸಂಸ್ಥೆಗಳು ಪಾವತಿಸುವುದಕ್ಕಿಂತ ಹೆಚ್ಚಿನ ಸಂಬಳವನ್ನು ವಿಧಾನಸಭೆ ನಿಗದಿ ಪಡಿಸಿರುವುದರಿಂದ ನಿರುದ್ಯೋಗಿಗಳು ಕಸ ಗುಡಿಸೋ ಕೆಲಸವಾದರೂ ಸಾಕು ಅಂತ ಅರ್ಜಿ ಹಾಕಿದ್ದಾರಂತೆ. 
ಸಪ್ಟೆಂಬರ್ 26 ಕ್ಕೆ ಈ ಪೌರ ಕಾರ್ಮಿಕರ ನೇರ ನೇಮಕಾತಿ ನಡೆಯಲಿದೆ. ತಮಿಳುನಾಡು ಸೇರಿದಂತೆ ದೇಶದ ಎಲ್ಲೆಡೆ ಈ ವಿಚಾರ ಸಖತ್ ವೈರಲ್ ಆಗಿದ್ದು, ಪದವಿದರರು ಪೌರ ಕಾರ್ಮಿಕರ ಕೆಲಸಕ್ಕೆ ಅರ್ಜಿ ಹಾಕಿರೋದು ವ್ಯವಸ್ಥೆಯ ದುಸ್ಥಿತಿ ಹಾಗೂ ನಿರುದ್ಯೋಗಿಗಳ ಹೀನಾಯ ಸ್ಥಿತಿಗೆ ಹಿಡಿದ ಕೈಗನ್ನಡಿ ಎಂದು ಟೀಕಿಸಿದ್ದಾರೆ. ಇನ್ನೊಂದು ಕಡೆ ಕಸ ಗುಡಿಸೋದಾದ್ರೂ ಪರವಾಗಿಲ್ಲ ಸರ್ಕಾರಿ ಕೆಲ್ಸ ಅನ್ನೋ ಕಾರಣಕ್ಕೂ ಜನ ಮುಗಿಬಿದ್ದಿದ್ದಾರೆ ಎನ್ನಲಾಗ್ತಿದೆ. 


ಸಂಬಂಧಿತ ಟ್ಯಾಗ್ಗಳು

#Sweeper Work #Tamilnadu # Engineers #Vidhansoudha


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ