ಕಿರುತೆರೆಗೆ ಸಲ್ಮಾನ್ ಖಾನ್

 Salman Khan to television

07-02-2019

ಹಿಟ್ ಚಿತ್ರಗಳ ಮೂಲಕ ಬಾಲಿವುಡ್‍ನಲ್ಲಿ ತನ್ನ ದರ್ಬಾರ ನಡೆಸಿರುವ ಬಾಕ್ಸಾಪೀಸ್ ಸುಲ್ತಾನ್ ಸಲ್ಮಾನ್ ಖಾನ್ ಈಗ ಸಿನಿಮಾ ಜೊತೆ ಕಿರುತೆರೆಗೂ ಕಾಲಿಟ್ಟಿದ್ದಾರೆ. ಹೌದು ಸಲ್ಮಾನ್ ಖಾನ್ ಪಂಜಾಬ್‍ನ  ಪೈಲ್ವಾನ್ ರೊಬ್ಬರ ಕತೆಯನ್ನು ಧಾರಾವಾಹಿ ರೂಪದಲ್ಲಿ ತೆರೆಗೆ ತರಲಿದ್ದು, ಇದರಲ್ಲಿ ಸಲ್ಮಾನ್ ಸಹೋದರ ಸುಹೈಲ್ ಖಾನ್ ರಸ್ಲರ್ ಪಾತ್ರ ವಹಿಸಲಿದ್ದಾರೆ. 

ಪಂಜಾಬ್‍ನ ಪ್ರಸಿದ್ಧ ಗಾಮಾ ಪೈಲ್ವಾನ್ ಬದುಕಿನ ಕತೆಯನ್ನು ಸೀರಿಯಲ್ ಮಾಡಲು ಸಲ್ಮಾನ್ ಖಾನ್ ನಿರ್ಧರಿಸಿದ್ದು, ಸೀರಿಯಲ್‍ನ ಚಿತ್ರೀಕರಣ ಪಂಜಾಬ್ ಹಾಗೂ ಲಂಡನ್‍ನಲ್ಲಿ ನಡೆಯಲಿದೆ. ಗಾಮಾ ಪೈಲ್ವಾನ್ ಎಂದೇ ಖ್ಯಾತಿ ಪಡೆದಿರುವ ಗುಲಾಮ್ ಮೊಹಮ್ಮದ್ ಜಗತ್ತಿನ ಅಪರೂಪದ ರೆಸ್ಲರ್ ಎಂದೇ ಖ್ಯಾತಿ ಗಳಿಸಿಕೊಂಡಿದ್ದು, ಇವರ ಬಗ್ಗೆ ಮೊದಲು ಸಲ್ಮಾನ್ ಖಾನ್ ಚಿತ್ರ ನಿರ್ಮಿಸಲು ನಿರ್ಧರಿಸಿದ್ದರು. ಆದರೆ ಕಾರಣಾಂತರಗಳಿಂದ ಚಿತ್ರ ನಿರ್ಮಾಣ ಸಾಧ್ಯವಾಗಿರಲಿಲ್ಲ. ಹೀಗಾಗಿ ಸಲ್ಮಾನ್ ಈಗ ಸೀರಿಯಲ್ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದಾರೆ. 

ಸಧ್ಯಕ್ಕೆ ಭಾರತ್ ಶೂಟಿಂಗ್‍ನಲ್ಲಿ ನಿರತರಾಗಿರುವ ಸಲ್ಮಾನ್ ಖಾನ್, ಭಾರತ್ ಬಳಿಕ ಗಾಮಾ ಪೈಲ್ವಾನ್ ಸೀರಿಯಲ್ ಕೈಗೆತ್ತಿಕೊಳ್ಳಲಿದ್ದಾರೆ. ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿರುವ ಸಲ್ಮಾನ್ ಖಾನ್, ಇದೀಗ ಸೀರಿಯಲ್ ನಿರ್ಮಾಣಕ್ಕೂ ಮುಂಧಾಗಿದ್ದು, ಬಾಲಿವುಡ್ ಮಂದಿ ಹುಬ್ಬೇರಿಸುವಂತೆ ಮಾಡಿದೆ. 


ಸಂಬಂಧಿತ ಟ್ಯಾಗ್ಗಳು

#Serial #Gama Pailwan #Salman Khan #Sohel Khan


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ