ಯದುವೀರ್ ರಾಜಕೀಯ ಪ್ರವೇಶ ಯಾವಾಗ? 

When Yadavir Enters Politics

07-02-2019

ಚುನಾವಣೆ ಹತ್ತಿರವಾಗುತ್ತಿದ್ದಂತೆ ಸೆಲಿಬ್ರೆಟಿಗಳು, ಪ್ರಸಿದ್ಧ ವ್ಯಕ್ತಿಗಳು ರಾಜಕೀಯ ಪ್ರವೇಶ ಮಾಡೋದು ಸಹಜವಾದ ಬೆಳವಣಿಗೆ. ಇದೀಗ  ಮೈಸೂರಿನ ಯುವರಾಜ ಯದುವೀರ್ ಅವರ ರಾಜಕೀಯ ಪ್ರವೇಶದ ಕುರಿತು ಚರ್ಚೆಗಳು ಆರಂಭವಾಗಿದ್ದು, ಯದುವೀರ್ ಯಾವಪಕ್ಷವನ್ನು ಬೆಂಬಲಿಸುತ್ತಾರೆ? ಚುನಾವಣೆಗೆ ನಿಲ್ಲುತ್ತಾರಾ? ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದವು. ಆದರೆ ಈ ಎಲ್ಲ ಚರ್ಚೆಗಳಿಗೆ ಯದುವೀರ್ ಅಂತ್ಯ ಹಾಡಿದ್ದಾರೆ. 

ಹೌದು ಮೈಸೂರಿನ ಯುವರಾಜನಾಗಿ ಯದುವೀರ್ ಪಟ್ಟಾಭಿಷೇಕವಾದಾಗಿನಿಂತ ಯದುವೀರ್ ರಾಜಕೀಯ ಪ್ರವೇಶದ ಕುರಿತು ಚರ್ಚೆಗಳು ನಡೆಯುತ್ತಲೇ ಇದೆ. ಅಷ್ಟೇ ಅಲ್ಲ ಹಲವು ರಾಷ್ಟ್ರೀಯ ಪಕ್ಷಗಳು ಯದುವೀರ್ ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯುವ ಕಸರತ್ತನ್ನು ನಡೆಸಿವೆ. ಆದರೆ ಇದ್ಯಾವುದಕ್ಕೂ ಯದುವೀರ್ ತಲೆಕೆಡಿಸಿಕೊಂಡಿಲ್ಲ. ತಮ್ಮ ರಾಜಕೀಯ ಪ್ರವೇಶದ ಕುರಿತಾಗಿನ ಚರ್ಚೆಗೆ ಉತ್ತರ ನೀಡಿರುವ ಯದುವೀರ್, ರಾಜಕಾರಣದಲ್ಲಿ ನನಗೆ ಆಸಕ್ತಿ ಇಲ್ಲ. ಎಲ್ಲ ಪಕ್ಷದವರು, ರಾಜಕೀಯ ನಾಯಕರು ಅರಮನೆಗೆ ಭೇಟಿ ನೀಡುತ್ತಾರೆ ಮತ್ತು ಮಾತನಾಡುತ್ತಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದಿದ್ದಾರೆ.

ಸಮಾಜ ಸೇವೆ ಮಾಡಲು ರಾಜಕೀಯಕ್ಕೇ ಬರಬೇಕಾದ ಅಗತ್ಯವಿಲ್ಲ ಎಂದಿರುವ ಯದುವೀರ್ ರಾಜಮನೆತನದಿಂದಲೇ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಜನಸೇವೆ ಮಾಡಲು ಇಚ್ಛಿಸುತ್ತೇನೆ. ಹಿಂದಿನಿಂದಲೂ ಮೈಸೂರು ರಾಜ ಮನೆತನ ನಾಡಿನ ಜನ ಸೇವೆ ಮಾಡಿದೆ. ಕನ್ನಡಿಗರ ಸೇವೆ ನಡೆಯುತ್ತಲೇ ಇರುತ್ತದೆ. ಅದಕ್ಕಾಗಿ ಒಂದು ಪಕ್ಷವನ್ನು ಆಶ್ರಯಿಸುವ ಅಗತ್ಯ ಕಾಣುತ್ತಿಲ್ಲ ಎಂದು ಯದುವೀರ್ ಸ್ಪಷ್ಟವಾಗಿ ರಾಜಕೀಯ ಪ್ರವೇಶದ ಗುಮಾನಿಗಳನ್ನು ತಳ್ಳಿಹಾಕಿದ್ದಾರೆ.
 
ಯದುವೀರ್ ಬಿಜೆಪಿ ಸೇರ್ಪಡೆಗೊಂಡು ಮೈಸೂರಿನಿಂದ ಲೋಕಸಭೆಗೆ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಆಗಾಗ ರಾಜಕೀಯ ವಲಯದಲ್ಲಿ ಕೇಳಿಬಂದಿದ್ದವು. ಇದೀಗ ಎಲ್ಲ ಊಹಾಪೋಹಗಳಿಗ ಯದುವೀರ್ ಸಮರ್ಥವಾದ ಉತ್ತರ ನೀಡಿದ್ದಾರೆ. ಹೀಗಾಗಿ ಶ್ರೀಕಂಠದತ್ತ ಒಡೆಯರ್ ಬಳಿಕ ಮೈಸೂರು ರಾಜಮನೆತನದ ಸಕ್ರಿಯ ರಾಜಕಾರಣ ಸಾಧ್ಯತೆಗಳು ಕ್ಷೀಣಿಸಿದ್ದು, ಯದುವೀರ್ ರಾಜಕೀಯದಿಂದ ಹೊರಗಿದ್ದುಕೊಂಡು ಸಮಾಜಸೇವೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Yaduveer #politics #Mysore Prince #Entry


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ