ಇನ್ನು ಐಟಿ ರಿರ್ಟನ್ಸ್ ಗೆ ಆಧಾರ ಕಡ್ಡಾಯ

Aadhar Card is Mandatory For IT Returns

06-02-2019

ಮಹತ್ವದ ಬೆಳವಣಿಗೆಯೊಂದರಲ್ಲಿ ಆದಾಯ ತೆರಿಗೆ ರಿಟನ್ರ್ಸ ಸಲ್ಲಿಸಲು ಪಾನ್ ಜೊತೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಎಂದು ಸರ್ವೋಚ್ಛ ನ್ಯಾಯಾಲಯ ಆದೇಶಿಸಿದೆ. ಇದರಿಂದ ಮತ್ತೊಮ್ಮೆ ದೇಶದಲ್ಲಿ ಆಧಾರ ಕಾರ್ಡ್ ಮಹತ್ವ ಪಡೆದುಕೊಂಡಂತಾಗಿದೆ. 
ಐಟಿ ರಿಟನ್ರ್ಸ ಸಲ್ಲಿಕೆಗೆ ಆಧಾರ ಕಡ್ಡಾಯವಲ್ಲ ಎಂದು ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‍ಗೆ ಅರ್ಜಿಯೊಂದು ಸಲ್ಲಿಕೆಯಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ  ನ್ಯಾಯಮೂರ್ತಿಗಳಾದ  ಎಕೆ ಸಿಕ್ರಿ ಹಾಗೂ ಎಸ್ ಅಬ್ದುಲ್ ನಾಜೀರ್ ಅವರನ್ನೊಳಗೊಂಡ ಸುಪ್ರೀಂ ಪೀಠ ಐಟಿ ರಿರ್ಟನ್ಸ್ ಪಾವತಿ ಮಾಡಲು 2018 ಮತ್ತು 19 ಸಾಲಿಗೆ ಆಧಾರ ಕಡ್ಡಾಯ ಎಂದಿದೆ. 
ದೇಶದಲ್ಲಿ ಈಗಾಗಲೆ ಪಾನ್ ಕಡೆಯಲು ಆಧಾರ ಕಡ್ಡಾಯ ಮಾಡಲಾಗಿದ್ದು, ಸಧ್ಯ ಎಲ್ಲಾ ಆದಾಯ ತೆರಿಗೆ ಪಾವತಿ ಮಾಡುವವರು ಆಧಾರ್ ಸಂಖ್ಯೆ ಲಿಂಕ್ ಮಾಡುವುದು ಕಡ್ಡಾಯ ಎಂದು ನ್ಯಾಯಾಲಯ ಹೇಳಿದೆ. ಇನ್ನು ಆಧಾರ್ ಕಾರ್ಡನ್ನು  ಪಾನ್ ಕಾರ್ಡಿಗೆ ಲಿಂಕ್ ಮಾಡಲು 2019 ಮಾರ್ಚ್ 31 ರವರೆಗೂ ಸಮಯಾವಕಾಶ ನೀಡಿದೆ. 


ಸಂಬಂಧಿತ ಟ್ಯಾಗ್ಗಳು

#Aadhar Card # IT Returns # Mandatory #Supreem Court


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ